Advertisement

Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್‌ ಡೆಲಿವರಿ ಬಾಯ್‌ ಸಾವು

10:45 AM Nov 04, 2024 | Team Udayavani |

ಬೆಂಗಳೂರು: ಕಾರು ಡಿಕ್ಕಿ ಹೊಡೆದು ಫ‌ುಡ್‌ ಡೆಲಿವರಿ ಬಾಯ್‌ ಮೃತಪಟ್ಟಿರುವ ಘಟನೆ ಬಸವನಗುಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಚಾಮರಾಜಪೇಟೆ ನಿವಾಸಿ ಮಂಜುನಾಥ್‌(26) ಮೃತರು. ಕೃತ್ಯ ಎಸಗಿದ ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನ.2ರಂದು ರಾತ್ರಿ 10 ಗಂಟೆಗೆ ಬಸವನಗುಡಿಯ ಎಂ.ವಿ.ಸೀತಾರಾಮಯ್ಯ ರಸ್ತೆಯಲ್ಲಿ ದುರ್ಘ‌ಟನೆ ನಡೆದಿದೆ.

ಪುಡ್‌ಡೆಲಿವರಿ ಬಾಯ್‌ ಆಗಿದ್ದ ಮಂಜುನಾಥ್‌, ನ.2ರಂದು ರಾತ್ರಿ 10ರ ಸುಮಾರಿಗೆ ಕೆ.ಜಿ.ನಗರದಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಬರಲು ಚಾಮರಾಜ ಪೇಟೆಯ ಮನೆಯಿಂದ ಹೋಗುತ್ತಿದ್ದರು. ಮಾರ್ಗ ಮಧ್ಯೆ ಎಂ.ವಿ.ಸೀತಾರಾಮಯ್ಯ ರಸ್ತೆಯಲ್ಲಿ ಅತಿ ವೇಗವಾಗಿ ಬಂದ ಕಾರು ಚಾಲಕ, ಮಂಜುನಾಥ್‌ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮಂಜುನಾಥ್‌ ವಾಹನ ಸಮೇತ ಕೆಳಗೆ ಬಿದ್ದು, 2 ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಸಾರ್ವಜನಿ ಕರು ಮಂಜುನಾಥ್‌ ಅವರ ಕೋರಿಕೆ ಮೇರೆಗೆ ಸಂಬಂಧಿ ತೇಜಸ್ವಿನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಬಳಿಕ ಸಾರ್ವಜನಿಕರೇ ಸಮೀಪದ ಆಸ್ಪತ್ರೆಗೆ ದಾಖಲಿ ಸಿದ್ದರು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿ ದ್ದಾರೆ. ಘಟನೆ ಸಂಬಂಧ ಮಂಜುನಾಥ್‌ ಸಹೋದರ ಪುನೀತ್‌ ದೂರು ನೀಡಿದ್ದು, ಪರಾರಿಯಾಗಿರುವ ಕೆಎ 05 – ಎಂ.ಎನ್‌.1401 ಕಾರಿನ ಚಾಲಕನಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಸವನಗುಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next