Advertisement

ಮಾಸ್ಕ್ ಧರಿಸದೇ ವ್ಯಾಪಾರ: ಅಂಗಡಿ ಮಾಲೀಕರಿಗೆ ದಂಡ

06:50 PM Jun 05, 2020 | Naveen |

ಸಿಂಧನೂರು: ನಗರದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಹಾಗೂ ಮಾಸ್ಕ್ ಧರಿಸದೆ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಬುಧವಾರ 1000 ರೂ. ದಂಡ ವಿಧಿಸಿದರು.

Advertisement

ಈ ವೇಳೆ ಮಾತನಾಡಿದ ನಗರಸಭೆ ಪೌರಾಯುಕ್ತ ಆರ್‌.ವಿರೂಪಾಕ್ಷ ಮೂತಿ, ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಸರಿಯಾಗಿ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಹಾಗೂ ಮಾಸ್ಕ್ ಧರಿಸದೆ ವ್ಯಾಪಾರ ಮಾಡುವವರ ವಿರುದ್ಧ ದಂಡ ಹಾಕುತ್ತಿದ್ದೇವೆ. ಆಟೋದಲ್ಲಿ ಧ್ವನಿವರ್ಧಕ ಮೂಲಕ ಅರಿವು ಮೂಡಿಸುವ ಕಾರ್ಯ ದಿನನಿತ್ಯ ಮಾಡಲಾಗುತ್ತಿದೆ. ಆದರೂ ಜನ ಎಚ್ಚರಿಕೆ ವಹಿಸುತ್ತಿಲ್ಲ ಎಂದು ಹೇಳಿದರು.

ಈ ಹಿಂದೆ ಇದೇ ರೀತಿ ದಂಡ ಹಾಕಲಾಗಿತ್ತು. ಆಗ ನಗರದಲ್ಲಿ ಎಲ್ಲ ಅಂಗಡಿ ಮಾಲೀಕರಿಂದ 62,000 ರೂ. ದಂಡ ಕಟ್ಟಿಸಿಕೊಳ್ಳಲಾಗಿದೆ. ನಗರದಲ್ಲಿ ಇದೇ ರೀತಿ ಮುಂದುವರಿದರೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ನಗರಸಭೆ ಅಧಿಕಾರಿಗಳಾದ ಸಬ್ರಮಣ್ಯಂ, ಶರಣಬಸವ, ದುರುಗಪ್ಪ ಹಸಮಕಲ್‌, ಸತೀಶ, ಅಬ್ದುಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next