Advertisement
ಪ್ರಶಾಂತವಾದ ಸ್ಥಳಪ್ರಶಾಂತವಾದ ವಾತಾವರಣವಿರುವ ಕಡೆ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಇದರಿಂದ “ಎಫೆಕ್ಟು ರೀಡಿಂಗ್’ ಸಾಧ್ಯ. ಗದ್ದಲಗಳು ಅಥವಾ ಗಮನವನ್ನು ವಿಕೇಂದ್ರಿತಗೊಳಿಸುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರ ಇರುವುದು ಒಳಿತು. ಇದರಿಂದ ಆಧ್ಯಯನಗೊಳಿಸಿದ ಅಂಶಗಳು ಪುಸ್ತಕದಿಂದ ಮಸ್ತಕಕ್ಕೆ ಪರಿಣಾಮಕಾರಿಯಾಗಿ ತಲುಪಲು ಸಾಧ್ಯ.
ಅಭ್ಯಸಿಸುವ ಕೊಠಡಿಗಳು ಸ್ವತ್ಛವಾಗಿರಬೇಕು. ಸ್ವಚ್ಛತೆಯಿಂದ ಮನಸ್ಸು ಅರಳಲು ಸಾಧ್ಯ. ಪರಿಣಾಮಕಾರಿ ಓದು ಅಥವಾ ಅಭ್ಯಾಸಕ್ಕೆ ಅಂತರಾಳದ ಶುದ್ಧತೆಯ ಜತೆಗೆ ಬಹಿರಂಗ ಶುಚಿ ತ್ವವೂ ಅಷ್ಟೇ ಮುಖ್ಯ. ಕೊಠಡಿಗಳನ್ನು ಸ್ವತ್ಛವಾಗಿರಿಸಿ, ಪುಸ್ತಕವನ್ನು ಸರಿಯಾಗಿ ಜೋಡಿಸಿ ಕೊಠಡಿಯನ್ನು ಅಧ್ಯಯನಕ್ಕೆ ಪೂರಕವಾಗಿರಿಸಬೇಕು. ಇದರಿಂದ ಓದು ಸುಲಭವಾಗಲಿದೆ. ಬಿಡುವಿನಲ್ಲಿ ಸಂಗೀತ ಆಲಿಸಿ
ನಮ್ಮಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕೇಳಿಸಿಕೊಳ್ಳದೆ ಓದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಶುದ್ಧ ತಪ್ಪು ಕಲ್ಪನೆ. ಸಂಗೀತದ ಜತೆಗೆ ಕೆಲಸ ಮಾಡಲು ಸಾಧ್ಯ. ಆದರೆ ಓದು ಸಾಧ್ಯವೇ ಇಲ್ಲ. ಅತ್ತ ಸಂಗೀತವನ್ನು ಆಸ್ವಾಧಿಸದೆ ಇತ್ತ ಓದನ್ನು ಅರ್ಥ ಮಾಡಿಕೊಳ್ಳಲಾಗದ ಕ್ಲಿಷ್ಟ ಪರಿಸ್ಥಿತಿ ಇದು. ಮನಸ್ಸನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ. ಓದಿನ ನಡುವೆ ಬಿಡುವು ಮಾಡಿ ಕೊಂಡು ಸಂಗೀತ ಕೇಳುವುದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು, ಸ್ನೇಹಿತರೊಂದಿಗೆ ಒಂದಷ್ಟು ಸಮಯ ವ್ಯಯಿಸುವುದರಿಂದ ಓದಿನಿಂದ ಉಂಟಾದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು.
Related Articles
ಬಹಳಷ್ಟು ವಿದ್ಯಾರ್ಥಿಗಳು ಮಲಗಿಕೊಂಡು ಓದಲು ಇಷ್ಟಪಡುತ್ತಾರೆ. ಇದರಿಂದ ಪುಸ್ತಕದ ಪುಟವನ್ನು ತಿರುವಿ ಹಾಕಬಹುದೇ ಹೊರತು ಏಕಾಗ್ರತೆ ಮೂಡಲು ಸಾಧ್ಯವೇ ಇಲ್ಲ. ದೇಹಕ್ಕೆ ಆರಾಮ ಅಥವಾ ಹಿತಕರವಾದ ವಾತವಾರಣ ಲಭಿಸಿದ ಕೂಡಲೇ ನಿದ್ದೆಗೆ ಮನಸ್ಸು ಹರಿಯುತ್ತದೆ. ಇದರಿಂದ ಮಲಗಿಕೊಂಡು ಓದುವ ಕಲೆ ಕರಗತವಾಗಿದ್ದರೂ ಪರೀಕ್ಷೆ ಸಿದ್ಧತೆ ವೇಳೆ
ಇದು ಅಪಾಯಕಾರಿ.
Advertisement
ಆಹಾರ ಸೇವನೆಯ ಜತೆಗೆ ಓದು ಬೇಡ ಕೆಲವರಿಗೆ ಓದುತ್ತಾ ತಿಂಡಿ ತಿನ್ನುವ ಅಭ್ಯಾಸವಿರುತ್ತದೆ. ಪರೀಕ್ಷೆ ಸಮಯದಲ್ಲಿ ಇದನ್ನು ದೂರ ಇರಿಸುವುದೇ ಒಳಿತು. ಆಹಾರವನ್ನು ಸೇವಿಸುತ್ತಾ ಓದುವ ಅಭ್ಯಾಸ ಆರೋಗ್ಯಕ್ಕೂ ಒಳ್ಳೆಯದಲ್ಲ. ಚಾಟ್ಸ್, ಸ್ವೀಟ್ಸ್, ಕಾಫಿ, ಟೀ ಸೇವನೆ ಜತೆಗೆ ಓದುವುದರಿಂದ ಆಹಾರ ಸರಿಯಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ ಮತ್ತು ಓದು ಪೂರ್ಣವಾಗು ವುದೂ ಇಲ್ಲ. ಅಗತ್ಯವಿದ್ದರೆ ಜತೆಗೆ ನೀರನ್ನು ಇಟ್ಟುಕೊಳ್ಳಿ. ನೀರನ್ನು ಸೇವಿಸುವುದರಿಂದ ಓದಿಗೆ ಪೂರಕವಾದ ವಾತಾವರಣ ದೇಹದಲ್ಲಿ ರೂಪುಗೊಳ್ಳುತ್ತದೆ ಎಂಬುದು ಸಂಶೋಧನೆಗಳಿಂದಲೂ ದೃಢಪಟ್ಟಿವೆ.
ದೃಶ್ಯಕಾವ್ಯ