Advertisement
ಶುಕ್ರವಾರ ಬನಹಟ್ಟಿಯಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು. ಅಧಿವೇಶನದಲ್ಲಿಯೂ ಆಡಳಿತ ಸರ್ಕಾರವಿದ್ದರೂ ನೇಕಾರರಿಗೆ ಅನ್ಯಾಯವಾದ ಸಂದರ್ಭದಲ್ಲಿ ನಮ್ಮದೇ ಸರಕಾರವಿದ್ದರೂ ಸರಕಾರದ ನಿರ್ಲಕ್ಷತನವನ್ನು ಖಂಡಿಸಿ ಸಭೆಯ ಗಮನ ಸೆಳೆದಿದ್ದೇನೆ. ಸಮುದಾಯಕ್ಕೆ ಅನ್ಯಾಯವಾದರೆ ಸಹಿಸೋಲ್ಲ. ಇದೀಗ ಮುಖ್ಯಮಂತ್ರಿಯವರೊಂದಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡು ಡಿಸಿಎಂ ಗೋವಿಂದ ಕಾರಜೋಳರೊಂದಿಗೆ ಮಾತುಕತೆ ಮೂಲಕ ಪ್ರತಿ ನೇಕಾರನಿಗೆ 3 ಸಾವಿರ ರೂ. ಸಹಾಯ ಧನ ಒದಗಿಸಿದ್ದೇನೆ. ಅದರೆ ಅದನ್ನು ನಾವೇ ಮಾಡಿಸಿದ್ದು ಎಂದು ಪೊಳ್ಳು ಹೇಳಿಕೆ ನೀಡುತ್ತಿರುವ ಉಮಾಶ್ರೀಯವರ ಕ್ರಮ ಖಂಡನೆ ಎಂದರು.
Related Articles
Advertisement
ಶಾಸಕರ ನಿಧಿ ಆರೋಗ್ಯ ಕ್ಷೇತ್ರಕ್ಕೆ ಮೀಸಲು : ನಮಗೆ ಬಂದಿರುವ 50 ಲಕ್ಷ ಶಾಸಕರ ನಿಧಿ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದು, ಕ್ಷೇತ್ರದಲ್ಲಿನ ರಬಕವಿ-ಬನಹಟ್ಟಿ, ಮಹಾಳಿಂಗಪೂರ, ತೇರದಾಳದಲ್ಲಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯ ಅಭಿವೃದ್ಧಿ ಪಡಿಸಲು ಹಣ ಬಳಸುವುದಾಗಿ ಶಾಸಕ ಸವದಿ ತಿಳಿಸಿದರು.
ರಬಕವಿ-ಬನಹಟ್ಟಿ ನಗರಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ನೀಚ ಹಾಗೂ ನಾಲಾಯಕ ರಾಜಕೀಯ ನಡೆಸುತ್ತಿರುವ ಕಾಂಗ್ರೆಸ್ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಪ್ರಾಮಾಣಿಕವಾಗಿ ಸಾರ್ವಜನಿಕರ ಸಹಾಯಕ್ಕೆ ಬರಲಿ ಬದಲಾಗಿ ಅಪಪ್ರಚಾರ ನಡೆಸುತ್ತಿರುವದು ನಿಜಕ್ಕೂ ಬೇಸರ ತರುವಂಥದ್ದು ಎಂದರು.
ಈ ಸಂದರ್ಭ ಶ್ರೀಶೈಲ ದಭಾಡಿ, ಸಿದ್ಧನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಅಂಬಲಿ, ಗೋವಿಂದ ಡಾಗಾ, ಸೋಮನಾಥ ಗೊಂಬಿ, ರಮೇಶ ಕೊಣ್ಣೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಪ್ರವೀಣ ಕೋಲಾರ ಇದ್ದರು.