ಕಳೆದ ಕೆಲವು ದಿನಗಳಿಂದ ಸಾಂಸ್ಕೃತಿಕ ರಾಜಧಾನಿಯಲ್ಲಿ ರಾಜಕಾರಣದ್ದೇ ಅಬ್ಬರ. ಒಂದು ಹಂತದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮೈಸೂರು ಮೇಯರ್ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟರೆ, ಇನ್ನೊಮ್ಮೆ ಮೈಮುಲ್ ವಿಚಾರದಲ್ಲಿ ಎಚ್‌ಡಿಕೆ ಅವರಿಗೆ ಸಿದ್ದು ಟಕ್ಕರ್ ಕೊಟ್ಟರು.
ರಾಜ್ಯದ ಗಮನ ಸೆಳೆದಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್ – ಉಪಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಕಾಂಗ್ರೆಸ್ ಶಾಸಕ ತನ್ವೀರ್ ಸೇs… ಬಳಸಿಕೊಂಡು ಪಾಲಿಕೆಯಲ್ಲಿ ಮತ್ತೆ ಅಧಿ ಕಾರ ಹಿಡಿಯುವಲ್ಲಿ ಸಫಲರಾಗಿದ್ದರು. ಈ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಅವರದೇ ಪಕ್ಷದ ಶಾಸಕನ ನೆರವಿನಿಂದ ಮುಖಭಂಗ ಅನುಭವಿಸು ವಂತೆ ಮಾಡಿದ್ದರು.
ಬೆನ್ನಲ್ಲೇ ನಡೆದ ಮೈಮುಲ್ ಚುನಾ ವಣೆಗೂ ಆಖಾಡಕ್ಕಿಳಿದ ಕುಮಾರ ಸ್ವಾಮಿ ತಮ್ಮ ಪಕ್ಷದ ಶಾಸಕ ಜಿ.ಟಿ. ದೇವೇಗೌಡರ ರಾಜಕೀಯ ಶಕ್ತಿ ಕುಂದಿಸಿ, ತಮ್ಮ ಆಪ್ತ ಸಾರಾ ಮಹೇಶ್‌ಗೆ ಶಕ್ತಿ ತುಂಬಲು ಹುಣಸೂರು ಭಾಗದಲ್ಲಿ ಪ್ರಚಾರ ನಡೆಸಿ ರಣತಂತ್ರ ರೂಪಿಸಿದ್ದರು. ಅಲ್ಲದೇ ಪದೇ ಪದೆ ಜಿಟಿಡಿ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಇದೇ ಸಂದರ್ಭ ಬಳಸಿಕೊಂಡ ಸಿದ್ದ ರಾಮಯ್ಯ, ಕಾಂಗ್ರೆಸ್ ಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ದ ಎಚ್‌ಡಿಕೆಗೆ ಜೆಡಿಎಸ್‌ನೊಂದಿಗೆ ಯಾವ ಹೊಂದಾಣಿಕೆ ಇಲ್ಲ ಎಂದು ಹೇಳಿಕೆ ನೀಡಿ, ಜಿಟಿಡಿ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಲು ಪರೋಕ್ಷ ಬೆಂಬಲ ನೀಡಿದ್ದರು. ಜತೆಗೆ ಬಿಜೆಪಿ ಸಹ ಜಿಟಿಡಿ ಬೆನ್ನಿಗಿದ್ದ ಕಾರಣ 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇತ್ತ ಪಾಲಿಕೆ ಮೇಯರ್ ಚುನಾ ವಣೆಯಲ್ಲಿ ಸಿದ್ದುಗೆ ಟಕ್ಕರ್ ನೀಡಿದ್ದ ಎಚ್‌ಡಿಕೆಗೆ ಅವರದ್ದೇ ಪಕ್ಷದ ಶಾಸಕರನ್ನು ಬಳಸಿ ತಿರುಗೇಟು ನೀಡಿ, ಭಾರೀ ಮುಖ ಭಂಗ ಮಾಡಿದರು ಸಿದ್ದರಾಮಯ್ಯ.
ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ವಂಚಿತವಾಗಿ ಪೇಚಿಗೆ ಸಿಲುಕಿದ್ದ ಬಿಜೆಪಿ ಸಹ ಜಿಟಿಡಿಗೆ ಸಹಕಾರ ನೀಡಿದ್ದು, ಎಚ್‌ಡಿಕೆಗೆ ಮುಖಭಂಗವಾಯಿತು.
ಇತ್ತ ಜಿಲ್ಲೆಯಲ್ಲಿ ಕಳೆದೆರೆಡು ವರ್ಷಗಳಿಂದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಸಾರಾ ಮಹೇಶ್ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಮೈಮುಲ್ ಚುನಾವಣೆ ಮೂಲಕ ಬೀದಿಗೆ ಬಂದಿದೆ.
ಸಾರಾ ಮಹೇಶ್, ಜಿಲ್ಲೆಯಲ್ಲಿ ಪಕ್ಷದ ನಿಯಂತ್ರಣ ತೆಗೆದುಕೊಳ್ಳಲು ಜಿಟಿಡಿ ಯನ್ನು ಕಡೆಗಣಿಸಿದ್ದರು. ಇದಕ್ಕೆ ಎಚ್‌ಡಿಕೆ ಬೆಂಬಲವೂ ಇದ್ದ ಕಾರಣ ಜಿಟಿಡಿ ಸಹಜ ವಾಗಿಯೇ ಪಕ್ಷದ ಎಲ್ಲ ಚಟುವಟಿಕೆ ಗಳಿಂದ ದೂರ ಉಳಿದಿದ್ದರು. ಈ ನಡುವೆ ಮೈಮುಲ್ ನಿರ್ದೇಶಕರ ಚುನಾವಣೆಗೆ ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ತಮ್ಮ ಪುತ್ರರನ್ನು ಕಣಕ್ಕಿಳಿಸಿ ಜಿಟಿಡಿ ಬಣ ದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಇದ ರಿಂದ ಅಸಮಾಧಾನಗೊಂಡ ಎಚ್‌ಡಿಕೆ, ಸಾರಾ ತಮ್ಮದೆ ಪಕ್ಷದ ಶಾಸಕನ ಪುತ್ರನ ನನ್ನು ಬೆಂಬಲಿಸದೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಒಟ್ಟಾರೆ ಪಾಲಿಕೆ- ಮೈಮುಲ್ ಚುನಾವಣೆಯಿಂದ ಜೆಡಿಎಸ್ ಒಡೆದ ಮನೆಯಂತಾಗಿದೆ.
– ಸತೀಶ್ ದೇಪುರ