Advertisement

28ರವರೆಗೆ ಸಿಲ್ಕ್ ಇಂಡಿಯಾ ಪ್ರದರ್ಶನ

12:24 AM Jul 23, 2019 | Lakshmi GovindaRaj |

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಜು.28ರವರೆಗೆ ನ್ಯೂ ಕ್ರಾಫ್ಟ್ಸ್ “ಸಿಲ್ಕ್ ಇಂಡಿಯಾ-2019′ ಕಾಟನ್‌, ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಪ್ರದರ್ಶನ ಆಯೋಜಿಸಿದೆ. ಜೆ.ಪಿ. ನಗರ ಮೊದಲ ಹಂತ ರಿಂಗ್‌ ರಸ್ತೆಯ (ಮೆಟ್ರೋ ನಿಲ್ದಾಣ ಹಿಂಭಾಗ) ಸಿಂಧೂರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಜು.19ರಿಂದ ಆರಂಭವಾಗಿರುವ ಕರಕುಶಲ ಮೇಳವನ್ನು ಓಎ ಮತ್ತು ಸಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10ರಿಂದ ಸಂಜೆ 8.30ವರೆಗೆ ನಡೆಯುವ ಪ್ರದರ್ಶನ, ಮಾರಾಟ ಮೇಳದಲ್ಲಿ ಯತ್ನಿಕ್‌ ಹಾಗೂ ಸಾಂಪ್ರದಾಯಿಕ ರೇಷ್ಮೆ ಮತ್ತು ಅರಳೆ ಹ್ಯಾಂಡೂಮ್‌ ಉತ್ಪನ್ನಗಳ ಬೃಹತ್‌ ಸಂಗ್ರಹವಿದೆ.

Advertisement

ಮಾರಾಟದಲ್ಲಿ ಒಡಿಶಾ ಸಂಬಲ್‌ಪುರಿ ಇಕ್ಕತ್‌ ಸಿಲ್ಕ್ ಸೀರೆಗಳು, ಬಿಹಾರದ ಆರ್ಗಾನಿಕ್‌ ಟಸ್ಸರ್‌ ಸಿಲ್ಕ್, ಕರ್ನಾಟಕದ ಕ್ರೇಪ್‌ ಸಿಲ್ಕ್, ಜಾರ್ಜೆಟ್‌ ಸಿಲ್ಕ್, ಆರಣಿ ಸಿಲ್ಕ್ ಮತ್ತು ಪ್ರಿಂಟೆಡ್‌ ಸೀರೆಗಳು, ತಮಿಳುನಾಡಿನ ಕಾಂಜೀವರಂ ಮತ್ತು ಡಿಸೈನರ್‌ ಫ್ಯಾನ್ಸಿ ಸೀರೆಗಳು, ಆಂಧ್ರ ಪ್ರದೇಶದ ಧರ್ಮಾವರಂ, ಉಪ್ಪಡ, ಗಡ್ವಾಲ್‌, ಮಂಗಳಗಿರಿ ಮತ್ತು ಪೋಚಂಪಲ್ಲಿ ಸೀರೆಗಳು, ಉತ್ತರ ಪ್ರದೇಶದ ಮಲಬರಿ ಸಿಲ್ಕ್, ಜಾಂದಾನಿ, ಜಾಮಾವರ್‌ ಸಿಲ್ಕ್ ಸೀರೆಗಳು ಮತ್ತು ಶಿಫಾನ್‌ ಸೀರೆಗಳು, ಮಹಾರಾಷ್ಟ್ರ ಡಿಸೈನರ್‌ ಡ್ರೆಸ್‌ ಮೆಟಿರೀಯಲ್‌, ಛತೀಸ್‌ಗಡದ ರಾ ಸಿಲ್ಕ್, ಕೊಸಾ ಸಿಲ್ಕ್, ಟಸ್ಸರ್‌ ಸೂಟ್‌ ಮತ್ತು ದುಪ್ಪಟ್ಟಾ, ಮಧ್ಯಪ್ರದೇಶದ ಮಹೇಶ್ವರಿ,

ಚಂದೇರಿ ಸಿಲ್ಕ್ ಸೀರೆಗಳು ಹಾಗೂ ಸೂಟ್‌, ಪಶ್ಚಿಮ ಬಂಗಾಳದ ಬಲುಚಾರಿ, ಢಾಕಾ ಮಸ್ಲಿ, ಗಿಚಾ ಸ್ಯಾರೀಸ್‌, ಬೊಟಿಕ್‌ ಸ್ಯಾರೀಸ್‌, ಕಾಂತಾ ಸ್ಯಾರೀಸ್‌, ಜೊರೊಶಿ ಜಮ್ಮು-ಕಾಶ್ಮೀರದ ಚಿನನ್‌ ಸಿಲ್ಕ್, ಟಾಡಿ ಸಿಲ್ಕ್ ಪ್ರಿಂಟೆಂಡ್‌ ಸ್ಯಾರೀಸ್‌, ಪಾಶ್ಮಿನಾ ಶಾಲ್ಸ್‌ ಮತ್ತು ಸೂಟ್‌ ರಾಜಸ್ತಾನದ ಕೋಟಾ ಸಿಲ್ಕ್, ಹ್ಯಾಂಡ್‌ ಬ್ಲಾಕ್‌ ಪ್ರಿಂಟ್‌ ಡ್ರೆಸ್‌ ಮತ್ತು ಸ್ಯಾರೀಸ್‌, ಪಂಜಾಬ್‌ನ ಫಲ್ಕರಿ ಡ್ರೆಸ್‌ ಮತ್ತು ಇನ್ನಿತರೆ ಉತ್ಪನ್ನಗಳು ದೊರೆಯಲಿವೆ. ಮೇಳದಲ್ಲಿ ದೇಶಾದ್ಯಂತ 100ಕ್ಕೂ ಅಧಿಕ ವೀವರ್ ಪಾಲ್ಗೊಂಡಿರುವುದು ವಿಶೇಷ ಎಂದು ಆಯೋಜಕರು ತಿಳಿಸಿದ್ದಾರೆ. ವಿವರಗಳಿಗೆ 09742085198 ಸಂಪರ್ಕಿಸಿ.

Advertisement

Udayavani is now on Telegram. Click here to join our channel and stay updated with the latest news.

Next