ಕಂಡಿದೆ. ಬೆಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆ ಹೊಂದುವುದರೊಂದಿಗೆ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಉತ್ತಮ ಸಾಧನೆಯೊಂದಿಗೆ ಶೇ.25ರಷ್ಟು ಬೆಡ್‌ಗಳಿಗೆ ವೆಂಟಿಲೇಟರ್ ಹೊಂದಿರುವ ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಜಿಲ್ಲಾಸ್ಪತ್ರೆ ಎಂಬ ಖ್ಯಾತಿಗೆ ಜಿಮ್ಸ್ ಪಾತ್ರವಾಗಿದೆ.
Advertisement
ಕಣ್ಣಿಗೆ ಕಾಣದ ವೈರಸ್ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ವೈದ್ಯರು ಹಾಗೂ ಜಿಲ್ಲಾಡಳಿತ ಈಗಾಗಲೇ ಮೇಲುಗೈ ಸಾಧಿಸಿದೆ. ವಿವಿಧ ಸೌಲಭ್ಯಗಳ ಕೊರತೆ ಮಧ್ಯೆಯೂ ಮೊದಲನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆನಂತರ ಆಕ್ಸಿಜನ್ ಸಂಗ್ರಹಗಾರ, ಹೆಚ್ಚುವರಿ ಬೆಡ್ ಹಾಗೂ ವೆಂಟಿಲೇಟರ್‌ಗಳ ವ್ಯವಸ್ಥೆಯೊಂದಿಗೆ ಎರಡನೇ ಅಲೆಯನ್ನು ಸಮರೋಪಾದಿಯಲ್ಲಿ ಎದುರಿಸಲಾಗಿದೆ. ವೈದ್ಯರು ಗುಣಮಟ್ಟದಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಿದ್ದರು. ಇದೀಗ ತಜ್ಞರು ಕೋವಿಡ್ 3ನೇ ಅಲೆ ಸಂಭವಿಸುವ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ. 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಬಹುದು ಎನ್ನಲಾಗುತ್ತಿದ್ದು, ಸಹಜವಾಗಿಯೇ ಆತಂಕ
ಸೃಷ್ಟಿಸಿದೆ.
Related Articles
ನರಗುಂದ ಸೇರಿದಂತೆ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 50 ಆಕ್ಸಿಜನ್ ಬೆಡ್ ಒದಗಿಸಲಾಗಿದೆ. ರೋಣ, ಮುಂಡರಗಿ, ಶಿರಹಟ್ಟಿ ಮತ್ತು ನರಗುಂದ ತಾಲೂಕಿನಲ್ಲಿ ತಲಾ 10 ಬೆಡ್‌ಗಳ ಮಕ್ಕಳ ವಾರ್ಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಮ್ಸ್ ನಲ್ಲಿ 33 ಬೆಡ್‌ನಲ್ಲಿ ಮಕ್ಕಳ ವಾರ್ಡ್ ವ್ಯವಸ್ಥೆ ಮಾಡಿದ್ದು, ಹೆಚ್ಚಿನ ಪ್ರಕರಣಗಳು ಕಂಡು ಬಂದಲ್ಲಿ 100 ಬೆಡ್‌ಗಳನ್ನಾಗಿ ಪರಿವರ್ತಿಸಬಹುದಾಗಿದೆ. ಹೊಸದಾಗಿ 12 ಪೆಡಿಯಾಟ್ರಿಕ್ ವೆಂಟಿಲೇಟರ್‌ಗಳು ಬಂದಿವೆ.
Advertisement
ಮೊದಲಿಗಿಂತ ಈಗ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣ ಮತ್ತಿತರೆ ಸೌಲಭ್ಯಗಳನ್ನು ದ್ವಿಗುಣಗೊಳಿಸಲಾಗಿದೆ. ಸರ್ಕಾರ ಮತ್ತು ವಿವಿಧ ದಾನಿಗಳು ಸುಮಾರು 100ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸ್ಂಟ್ರೇಟರ್ ಮತ್ತು ತೆಲಂಗಾಣದ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಮೂಲತಃರೋಣ ತಾಲೂಕಿನ ಸಜ್ಜನ್ ಹಾಗೂ ಮತ್ತಿತರೆ ದಾನಿಗಳಿಂದ ನೂರಾರು ಜಂಬೋ ಸಿಲಿಂಡರ್‌ಗಳು ದೇಣಿಗೆ ರೂಪದಲ್ಲಿ ಬಂದಿದ್ದು, ಜಿಲ್ಲೆಯ
ವೈದ್ಯಕೀಯ ಸೇವೆಗಳಿಗೆ ಮತ್ತಷ್ಟು ಬಲ ತುಂಬಿವೆ. ಆಕ್ಸಿಜನ್ ಉತ್ಪಾದನೆಗೆ ಒತ್ತು: ಕೋವಿಡ್ 2ನೇ ಅಲೆಯಲ್ಲಿ ವೆಂಟಿಲೇಟರ್ ಬೆಡ್‌ಗಳು ಸಿಗದೇ ಪ್ರಾಣ ಕಳೆದುಕೊಂಡವರ ಸಂಖ್ಯೆ ಲೆಕ್ಕವಿಲ್ಲ. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ವಿಶೇಷ ಪ್ರಯತ್ನದಿಂದ ಸರ್ಕಾರ ಮತ್ತು ಖಾಸಗಿ ಕಂಪನಿಗಳ ಸಹಯೋಗದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗುತ್ತಿವೆ. ಜಿಮ್ಸ್ ಆಸ್ಪತ್ರೆಯಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ 20 ಕೆಎಲ್ ಆಮ್ಲಜನರ
ಸಂಗ್ರಾಹಾಗಾರ ಹಾಗೂ ಸಿಎಸ್‌ಆರ್ ಯೋಜನೆಯಡಿ 500 ಎಂಪಿಎಲ್ ಮತ್ತು ಪಿಎಂ ಕೇರ್ ಯೋಜನೆಯಡಿ ಜಿಮ್ಸ್‌ನಲ್ಲಿ 1000 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾಧನಾ ಘಟಕ ಸ್ಥಾಪಿಸಲಾಗುತ್ತಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ನರಗುಂದ ತಾಲೂಕು ಆಸ್ಪತ್ರೆಯಲ್ಲಿ 390 ಎಂಪಿಎಲ್, ಗದಗ ಮಹಿಳೆ ಮತ್ತು ಮಗು ಆಸ್ಪತ್ರೆ, ಮುಂಡರಗಿಯಲ್ಲಿ ತಲಾ 500 ಎಲ್ ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿವೆ. 3 ಲಕ್ಷ ಮಕ್ಕಳ ಆರೋಗ್ಯ ತಪಾಸಣೆ: ಕೋವಿಡ್ 3ನೇ ಅಲೆಗೆ ಸಂಬಂಧಿ ಸಿದಂತೆ ಯಾವ್ಯಾವ ರೀತಿಯಲ್ಲಿ ಮುಂಜಾಗ್ರತೆ ತೆಗೆದುಕೊಳ್ಳಬೇಕು
ಎನ್ನುವ ಬಗ್ಗೆ ಎಲ್ಲ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯಾ ಧಿಕಾರಿಗಳು, ನರ್ಸ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಜ್ಞರಿಂದ ಎರಡು ಬಾರಿ ತರಬೇತಿ ನೀಡಲಾಗಿದೆ. ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಹಯೋಗದಲ್ಲಿ 18 ವರ್ಷದೊಳಗಿನವರ ಆರೋಗ್ಯ ತಪಾಸಣೆಗೆ ಚಾಲನೆ ನೀಡಲಾಗಿದೆ. ಮುಂದಿನ 3 ವಾರಗಳಲ್ಲಿ ಜಿಲ್ಲೆಯಲ್ಲಿರುವ ಒಟ್ಟು 3 ಲಕ್ಷ ಮಕ್ಕಳನ್ನು ವೈದ್ಯಕೀಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 3ನೇ ಅಲೆ ನಿಯಂತ್ರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ|ಸತೀಶ ಬಸರಿಗಿಡದ ಮಾಹಿತಿ ನೀಡಿದರು. ಅಪೌಷ್ಟಿಕ ಮಕ್ಕಳಿಗಾಗಿ ವಿಶೇಷ ಶಿಬಿರ:
ತಜ್ಞರ ಅಭಿಪ್ರಾಯದಂತೆ ಸಂಭವನೀಯ ಮೂರನೇ ಅಲೆ ಮಕ್ಕಳಿಗೆ ಬಾ ಧಿಸುವ ಭೀತಿ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆ ಯಲ್ಲಿರುವ 243 ತೀವ್ರ ಅಪೌಷ್ಟಿಕ ಮಕ್ಕಳ ಸುಧಾರಣೆಗಾಗಿ 14 ದಿನಗಳ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿದೆ. ಜತೆಗೆ 3 ಲಕ್ಷ ರೂ.ವೆಚ್ಚದಲ್ಲಿ ಎಲ್ಲ ಮಕ್ಕಳಿಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಇನು#ಯೆಂಜಾ ಲಸಿಕೆ ನೀಡಲಾಗಿದೆ. ಜತೆಗೆ ಅಂತಹ ಮಕ್ಕಳ ಮೇಲೆ ಅಧಿಕಾರಿ ಗಳು ನಿರಂತರ ನಿಗಾ ವಹಿಸಿದ್ದಾರೆ. ಕೋವಿಡ್ 1 ಮತ್ತು 2ನೇ ಅಲೆಗಿಂತ ಈಗ ವೈದ್ಯಕೀಯ ಸೌಲಭ್ಯಗಳು ಗಣನೀಯವಾಗಿ ಹೆಚ್ಚಿವೆ. ಕೋವಿಡ್‌ನಿಂದ ಚೇತರಿಸಿಕೊಂಡ ಮಕ್ಕಳ ತಪಾಸಣೆ ನಡೆಸಿದ್ದೇವೆ. ಅಪೌಷ್ಟಿಕ ಮಕ್ಕಳ ಆರೋಗ್ಯ ಸುಧಾರಣೆಗೆ ಪ್ರತಿ ತಾಲೂಕಿನಲ್ಲಿ ಎರಡು ಹಂತದಲ್ಲಿ ವಿಶೇಷ ಶಿಬಿರ ನಡೆಸಲಾಗಿದೆ. ವಿಶೇಷವಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಗೆ ಸೂಚಿಸಲಾಗಿದೆ. 40 ಎಂಬಿಬಿಎಸ್ ವೈದ್ಯರು, 6 ತಜ್ಞ ವೈದ್ಯರು ಹೊಸದಾಗಿ ನೇಮಕಗೊಂಡು ಬಂದಿದಾರೆ. ಇದೊಂದು ನಿರಂತರ ಪ್ರಕ್ರಿಯೆಯನ್ನಾಗಿ ಮುಂದುವರಿಸಲಾಗಿದೆ.
-ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ, ಗದಗ ಮೊದಲ ಅಲೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಸಾಕಷ್ಟು ಕೊರತೆ ಮಧ್ಯೆಯೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಆನಂತರ ಎರಡನೇ ಅಲೆಗೆ ತಕ್ಕಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಸದ್ಯ ಜಿಲ್ಲೆಯಲ್ಲಿ ಆತಂಕಪಡುವ ಅಗತ್ಯವಿಲ್ಲ. ಆದರೂ, 3ನೇ ಅಲೆ ನಿಯಂತ್ರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ,ಸನ್ನದ್ಧಗೊಳಿಸಲಾಗಿದೆ.
-ಡಾ|ಸತೀಶ ಬಸರಿಗಿಡದ, ಜಿಲ್ಲಾ ಆರೋಗ್ಯಾಧಿಕಾರಿ ಕೋವಿಡ್ ಚಿಕಿತ್ಸೆಯಲ್ಲಿ ಜಿಲ್ಲೆ ಗಂಭೀರವಾಗಿ ಯಾವುದೇ ಸಮಸ್ಯೆಗಳಾಗಿಲ್ಲ. ಆದರೆ, 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. 2ನೇ ಅಲೆಯಲ್ಲಿ ಮುಂಡರಗಿ, ರೋಣದಲ್ಲಿ ವೆಂಟಿಲೇಟರ್ ಸಿಗದೇ ಕೆಲವರು ಮೃತಪಟ್ಟಿರುವ ಕಹಿ ಘಟನೆಗಳುಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರ ವಹಿಸಿದರೆ ಸಾಕು.
-ಮುತ್ತಣ್ಣ ಭರಡಿ, ಸಾಮಾಜಿಕ ಕಾರ್ಯಕರ್ತ -ವೀರೇಂದ್ರ ನಾಗಲದಿನ್ನಿ