Advertisement
ಎಷ್ಟಾದರೂ ನನ್ನಮ್ಮ ಅವಳು. ನನ್ನನ್ನು ಇಷ್ಟು ವರ್ಷ ಕಷ್ಟಪಟ್ಟು ಸಾಕಿ ಬೆಳೆಸಿ ಮದುವೆ ಮಾಡಿಸಿದಳು. ಮೊಮ್ಮಗನ ಆಗಮನವಾದಾಗ ಸಂತೋಷದಿಂದ ಕಣ್ತುಂಬಿಕೊಂಡಳು. ಆದರೆ ಯಾಕೋ ಈಗೀಗ ಯಾವುದೂ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಿದ್ದಾಳೆ. ಒಂದೊಂದು ಬಾರಿ ಅತಿಯಾದ ಪ್ರೀತಿ ತೋರಿಸುವವಳು ಕೆಲವೊಂದು ಬಾರಿ ಒಗಟಿನಂತೆ ವರ್ತಿಸುತ್ತಾಳೆ. ಇನ್ನು ಕೆಲವೊಮ್ಮೆ ತುಂಬಾ ಸಿಟ್ಟು ತೋರಿಸುತ್ತಾಳೆ… ಇದರಿಂದ ಯಾವುದು ಸರಿ, ಯಾವುದು ತಪ್ಪು ಎನ್ನುವುದೇ ಅರ್ಥವಾಗದೆ ನನ್ನ ಮನದೊಳಗೆ ಯುದ್ಧವಾಗುತ್ತಿರುತ್ತದೆ.
Related Articles
Advertisement
ಮನೆ ಎಂಬ ನಾಲ್ಕು ಗೋಡೆಯೊಳಗೆ ನಡೆಯುವ ಯುದ್ಧ ನಮ್ಮ ಮನಸ್ಸಿನೊಳಗೆ ಇರುತ್ತದೆ. ಆದರೆ ಎಷ್ಟೋ ಬಾರಿ ಅದು ನಾವು ಸರಿಯಾಗಿ ಪರಿಸ್ಥಿತಿ ನಿಭಾಯಿಸದೇ ಇರುವ ಪರಿಣಾಮವೇ ಆಗಿರುತ್ತದೆ. ಪರಸ್ಪರ ಹೊಂದಿಕೊಂಡು, ಕೆಲಸಗಳನ್ನು ಹಂಚಿಕೊಂಡು ಮಾಡಿದರೆ ಎಲ್ಲರ ಬದುಕು ಸುಲುಭವಾಗುತ್ತದೆ. ಜೀವನ ಸರಳವಾಗಿರುತ್ತದೆ. ಎಷ್ಟೋ ಬಾರಿ ನಮ್ಮ ನಿರ್ಧಾರಗಳಿಂದ ಇದನ್ನು ನಾವು ಮೌನದಲ್ಲೂ ಇರುತ್ತೆ ನೂರೆಂಟು ಮಾತು ದುಸ್ತರ ಮಾಡಿಕೊಂಡಿರುತ್ತವೆ. ಆದರೆ ಒಬ್ಬರನ್ನೊಬ್ಬರು ಅರಿತು ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳಿದರೆ ಮನೆ, ಮನದೊಳಗೆ ಸಂತೋಷ ತುಂಬಲು ಸಾಧ್ಯವಾಗುತ್ತದೆ.
ಎಷ್ಟೋ ಬಾರಿ ನಾವು ನಮ್ಮ ಕಷ್ಟಗಳನ್ನಷ್ಟೇ ನೋಡುತ್ತೇವೆ. ಇನ್ನೊಬ್ಬರ ಬದುಕಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಪರಿಣಾಮ ಜೀವನದಲ್ಲಿ ಹೆಚ್ಚು ದುಃಖಿಗಳಾಗಿ ಕೊರುಗುತ್ತಿರುತ್ತೇವೆ. ಇದರಿಂದ ಯಾವುದೇ ಫಲ ಸಿಗದೇ ಇದ್ದರೂ ಮನಸ್ಸು ಹಗುರ ಮಾಡಿಕೊಳ್ಳಬಹುದು ಅಷ್ಟೆ. ಸುಮ್ಮನೆ ಜಗಳ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಎಲ್ಲರ ದೃಷ್ಟಿಕೋನವನ್ನು ಅರಿಯುವ ಪ್ರಯತ್ನ ಮಾಡಬೇಕು. ಆಗ ಇನ್ನೊಬ್ಬರ ಮೌನದ ಮಾತುಗಳೂ ನಮಗೆ ಅರ್ಥವಾಗುವುದು. ಬದುಕು ಸುಲಭವಾಗುವುದು.