Advertisement

Shooter: ಸಿಫ್ಟ್ ಕೌರ್‌ ಶರ್ಮ- ಒಲಿಂಪಿಕ್ಸ್‌ ಗೆ 6ನೇ ಶೂಟರ್‌

11:05 PM Aug 22, 2023 | Team Udayavani |

ಬಾಕು (ಅಜರ್‌ಬೈಜಾನ್‌): ಸಿಫ್ಟ್ ಕೌರ್‌ ಶರ್ಮ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ 6ನೇ ಶೂಟರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನ ವನಿತೆಯರ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ ಅವರು 5ನೇ ಸ್ಥಾನ ಪಡೆದು ಒಲಿಂಪಿಕ್ಸ್‌ಗೆ ಆಯ್ಕೆಯಾದರು.

Advertisement

ಇದಕ್ಕೂ ಮುನ್ನ ಮೆಹುಲಿ ಘೋಷ್‌ ಮತ್ತು ಅಖೀಲ್‌ ಶೆರಾನ್‌ ಇದೇ ಕೂಟದ “ರೈಫ‌ಲ್‌ ಶೂಟಿಂಗ್‌’ ವಿಭಾಗದಿಂದಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.
21 ವರ್ಷದ ಸಿಫ್ಟ್ ಕೌರ್‌ ಶರ್ಮ ಅರ್ಹತಾ ಸುತ್ತಿನಲ್ಲೂ 5ನೇ ಸ್ಥಾನಿಯಾಗಿದ್ದರು. ಅಲ್ಲಿ ಪಡೆದ ಅಂಕ 589.

ಪದಕ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. 4 ಚಿನ್ನ ಹಾಗೂ 3 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಚೀನ ಅಗ್ರಸ್ಥಾನದಲ್ಲಿದ್ದರೆ (8 ಚಿನ್ನ, 5 ಬೆಳ್ಳಿ, 3 ಕಂಚು), ಅಮೆರಿಕ ದ್ವಿತೀಯ ಸ್ಥಾನಿಯಾಗಿದೆ (4 ಚಿನ್ನ, 1 ಬೆಳ್ಳಿ, 1 ಕಂಚು).

Advertisement

Udayavani is now on Telegram. Click here to join our channel and stay updated with the latest news.

Next