Advertisement

ಕೂಲಿ ಪಾವತಿಗೆ ಒತ್ತಾಯಿಸಿ ಗ್ರಾಪಂಗೆ ಮುತ್ತಿಗೆ

03:05 PM Jan 28, 2020 | Suhan S |

ಕನಕಗಿರಿ: ಕೂಲಿ ಪಾವತಿಸುವಂತೆ ಒತ್ತಾಯಿಸಿ ಕಾರ್ಮಿಕರು ಸೋಮವಾರ ಜೀರಾಳ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

Advertisement

ಕೂಲಿ ಕಾರ್ಮಿಕ ಯಮನೂರಪ್ಪ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿ 4 ತಿಂಗಳಾದರೂ ಕೂಲಿ ಹಣ ಪಾವತಿಸಿಲ್ಲ. ಕೂಲಿ ಪಾವತಿಸುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಲಿಯನ್ನು ನಂಬಿಕೊಂಡಿರುವ ಕುಟುಂಬಗಳ ಕಂಗಾಲಾಗಿವೆ. ಕೂಲಿ ಕಾರ್ಮಿಕರ ಹಣವನ್ನು ಪಾವತಿ ಮಾಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

ಮಲ್ಲಮ್ಮ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ 15 ದಿನ ಕೆಲಸ ಮಾಡಿದ್ದೇವೆ. ಆದರೆ ಹಣವನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಿಲ್ಲ. ಗ್ರಾಪಂ ಅಧಿ ಕಾರಿಗಳನ್ನು ಕೇಳಿದರೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಹಣ ಪಾವತಿಸಬೇಕೆಂದರು. ಈ ಸಂದರ್ಭದಲ್ಲಿ ರಮೇಶದಾಸ, ಲಕ್ಷ್ಮಣ, ನಾಗಮ್ಮ, ಸಿದ್ದಮ್ಮ, ರಾಮೇಶ್ವರಿ ಸೇರಿದಂತೆ ಜೀರಾಳ ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ಇದ್ದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜೀರಾಳ ಗ್ರಾಪಂನಲ್ಲಿ ನೀಡಲಾಗಿರುವ ಕೆಲಸಕ್ಕೆ ಕೂಲಿ ಪಾವತಿ ಮಾಡದೇ ಇರುವುದು ಗಮನಕ್ಕೆ ಇದೆ. ಕ್ರಿಯಾಯೋಜನೆ ಅನುಮೋದನೆಯಾಗದೇ ಕೆಲಸ ಮಾಡಿದ್ದಾರೆ. ಇದರಿಂದ ತೊಂದರೆಯಾಗಿದೆ. ಕ್ರಿಯಾ ಯೋಜನೆ ಅನುಮೋದನೆಗೆ ಜಿಪಂ ಕಳಿಸಲಾಗಿದೆ. 15 ದಿನಗಳ ಒಳಗಾಗಿ ಹಣ ಪಾವತಿಸಲಾಗುವುದು. ಚಿದಾನಂದ, ಜಿಪಂ ವಿಭಾಗ ಎಇಇ

Advertisement

Udayavani is now on Telegram. Click here to join our channel and stay updated with the latest news.

Next