ನವದೆಹಲಿ: ಸೀಟು ಹಂಚಿಕೆ ಒಪ್ಪಂದದ ಪ್ರಕ್ರಿಯೆ ಆದ್ಯತೆಯ ಮೇರೆಗೆ ಸಿಕ್ಕಿಂ ನ ಆಡಳಿತಾ ರೂಢ ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ( ಸೋಮವಾರ (ಮಾರ್ಚ್ 25) ಎಲ್ಲಾ 32 ವಿಧಾನಸಭಾ ಕ್ಷೇತ್ರಗಳ ಹಾಗೂ ಒಂದು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಇದನ್ನೂ ಓದಿ:ಚುನಾವಣೆಗೆ ಸಮಯ ನೀಡಿದ್ದು ವಿಶ್ವಗುರು ದೇಶದಲ್ಲಿ ಭಾಷಣ ಮಾಡಲು: ಸಂತೋಷ್ ಲಾಡ್ ವಾಗ್ದಾಳಿ
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ ಸಂಸದೀಯ ಮಂಡಳಿಯು, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರನ್ನು ಸೊರೆಂಗ್-ಚಕುಂಗ್ ಮತ್ತು ರೆನಾಕ್ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ ಅವರ ಪತ್ನಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಚಾಮ್ಲಿಂಗ್ ವಿರುದ್ಧ ಸ್ಪರ್ಧೆಗೆ ಅಣಿಯಾಗಿದ್ದಾರೆ.
ಪ್ರೇಮ್ ಕುಮಾರ್ ತಮಾಂಗ್ ಎರಡು ಬಾರಿ ಸಿಎಂ ಆಗಿ ಕಾರ್ಯನಿರ್ವಹಿಸಿದ್ದು, ಪತ್ನಿ ಕೃಷ್ಣಾ ಕುಮಾರಿ ರಾಯ್ ಅವರು ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ ನ ಅಧ್ಯಕ್ಷ ಪವನ್ ಕುಮಾರ್ ಚಾಮ್ಲಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಹಾಲಿ ಒಂಬತ್ತು ಸಚಿವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದು, ಇಬ್ಬರನ್ನು ಕೈಬಿಡಲಾಗಿದೆ ಎಂದು ವರದಿ ತಿಳಿಸಿದೆ. ಮುಖ್ಯಮಂತ್ರಿ ಪ್ರೇಮ್ ಕುಮಾರ್ ಪುತ್ರ ಆದಿತ್ಯ ಸೇರಿದಂತೆ 32 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಭಾರತೀಯ ಜನತಾ ಪಕ್ಷ ತೊರೆದ ಮೂವರಿಗೆ ಟಿಕೆಟ್ ನೀಡಿದೆ. ರಾಜ್ ಕುಮಾರಿ ಥಾಪಾ, ಸೋನಮ್ ವೆಂಚುಂಗ್ಪ್ರಾ ಮತ್ತು ಪಿನ್ ಸ್ಟೋ ನಮ್ಗ್ಯಾಲ್ ಲೆಪ್ಚಾ ಅವರಿಗೆ ಟಿಕೆಟ್ ನೀಡಿರುವುದಾಗಿ ವರದಿ ವಿವರಿಸಿದೆ. ಮುಖ್ಯಮಂತ್ರಿ ಪ್ರೇಮ್ ಕುಮಾರ್ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ.