Advertisement

ಸೈಮಾ ಅವಾರ್ಡ್ಸ್ ಗೆ ಕನ್ನಡದ 3 ಚಿತ್ರಗಳು ನಾಮಿನೇಟ್‌: ಪ್ರಮುಖ ನಾಮಿನೇಟ್‌ ಪಟ್ಟಿ ಇಲ್ಲಿದೆ

04:30 PM Aug 17, 2022 | Team Udayavani |

ಬೆಂಗಳೂರು: ದಕ್ಷಿಣ ಭಾರತದ ಪ್ರತಿಷ್ಠಿತ ʼಸೈಮಾ ಆವಾರ್ಡ್ಸ್ 2021ʼ ನೇ ಸಾಲಿನ ನಾಮಿನೇಷನ್‌ ಪಟ್ಟಿ ಹೊರ ಬಿದ್ದಿದೆ. ಸೌತ್‌ ಸಿನಿರಂಗದ ಹಲವು ಸಿನಿಮಾಗಳು ವಿವಿಧ ವಿಭಾಗದಲ್ಲಿ ನಾಮನಿರ್ದೇಶನಗೊಂಡಿವೆ.

Advertisement

ದಕ್ಷಿಣ ಭಾರತದ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಎಂದರೆ ಸೈಮಾ ಅವಾರ್ಡ್ಸ್‌ ಈ ಬಾರಿ 10 ನೇ ವರ್ಷದ ಸಮಾರಂಭದ ಸಂಭ್ರಮದಲ್ಲಿದೆ.

ನಾಮಿನೇಟ್‌ ಆದ ಪ್ರಮುಖ ಕನ್ನಡ ಚಿತ್ರಗಳು :

ಯುವರತ್ನ: ಸಂತೋಷ್‌ ಆನಂದರಾಮ್‌ ನಿರ್ದೇಶನದ, ಪವರ್‌ ಸ್ಟಾರ್‌ ಪುನೀತ್‌ ನಟನೆಯ ಯುವರತ್ನ ಚಿತ್ರ ಪ್ರತಿಷ್ಠಿತ ಸೈಮಾ ಅವಾರ್ಡ್ಸ್‌ ನಲ್ಲಿ 7 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ರಾಬರ್ಟ್:  ತರುಣ್‌ ಸುಧೀರ್‌ ನಿರ್ದೇಶನದ ʼರಾಬರ್ಟ್‌ʼ ನಲ್ಲಿ ದರ್ಶನ್‌, ವಿನೋದ್‌ ಪ್ರಭಾಕರ್‌ ಮೋಡಿ ಮಾಡಿದ್ದರು. ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಕಮಾಲ್‌ ಮಾಡಿತ್ತು. ಈ ಚಿತ್ರ 2021 ರ ಸಾಲಿನ ಸೈಮಾ ಅವಾರ್ಡ್ಸ್‌ ನಲ್ಲಿ ಚಿತ್ರ 10 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

Advertisement

ಗರುಡ ಗಮನ ವೃಷಭ ವಾಹನ: ಲೋ ಬಜೆಟ್‌ ನಲ್ಲಿ ಸ್ಥಳೀಯ ಕಥೆಯನ್ನಿಟ್ಟುಕೊಂಡು ತೆರೆಗೆ ಬಂದ ರಾಜ್‌ .ಬಿ ಶೆಟ್ಟಿಯವರ  ʼಗರುಡ ಗಮನ ವೃಷಭ ವಾಹನʼ ಪ್ರತಿಷ್ಠಿತ ಸೈಮಾದಲ್ಲಿ 8 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ನಾಮಿನೇಟ್‌ ಆದ ಪ್ರಮುಖ ತೆಲುಗು ಚಿತ್ರಗಳು : 2021 ರಲ್ಲಿ ಬಂದ ಅಲ್ಲು ಅರ್ಜುನ್‌ ಅವರ ಮಾಸ್‌ ಮಸಾಲ ʼಪುಷ್ಪಾʼ ಬರೋಬ್ಬರಿ 12 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಇದರೊಂದಿಗೆ ಬಾಲಯ್ಯ ಅವರ ʼಅಖಂಡʼ ಸಿನಿಮಾ 10 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ʼಜಾತಿ ರತ್ನಲುʼ 8 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ʼಉಪ್ಪೇನʼ ಚಿತ್ರವೂ ಸೈಮಾದಲ್ಲಿ 8 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ನಾಮಿನೇಟ್‌ ಆದ ಪ್ರಮುಖ ತಮಿಳು ಚಿತ್ರಗಳು :  ಧನುಷ್‌ ನಟನೆಯ ವಿಭಿನ್ನ ಕಥೆಯುಳ್ಳ ʼಕರ್ಣನ್‌ʼ ಚಿತ್ರ 10 ವಿಭಾಗದಲ್ಲಿ ನಾಮಿನೇಟ್‌ ಆಗಿದೆ. ಇದರೊಂದಿಗೆ ʼಡಾಕ್ಟರ್‌ʼ 9 ವಿಭಾಗದಲ್ಲಿ ನಾಮಿನೇಟ್‌ ಆಗಿದ್ದು, ವಿಜಯ್‌ ಅವರ ʼಮಾಸ್ಟರ್‌ʼ 7 ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಇನ್ನು ಕಂಗನಾ ರಣಾವತ್‌ ಅವರ ʼತಲೈವಿʼ 7 ವಿಭಾಗದಲ್ಲಿ ನಾಮಿನೇಟ್‌ ಆಗಿದೆ.

ನಾಮಿನೇಟ್‌ ಆದ ಪ್ರಮುಖ ಮಲಯಾಳಂ ಚಿತ್ರಗಳು : 

ಇನ್ನು ಮಲಯಾಳಂ ಚಿತ್ರಗಳನ್ನು ಗಮನಿಸಿದ್ರೆ, ಫಹಾದ್‌ ಪಾಸಿಲ್‌ ಅವರ ʼಜೋಜಿʼ( 6 ನಾಮಿನೇಟ್) ದುಲ್ಖರ್‌ ಅವರ ʼಕುರುಪ್‌ʼ(8 ನಾಮಿನೇಟ್)‌, ಮಲ್ಲಿಕ್‌  (6 ನಾಮಿನೇಟ್)‌, ಮಿನ್ನಲ್​ ಮುರಳಿ (10 ನಾಮಿನೇಟ್)‌

ಸೈಮಾ ಅವಾರ್ಡ್‌ ಗೆ ನೀವೂ ಕೂಡ ನಿಮ್ಮ ಮೆಚ್ಚಿನ ಚಿತ್ರಗಳಿಗೆ ಓಟ್ ಮಾಡಬಹುದು. ಸೈಮಾ ವೆಬ್‌ ಸೈಟ್‌ ಅಥವಾ ಫೇಸ್‌ ಬುಕ್‌ ಪೇಜ್ ಗೆ ಹೋಗಿ ಓಟ್‌ ಹಾಕಬಹುದು.‌ ಈ ಬಾರಿ ಸೈಮಾ ಅವಾರ್ಡ್ಸ್‌ 10ನೇ ವರ್ಷದ ಸಂಭ್ರಮದಲ್ಲಿದ್ದು, ಬೆಂಗಳೂರಿನಲ್ಲಿ ಸೆಪ್ಟೆಂಬರ್‌ 10,11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

 

SIIMA, the most popular awards show in South India announces its nominations for 2021 | Kannada #GarudaGamanaVrishabhaVahana #Roberrt and #Yuvarathnaa are leading the SIIMA Nominations for 2021 in Kannada.

.
.
.
.#10YearsOfSIIMA #SIIMA #SIIMA2021Nominations #SIIMA2022 pic.twitter.com/JHW8J6HUyi

— SIIMA (@siima) August 17, 2022

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next