Advertisement

ಅನ್ಯಾಯವನ್ನು ತಪ್ಪಿಸಿ ಶಾಶ್ವತ ನೆಲೆ ಕಲ್ಪಿಸುವಂತೆ ಬಸವನಪೇಟೆ ಜನರ ಮನವಿ

07:12 PM Jan 19, 2022 | Team Udayavani |

ಕುರುಗೋಡು : ಸಮೀಪದ ಸಿರಿಗೇರಿ ಗ್ರಾಮದ ಬಸವನ ಪೇಟೆಯಯಲ್ಲಿ ವಾಸ ಮಾಡುತ್ತಿರುವ 130 ಕುಟುಂಬಗಳಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಿ ಶಾಶ್ವತ ನೆಲೆ ಕಲ್ಪಿಸುವಂತೆ ಗ್ರಾಪಂ ಕಾರ್ಯದರ್ಶಿ ವೀರೇಶ್ ಅವರಿಗೆ ಸ್ಥಳೀಯರು ಮನವಿ ಪತ್ರ ಸಲ್ಲಿಸಿದರು.

Advertisement

ಇದೆ ವೇಳೆ ವಾರ್ಡಿನ ಗ್ರಾಮಸ್ಥರು ಮಾತನಾಡಿ, ಸಿರಿಗೇರಿ ಗ್ರಾಮದ ಒಂದನೇ ವಾರ್ಡಿನ ಬಸವಪೇಟೆಯಲ್ಲಿ ಸುಮಾರು ಮೂವತ್ತು ವರ್ಷಕ್ಕೂ ಹೆಚ್ಚುಕಾಲ ವಾಸವಾಗಿರುವ ಸುಮಾರು 130 ಜನರು ತಮ್ಮ ವೃತ್ತಿಯಿಂದ ಕೂಲಿಯನ್ನೇ ಅವಲಂಬಿಸಿ ವಾಸಮಾಡುತ್ತಿದ್ದಾರೆ.

ಇವರುಗಳು ವಾಸಮಾಡುತ್ತಿರುವ ಜಾಗದಲ್ಲಿ ಸ್ಥಳೀಯ ಗ್ರಾಮ ಆಡಳಿತವು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಆಶ್ರಯ ಮನೆ, ವೈಯಕ್ತಿಕ ಶೌಚಾಲಯ, ಕುಡಿಯುವ ನೀರು,ವಿದ್ಯುತ್ ಸಂಪರ್ಕ,ಮಣ್ಣಿನ ರಸ್ತೆ ಈ ಜಾಗವನ್ನು ಭೋವಿ ಜನಾಂಗದ ದಿವಂಗತ ಸಣ್ಣಹುಲುಗಪ್ಪ ಮತ್ತು ಧರ್ಮಪತ್ನಿ ತಿಮ್ಮಕ್ಕ ಒಪ್ಪಂದವನ್ನು ಮಾಡಿಸಿಕೊಂಡಿದ್ದಾರೆ. ಆದರೆ ಈ ಜಾಗ ನೋಂದಣಿಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಇಲ್ಲಿ ವಾಸಿಸುವ ಜನರು ಮನೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದ ಒಂದು ವೇಳೆ ಈ ಜನ ತಮ್ಮ ಮನೆಗಳನ್ನು ತೆರವುಗೊಳಿಸಿದರೆ ಇಲ್ಲಿರುವ ಕುಟುಂಬದ ಮಕ್ಕಳು, ವೃದ್ಧರು, ಬೀದಿಪಾಲಾಗುವ ಸಂಭವವಿದೆ. ಆದಕಾರಣ ಸಂಬಂದಿಸಿದ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ತೀರ್ಮಾನ ಕೈಗೊಳ್ಳಬೇಕು ಜೊತೆಗೆ ನೊಂದ ಕುಟುಂಬಗಳಿಗೆ ಆಶ್ರಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ವಾರ್ಡಿನ ಗ್ರಾಮಸ್ಥರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next