Advertisement

ಎರಡು ವಿಭಿನ್ನ ಕೋವಿಡ್ ಲಸಿಕೆ ಪಡೆದರೆ ಏನಾಗುತ್ತದೆ…ಡಾ.ವಿಕೆ ಪೌಲ್ ಹೇಳಿದ್ದೇನು?

06:52 PM May 27, 2021 | Team Udayavani |

ನವದೆಹಲಿ: ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವ ನಿಟ್ಟಿನಲ್ಲಿ ಮೊದಲು ಯಾವ ಕೋವಿಡ್ (ಕೋವಿಶೀಲ್ಡ್/ಕೋವ್ಯಾಕ್ಸಿನ್) ಲಸಿಕೆಯನ್ನು ಪಡೆದುಕೊಂಡಿರುತ್ತೀರೋ ಎರಡನೇ ಬಾರಿಯೂ ಅದೇ ಲಸಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಹೆಚ್ಚಿನ ಗಮನಕೊಡಿ. ಒಂದು ವೇಳೆ ಜನರು ಎರಡು ಬಗೆಯ ಕೋವಿಡ್ ಲಸಿಕೆ ತೆಗೆದುಕೊಂಡರೂ ಸಹ ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಭಾರತದ ಉನ್ನತ ಕೋವಿಡ್ 19 ಸಲಹೆಗಾರ ಡಾ.ವಿ.ಕೆ.ಪೌಲ್ ಗುರುವಾರ(ಮೇ 27) ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯಿಂದ 10 ಮಂದಿ ರಕ್ಷಣೆ

ಉತ್ತರಪ್ರದೇಶದ ಸಿದ್ದಾರ್ಥನಗರದ ಗ್ರಾಮವೊಂದರಲ್ಲಿ 20 ಮಂದಿ ಮೊದಲು ಕೋವಿಶೀಲ್ಡ್ ಲಸಿಕೆ ಪಡೆದಿದ್ದು, ನಂತರ ಮಂಗಳವಾರ ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದರು. ಇದರಿಂದಾಗಿ ಜನರಲ್ಲಿ ಅಡ್ಡಪರಿಣಾಮ ಬೀರುವ ಬಗ್ಗೆ ಭಯ ಹುಟ್ಟಿಸಿತ್ತು. ಈ ಘಟನೆ ನಂತರ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಎರಡು ವಿಭಿನ್ನ ಕೋವಿಡ್ ಲಸಿಕೆ ತೆಗೆದುಕೊಳ್ಳುವುದು ಸುರಕ್ಷಿತ. ಆದರೆ ಈಗಾಗಲೇ ಅದರ ಬಗ್ಗೆ ಆತುರಬೇಡ. ಎರಡು ಬೇರೆ, ಬೇರೆ ಲಸಿಕೆ ತೆಗೆದುಕೊಳ್ಳುವ ಬಗ್ಗೆ ಇನ್ನೂ ಪ್ರಯೋಗ ನಡೆಯುತ್ತಿದೆ ಎಂದು ಡಾ.ಪೌಲ್ ತಿಳಿಸಿದ್ದಾರೆ.

ಎರಡು ಬೇರೆ, ಬೇರೆ ಲಸಿಕೆ ಪಡೆಯುವ ಬಗ್ಗೆ ಇನ್ನೂ ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಬಗ್ಗೆ ನಾವು ಕಾಯುತ್ತಿದ್ದೇವೆ. ಆದರೂ ಒಂದು ವೇಳೆ ಬೇರೆ, ಬೇರೆ ಲಸಿಕೆ ಪಡೆದರೂ ಕೂಡಾ ಅದರಿಂದ ಕಳವಳಗೊಳ್ಳುವುದು ಬೇಡ ಎಂದು ಡಾ.ಪೌಲ್ ಸಮಜಾಯಿಷಿ ನೀಡಿದ್ದಾರೆ. ಅದರಿಂದ ಸಂಭವಿಸುವ ಅಡ್ಡ ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಯಬೇಕಾಗಿದೆ.

Advertisement

ಇದರ ಬಗ್ಗೆ ಮೇಲ್ವಿಚಾರಣೆ ನಡೆಯಬೇಕಾಗಿದೆ. ಎರಡು ವಿಭಿನ್ನ ಕೋವಿಡ್ ಲಸಿಕೆ ನೀಡುವ ಬಗ್ಗೆ ಸರ್ಕಾರದಿಂದ ಕೂಡಾ ಯಾವುದೇ ಸೂಚನೆ ನೀಡಿಲ್ಲ. ಯಾರು ಈ ತಪ್ಪನ್ನು ಎಸಗಿದ್ದಾರೋ ಅವರಿಂದ ವಿವರಣೆ ಕೇಳಿದ್ದೇನೆ. ಅಷ್ಟೇ ಅಲ್ಲ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಸಂದೀಪ್ ಚೌಧರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next