Advertisement

Married; ಗೆಳತಿ ಜಾಸ್ಮಿನ್ ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ ಮಲ್ಯ

09:17 PM Jun 23, 2024 | Team Udayavani |

ಲಂಡನ್ : ಪರಾರಿಯಾಗಿರುವ ಭಾರತೀಯ ಉದ್ಯಮಿ ವಿಜಯ್ ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ಮತ್ತು ಗೆಳತಿ ಜಾಸ್ಮಿನ್ ಅಧಿಕೃತವಾಗಿ ಮದುವೆಯಾಗಿದ್ದಾರೆ. ಶನಿವಾರ ಲಂಡನ್ ಬಳಿ ನಡೆದ ಆತ್ಮೀಯ ಸಮಾರಂಭದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

Advertisement

ಮದುವೆಯ ಮೊದಲ ಫೋಟೋವನ್ನು ಜಾಸ್ಮಿನ್ ತನ್ನ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಬಿಳಿ ಮದುವೆಯ ಗೌನ್‌ನಲ್ಲಿ ಜಾಸ್ಮಿನ್ ಧರಿಸಿದ್ದು, ಸಿದ್ಧಾರ್ಥ ಮಲ್ಯ ಅವರೊಂದಿಗೆ ಕೈ ಕೈ ಹಿಡಿದು ಅವರ ಮದುವೆಯ ಬ್ಯಾಂಡ್ ಧರಿಸಿರುವುದನ್ನು ಕಾಣಬಹುದಾಗಿದೆ.

ಕಳೆದ ವರ್ಷ ಹ್ಯಾಲೋವೀನ್‌ನಲ್ಲಿ ಜೋಡಿ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ಸಮಾರಂಭದಲ್ಲಿ ವಧು-ವರರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು. ಮದುವೆಯ ಕೆಲವು ಅತಿಥಿಗಳು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇನೂ ಪರಿಚಿತವಲ್ಲದ ಜಾಸ್ಮಿನ್ ಅವರ ಇನ್ಸ್ಟಾಗ್ರಾಮ್ ಪ್ರೊಫೈಲ್ ಪ್ರಕಾರ, ಅವರು ಯುಎಸ್ ನಲ್ಲಿ ವಾಸಿಸುತ್ತಿದ್ದಾರೆ. ಸಿದ್ಧಾರ್ಥ ಮಲ್ಯ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ್ದರು. ಲಂಡನ್ ಮತ್ತು ಯುಎಇಯಲ್ಲಿ ಬೆಳೆದಿದ್ದ ಅವರು ವೆಲ್ಲಿಂಗ್ಟನ್ ಕಾಲೇಜ್ ಮತ್ತು ಲಂಡನ್ನ ಕ್ವೀನ್ ಮೇರಿ ವಿಶ್ವವಿದ್ಯಾಲಯದಲ್ಲಿ ರಾಯಲ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮಾದಲ್ಲಿ ವ್ಯಾಸಂಗ ಮಾಡಿ ಮಾಡೆಲ್ ಮತ್ತು ನಟರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಅವರು ಇತ್ತೀಚೆಗೆ “ಸದ್-ಗ್ಲಾಡ್” ಎಂಬ ಮಕ್ಕಳ ಪುಸ್ತಕವನ್ನು ಬಿಡುಗಡೆ ಮಾಡಿದ್ದರು, ಇದು ಮಕ್ಕಳಲ್ಲಿ ಬದಲಾಗುತ್ತಿರುವ ಭಾವನೆಗಳನ್ನು ಅಳವಡಿಸಿಕೊಳ್ಳುವ ಚಿತ್ರ ಪುಸ್ತಕವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next