Advertisement

ಜನಸಂಖ್ಯೆ ಏರಿಸಲು ಸಿಕ್ಕಿಂ ಹರಸಾಹಸ! ;ಗರ್ಭಿಣಿಯರಿಗೆ ವರ್ಷಪೂರ್ತಿ ಹೆರಿಗೆ ರಜೆ

11:29 PM Jan 19, 2023 | Team Udayavani |

ಸಿಕ್ಕಿಂ: ಭಾರತವೀಗ ಚೀನವನ್ನೇ ಜನಸಂಖ್ಯೆಯಲ್ಲಿ ಹಿಂದಿಕ್ಕಿ ಮುಂದೋಡುವ ನಿರೀಕ್ಷೆಯಲ್ಲಿದೆ. ಇನ್ನೊಂದು ಕಡೆ ತನ್ನ ಜನಸಂಖ್ಯೆ ಕುಸಿಯುತ್ತಿದೆ ಎಂದು ಚೀನ ದಿಗಿಲಾಗಿದೆ. ಈ ಹೊತ್ತಿನಲ್ಲಿ ಭಾರತದ ಸಣ್ಣ ರಾಜ್ಯ ಸಿಕ್ಕಿಂಗೆ ತನ್ನ ಜನಸಂಖ್ಯೆಯೂ ಕುಸಿಯುತ್ತಿದೆ ಎಂಬ ಆತಂಕ ಎದುರಾಗಿದೆ.

Advertisement

ಶೇ.80ರಷ್ಟು ಸ್ಥಳೀಯರಿಂದಲೇ ತುಂಬಿಕೊಂಡಿರುವ ಸಿಕ್ಕಿಂನಲ್ಲಿ ಜನನ ಪ್ರಮಾಣ ಗಣನೀಯವಾಗಿ ಕುಸಿದಿದೆ! ಒಂದು ವೇಳೆ ಜನರೇ ಇಲ್ಲವಾದರೆ ಈ ರಾಜ್ಯದ ವಿಶೇಷ ಸಂಸ್ಕೃತಿಯೇ ಇಲ್ಲವಾಗುತ್ತದೆ ಎಂದು ಸಿಕ್ಕಿಂ ಕಳವಳಕ್ಕೊಳಗಾಗಿದೆ. ಆದ್ದರಿಂದ ಜನಸಂಖ್ಯೆ ಏರಿಸುವುದರತ್ತ ಗಮನ ಹರಿಸಿದೆ. ವಿಚಿತ್ರವೆಂದರೆ ಇನ್ನೊಂದು ಕಡೆ ಇಡೀ ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸುವುದು ಹೇಗೆಂಬ ಚಿಂತೆಯಿದೆ! ಪ್ರಸ್ತುತ ಸಿಕ್ಕಿಂ ಜನಸಂಖ್ಯೆ 7 ಲಕ್ಷ.

ಇಲ್ಲಿನ ಜನನಪ್ರಮಾಣ ಭಾರತದಲ್ಲೇ ಕಡಿಮೆಯಿದೆ. ಆದ್ದರಿಂದ ಒಬ್ಬ ಹೆಣ್ಣು 3 ಮಕ್ಕಳನ್ನು ಹೊಂದಬೇಕು ಎನ್ನುವುದು ಸರಕಾರದ ಬಯಕೆ. ಅದಕ್ಕಾಗಿ ಗರ್ಭಿಣಿಯರಿಗೆ ವರ್ಷಪೂರ್ತಿ ಹೆರಿಗೆ ರಜೆ, ಅಪ್ಪಂದಿರಿಗೆ ತಿಂಗಳು ಪೂರ್ಣ ಪಿತೃತ್ವ ರಜೆ ನೀಡಲಾಗುತ್ತದೆ. ಇನ್ನು ಭ್ರೂಣವನ್ನು ಗರ್ಭದಲ್ಲಿಟ್ಟು ಬೆಳೆಸುವುದಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ಇಂತಹ ಕ್ರಮ ತೆಗೆದುಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಸಿಕ್ಕಿಂನದ್ದು!

Advertisement

Udayavani is now on Telegram. Click here to join our channel and stay updated with the latest news.

Next