Advertisement

Sikkim avalanche ;ಹಿಮ ದುರಂತದಲ್ಲಿ 7 ಮಂದಿ ಮೃತ್ಯು : ಮುಂದುವರಿದ ರಕ್ಷಣಾ ಕಾರ್ಯ

02:04 PM Apr 05, 2023 | Team Udayavani |

ಗ್ಯಾಂಗ್‌ಟಾಕ್‌: ಸಿಕ್ಕಿಂನ ಜವಾಹರ್ ಲಾಲ್ ನೆಹರು ಮಾರ್ಗದ 15 ನೇ ಮೈಲ್ ಬಳಿ ಎರಡನೇ ದಿನವಾದ ಬುಧವಾರವೂ ಭಾರತೀಯ ಸೇನೆ, ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಮತ್ತು ಪೊಲೀಸರು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಏಳು ಮಂದಿಯನ್ನು ಬಲಿತೆಗೆದುಕೊಂಡ ಭಾರೀ ಹಿಮಪಾತದಲ್ಲಿ ಹೆಚ್ಚಿನ ಪ್ರವಾಸಿಗರು ಸಿಕ್ಕಿಬಿದ್ದಿದ್ದಾರೆ ಎಂದು ಜನರು ಮತ್ತು ಅಧಿಕಾರಿಗಳು ಹೇಳಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ಪೂರ್ವ ಸಿಕ್ಕಿಂನ ನಾಥು ಲಾ ಪ್ರದೇಶದಲ್ಲಿ ಭಾರೀ ಹಿಮಕುಸಿತ ಸಂಭವಿಸಿದ್ದು, ಅವರ ವಾಹನಗಳು ಹಿಮದಡಿಯಲ್ಲಿ ಹೂತುಹೋಗಿದ್ದರಿಂದ ಏಳು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ. 11.30 ರ ಸುಮಾರಿಗೆ ರಾಜ್ಯದ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ನಾಥು ಲಾಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ಮಾರ್ಗದಲ್ಲಿ ಸಂಭವಿಸಿದ ಹಿಮಪಾತವಾಗಿ ಹಿಮದಡಿಯಲ್ಲಿ ಸುಮಾರು 30 ಜನರೊಂದಿಗೆ ಐದರಿಂದ ಆರು ವಾಹನಗಳು ಸಿಕ್ಕಿಹಾಕಿಕೊಂಡಿದ್ದವು.

ಪೂರ್ವ ಸಿಕ್ಕಿಂ ಜಿಲ್ಲಾಧಿಕಾರಿ ತುಷಾರ್ ನಿಖಾನೆ “15 ನೇ ಮೈಲ್ ಬಳಿ ಯಾವುದೇ ಪ್ರವಾಸಿಗರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆಯೇ ಎಂದು ತಿಳಿದುಕೊಳ್ಳಲು ನಾವು ಬೆಳಗ್ಗೆ 8 ರಿಂದ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ ಮತ್ತು ಕಾರ್ಯಾಚರಣೆಗಳು ಮುಗಿದ ನಂತರ ವಿವರಗಳನ್ನು ಹಂಚಿಕೊಳ್ಳಲಾಗುವುದು ” ಎಂದು ದೂರವಾಣಿಯಲ್ಲಿ ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next