ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡಲ್ಲ, ರಾಜ್ಯದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧಿಸುವುದಿಲ್ಲ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಸಿದ್ದರಾಮಯ್ಯರನ್ನು ಸೋಲಿಸಲು ಅವರ ಪಕ್ಷದವರೇ ಕಾಯುತ್ತಿದ್ದಾರೆ. ಈ ಹಿಂದೆ ಡಾ| ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣರಾಗಿದ್ದರು. ಇನ್ನೂ ಕೆಲವರ ಸೋಲಿನಲ್ಲೂ ಇವರ ಪಾತ್ರ ಇದೆ. ಅದೇ ಕಾರಣದಿಂದ ಬಾದಾಮಿ ಯನ್ನು ಬಿಟ್ಟು ಬಂದಿದ್ದಾರೆ.
ಕೋಲಾರದಲ್ಲಿ ಮುನಿಯಪ್ಪರನ್ನು ಸೋಲಿಸಿದ್ದನ್ನು ಅವರ ಕಡೆಯವರು ಮರೆತಿಲ್ಲ. ಅಲ್ಲಿಯೇ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವೆ ಜಟಾಪಟಿ ಇದೆ.
ಹಾಗಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲುವುದಿಲ್ಲ. ಸಿದ್ದರಾಮಯ್ಯರನ್ನು ಸೋಲಿಸಲು ಶ್ರೀನಿವಾಸ ಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಪರಮೇಶ್ವರ್ ಅವರೇ ಸಾಕು. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂಬುದು ಸ್ವತಃ ಸಿದ್ದರಾಮಯ್ಯರಿಗೇ ಗೊತ್ತಿಲ್ಲ. ಈಗ ಇದ್ದಕ್ಕಿದ್ದಂತೆ ದೇವರು ಪ್ರತ್ಯಕ್ಷವಾಗಿ ಎರಡು ಕಡೆ ಸ್ಪ ರ್ಧಿಸುವಂತೆ ಹೇಳಿದ್ದಾರಂತೆ ಎಂದರು.
Related Articles
ಕುರುಬರನ್ನೇ ತುಳಿದಿದ್ದರು
ಸಿದ್ದರಾಮಯ್ಯ ತಾವೇ ಕುರುಬರ ನಾಯಕ ಎಂದುಕೊಂಡಿದ್ದಾರೆ. ಆದರೆ ಕುರುಬ ಸಮಾಜಕ್ಕೆ ಅವರು ನೀಡಿರುವ ಕೊಡುಗೆಯಾದರೂ ಏನು? ಕುರುಬ ಸಮಾಜದ ಇನ್ನೊಬ್ಬ ನಾಯಕರಾಗಿದ್ದ ವರ್ತೂರು ಪ್ರಕಾಶ್ ರಾಜಕೀಯದಲ್ಲಿ ಮೇಲೆ ಬರಬಾರದು ಎಂದು ಇದೇ ಸಿದ್ದರಾಮಯ್ಯ ಪ್ರಯತ್ನಿಸಿದ್ದರು. ಇದು ಕೂಡ ಮುಂದಿನ ಚುನಾವಣೆಯಲ್ಲಿ ಗಣನೆಗೆ ಬರಲಿದೆ. ಅಲ್ಲದೆ ಒಕ್ಕಲಿಗರು ಕೂಡ ಸಿದ್ದರಾಮಯ್ಯರಿಗೆ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಹೇಳಿದರು.
ತೀರ್ಪನ್ನು ಪಾಲಿಸಲಿ
ಮೀಸಲಾತಿ ಸಂಬಂಧಿಸಿ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅದನ್ನು ಬಿಟ್ಟು ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸಿದರೆ ಮೀಸಲಾತಿ ದೊರಕುತ್ತದೆ ಎಂದು ಯಾರಾದರೂ ಅಂದುಕೊಂಡರೆ ಹಾಗೇ ಮಾಡಲಿ. ನಮ್ಮದೇನೂ ಅಭ್ಯಂತರವಿಲ್ಲ. ಹೋರಾಟದಿಂದ ಮೀಸಲಾತಿ ದೊರಕುವುದಾದರೆ ಎಲ್ಲರೂ ಮಾಡುತ್ತಾರೆ ಎಂದು ಈಶ್ವರಪ್ಪ ಹೇಳಿದರು.
ಸ್ಯಾಂಟ್ರೋ ರವಿ ಮಾಡಿದ ಮುಟ್ಟಾಳ ಕೆಲಸಗಳಿಗೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ. ತನಿಖೆಯಿಂದ ಆತನ ಜತೆ ಕುಮಾರಸ್ವಾಮಿ, ಕಾಂಗ್ರೆಸ್, ಬಿಜೆಪಿ ಯಾರೇ ಇದ್ದರೂ ಹೊರ ಬರುತ್ತದೆ. ಹೆಣ್ಣು ಮಕ್ಕಳ ಮಾರಾಟದ ದಂಧೆ ಮಾಡುತ್ತಿದ್ದ ಇಂಥ ದುಷ್ಟ ಹಾಗೂ ನೀಚನನ್ನು ರಾಜ್ಯದಲ್ಲಿ ಹಿಂದೆಂದೂ ನೋಡಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.