Advertisement
ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಸಲಹಾ ಸಮಿತಿ ನೇಮಕ ವಿಚಾರವಾಗಿ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಈಡಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸಿಂಗದೂರು ವಿಷಯದಲ್ಲಿ ದುರುದ್ದೇಶ ಇಟ್ಟುಕೊಂಡು ಏನಾದರೂ ಮಾಡಲು ಹೋದರೆ ನಾವು ಖಂಡಿತಾ ಸುಮ್ಮನಿರಲ್ಲ ಎಂದ ಅವರು ಸಮಾಜವನ್ನ ಕೀಳುಮಟ್ಟದಲ್ಲಿ ನೋಡುವ ಶಾಸಕರು ಹಾಗೂ ಜಿಲ್ಲಾಧಿಕಾರಿ ಮುಂದೆ ನಾವು ಸುಮ್ಮನೇ ಕೂರಲ್ಲ ಎಂದರು.
Related Articles
Advertisement
ರಾಮಪ್ಪ ಹೇಳಿದ್ದನ್ನ ಭಟ್ರು ಒಪ್ಕೊಂಡು ಹೋಗಬೇಕು. ಅದೇ ಧರ್ಮ ಎಂದ ಬೇಳೂರು ಗೋಕರ್ಣದಲ್ಲಿ ಎಷ್ಟು ಹೊಡೆದಾಟ ಬಡಿದಾಟ ಆಯ್ತು..ಆಗ ಏನಾದರೂ ಮಾಡಿದ್ರಾ….? ಕೊಲ್ಲೂರಲ್ಲೂ ಆಗಿದೆ, ಕನಕ ದಾಸರ ವಿಚಾರ ಉಡುಪಿಯಲ್ಲಿಯೂ ಆಗಿದೆ. ಹಾಗಾದ್ರೇ ಅಲ್ಲಿ ಯಾವ ಸಮಿತಿಗಳು ರಚನೆಯಾಗಿವೆ ಹೇಳಿ ನೋಡೋಣ. ನಾವು ಜಾತಿ ತರಲ್ಲ ಎಂದ ಅವರು ಹಿಂದುಳಿದ ವರ್ಗದ ದೇವಾಲಯ ನೆಲಸಮ ಮಾಡಲು ಹೊರಟಿದ್ದು ಸರಿಯಲ್ಲ ಎಂದಿದ್ದಾರೆ.
ರಾಮಪ್ಪ ಶ್ರಮ ಹಾಕಿದ ದೇವಾಲಯಕ್ಕೆ ಒಮ್ಮೆಲೆ ಸಮಿತಿ ರಚನೆ ಮಾಡ್ತೀವಿ ಅಂದರೆ ಹೇಗೆ ಸರಿಯಾಗುತ್ತೆ…? ಈಡಿಗ ಸಮುದಾಯದ ಸ್ವಯಂ ಘೋಷಿತ ಸಂಘವೆಂದು ಡಿಸಿ ನಾಲಗೆ ಹರಿಬಿಟ್ಟಿದ್ದಾರೆ. ಈ ವಿಚಾರದಲ್ಲಿ ಕ್ಷಮೆ ಕೇಳದೇ ಇದ್ದರೆ ಡಿಸಿ ಕಚೇರಿ ಮುತ್ತಿಗೆ ಹಾಕ್ತೀವಿ, ಸಿಗಂದೂರು ಉಳಿಸಿ ಎಂದು ಬೃಹತ್ ಹೋರಾಟ ಮಾಡ್ತಿವಿ, ಎಲ್ಲಾ ಜಾತಿಯವರು ಸೇರಿ 25 ಸಾವಿರ ಜನರನ್ನ ಸೇರಿಸೋ ತಾಕತ್ ನನಗೆ ಇದೆ ಎಂದು ಗುಡುಗಿದ್ದಾರೆ.