Advertisement

ನವಿಲಿನ ವಂಶವಾಹಿ ನಕಲು : IISER ವಿಜ್ಞಾನಿಗಳ ಮಹತ್ವದ ಸಂಶೋಧನೆ

07:32 PM Apr 22, 2020 | Karthik A |

ಭೋಪಾಲ್‌ : ನವಿಲುಗಳ ಆಕರ್ಷಕವಾದ ಹಾಗೂ ಉದ್ದವಾದ ಗರಿಗಳು, ರೋಗ ರಹಿತವಾದ ಸುದೀರ್ಘ‌ ಜೀವನ ಪ್ರಾಣಿ ಪ್ರಿಯರಿಗೆ ಅಚ್ಚರಿಯ ಸಂಗತಿಯಾಗಿಯೇ ಉಳಿದಿತ್ತು. ಇದೀಗ ಮೊದಲ ಬಾರಿಗೆ ಭೋಪಾಲದ IISER ವಿಜ್ಞಾನಿಗಳು, ನವಿಲುಗಳ ವಂಶವಾಹಿಗಳನ್ನು ಅನಾವರಣಗೊಳಿಸಿದ್ದಾರೆ.

Advertisement

ಈ ಪ್ರಭೇದದ ಪಕ್ಷಿಗಳ ಬೆಳವಣಿಗೆ, ಅಂಗರಚನೆ ಹಾಗೂ ವಿಕಾಸದ ಬಗ್ಗೆ ಅತ್ಯಂತ ಮಹತ್ವದ ಮಾಹಿತಿ ಈ ವಂಶವಾಹಿಯಿಂದ ಲಭ್ಯವಾಗಿದೆ. ಈ ಅಧ್ಯಯನಕ್ಕಾಗಿ ಭೋಪಾಲದ ವನವಿಹಾರ ನ್ಯಾಶನಲ್‌ ಪಾರ್ಕ್‌ ನಲ್ಲಿರುವ ನವಿಲುಗಳಿಂದ ರಕ್ತದ ಮಾದರಿ ತೆಗೆದುಕೊಳ್ಳಲಾಗಿತ್ತು. ಈ ಅಧ್ಯಯನದಲ್ಲಿ ಒಟ್ಟು ವಂಶವಾಹಿ ವಿವರವೇ 153.7 ಜಿಬಿ ದತ್ತಾಂಶದಷ್ಟಾಗಿದೆ. 15,970 ವಂಶವಾಹಿಗಳನ್ನು ವಿಜ್ಞಾನಿಗಳು ನವಿಲಿನಲ್ಲಿ ಪತ್ತೆ ಮಾಡಿದ್ದಾರೆ. ಇನ್ನೊಂದೆಡೆ ಮಾನವರಲ್ಲಿ 20 ಸಾವಿರ ವಂಶವಾಹಿಗಳಿದ್ದು, ತಲಾ ವಂಶವಾಹಿಯು 3.2 ಜಿಬಿ ಡೇಟಾ ಹೊಂದಿರುತ್ತದೆ.

ವಂಶವಾಹಿಗಳನ್ನು ಅನಾವರಣಗೊಳಿಸಿದ ನಂತರ, ಇದೇ ಪ್ರಭೇದದ ಕೋಳಿ, ಟರ್ಕಿ, ಬಾತುಕೋಳಿ ಸೇರಿದಂತೆ ಐದು ಪಕ್ಷಿಗಳ ವಂಶವಾಹಿಯೊಂದಿಗೆ ಹೋಲಿಕೆ ಮಾಡ ಲಾಯಿತು. ಅಲ್ಲದೆ ಕೋಳಿಗಳಿಗೆ ಅತ್ಯಂತ ಸಮೀಪದ ಸಂಬಂಧಿ ನವಿಲು ಎಂಬುದು ತಿಳಿದುಬಂತು. 4.50 ಲಕ್ಷ ವರ್ಷಗಳ ಹಿಂದೆ ನವಿಲುಗಳ ಸಂಖ್ಯೆಯಲ್ಲಿ ಹಠಾತ್‌ ಇಳಿಕೆಯಾಗಿರುವುದು ತಿಳಿದುಬಂತು. ಇತರ ಪಕ್ಷಿಗಳಿಗಿಂತ ಸುಮಾರು 99 ವಂಶವಾಹಿಗಳು ನವಿಲಿಗೆ ಅನುಕೂಲಕರವಾಗಿವೆ ಮತ್ತು ಇವು ವಿಶಿಷ್ಟವೂ ಆಗಿವೆ ಎಂದು IISER ಜೈವಿಕ ವಿಜ್ಞಾನ ವಿಭಾಗದ ಪ್ರೊ| ವಿನೀತ್‌ ಶರ್ಮಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next