Advertisement

ಆಸ್ಟ್ರೇಲಿಯ: ಸಿಕ್ಖ ವ್ಯಕ್ತಿಯ ಕೃಪಾಣ ತೆಗೆಸಿ ಬಸ್ಸಿಂದಿಳಿಸಿದ ಪೊಲೀಸ್

12:13 PM Jul 26, 2017 | Team Udayavani |

ಮೆಲ್ಬೋರ್ನ್: ಧಾರ್ಮಿಕ ಚಿಹ್ನೆಯಾಗಿರುವ ಕೃಪಾಣವನ್ನು ಹೊಂದಿದ್ದ  ಇಪ್ಪತ್ತರ ಹರೆಯದ ಸಿಕ್ಖ ವ್ಯಕ್ತಿಯೋರ್ವನನ್ನು  ಕೃಪಾಣ ತೆಗೆಯುವಂತೆ ಮತ್ತು ತಾನು ಪ್ರಯಾಣಿಸುತ್ತಿದ್ದ ಬಸ್ಸಿನಿಂದ ಇಳಿದು ಹೋಗುವಂತೆ ಬಲವಂತ ಪಡಿಸಲಾದ ಘಟನೆ ಇಲ್ಲಿ ನಡೆದಿದೆ.

Advertisement

ಸಿಕ್ಖ ಪ್ರಯಾಣಿಕನ ಬಳಿ ಇದ್ದ  ಚಿಕ್ಕ  ಕತ್ತಿಯಂತೆ ಕಾಣುವ ಕೃಪಾಣವನ್ನು ಕಂಡು ಭೀತನಾದ ಸಹ ಪ್ರಯಾಣಿಕನೋರ್ವ ಕೂಡಲೇ ಪೊಲೀಸರಿಗೆ ಫೋನ್‌ ಮಾಡಿದ.

ಪರಿಣಾಮವಾಗಿ ಬಸ್ಸಿನೊಳಗೆ ಧಾವಿಸಿ ಬಂದ ಪೊಲೀಸರು, ಆ ಸಿಕ್ಖ ವ್ಯಕ್ತಿಗೆ ಕೃಷಾಣವನ್ನು ತೆಗೆಯುವಂತೆ ಮತ್ತು ಬಸ್ಸಿನಿಂದ ಕೆಳಗಿಳಿಯುವಂತೆ ಬಲವಂತಪಡಿಸಿದರು. ಈ ಘಟನೆ ನಿನ್ನೆ ಮಂಗಳವಾರ ಆಕ್ಲಂಡ್‌ನ‌ಲ್ಲಿ ನಡೆಯಿತು. 

ಸಿಕ್ಖ ಧರ್ಮದಲ್ಲಿ  ಸಿಕ್ಖರಿಗೆ ಐದು ಪವಿತ್ರ ಚಿಹ್ನೆಗಳನ್ನು ಹೊಂದುವುದು ಕಡ್ಡಾಯವಿದ್ದು ಅವುಗಳಲ್ಲಿ ಕೃಪಾಣವೂ ಒಂದಾಗಿದೆ.  ಆಸ್ಟ್ರೇಲಿಯದಲ್ಲಿ 72,000ಕ್ಕೂ ಅಧಿಕ ಸಿಕ್ಖರಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next