Advertisement
ವಿದ್ಯಾರ್ಥಿಗಳು ಮೃತಪಟ್ಟ ಬೆನ್ನಲ್ಲೇ ಉಳಿದ ಮಕ್ಕಳನ್ನು ಪಾಲಕರು ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಪೊಲೀಸರು ಮೊದಲು ವಸತಿ ನಿಲಯದ ವಾರ್ಡನ್ ಬಸವರಾಜ ಬೆಳವಾಡ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು ಆ ಬೆನ್ನಲ್ಲೇ ಜೆಸ್ಕಾಂ ಅಧಿಕಾರಿ ನಾಗರತ್ನ ಅವರನ್ನು ಬಂಧಿಸಲಾಗಿತ್ತು. ಆದರೆ ಈ ಆರೋಪಿಗಳಿಗೆ ರವಿವಾರ ರಾತ್ರಿ ವೇಳೆಗೆ ಕೋರ್ಟ್‌ನಿಂದ ಜಾಮೀನು ದೊರೆತಿದೆ. ಇನ್ನೂ ಕಟ್ಟಡ ಮಾಲಿಕ ಬಸವನಗೌಡ ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮಾಲಿಕ ಬಂಧನವಾಗುತ್ತಿದ್ದಂತೆ ಜಾಮೀನು ದೊರೆತಿದ್ದು, ಅಚ್ಚರಿ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಜಾಮೀನು ದೊರೆತಿದೆ. ಇನ್ನೂ ಹಾಸ್ಟೆಲ್ನಲ್ಲಿ ನಡೆದ ಅವಘಡದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರಜೆ ನೀಡಲಾಗಿದೆ. ವಿದ್ಯಾರ್ಥಿಗಳು ಇಲ್ಲದೇ ಹಾಸ್ಟೆಲ್ನಲ್ಲಿ ನೀರವ ಮೌನ ಆವರಿಸಿದೆ. ಕೆಲವು ವಿದ್ಯಾರ್ಥಿಗಳಂತೂ ಐವರು ವಿದ್ಯಾರ್ಥಿಗಳ ಸಾವಿನ ಸನ್ನಿವೇಶವನ್ನು ಕಣ್ಣಾರೆ ಕಂಡು ಹಾಸ್ಟೆಲ್ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೆದರಿಕೆಯಿಂದಲೇ ನಮಗೆ ಹಾಸ್ಟೆಲ್ಗೆ ತೆರಳಲು ಭಯವಾಗುತ್ತಿದೆ ಎನ್ನುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡೆದರೂ ಹಾಸ್ಟೆಲ್ ಮುಂಭಾಗದಲ್ಲಿರುವ ವಿದ್ಯುತ್ ತಂತಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕಾರ್ಯ ನಡೆಯದೇ ಇರುವುದು ಶೋಚನೀಯ ಸಂಗತಿ. Advertisement
ವಸತಿ ನಿಲಯದಲ್ಲಿ ನೀರವ ಮೌನ
01:24 PM Aug 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.