Advertisement

ಈಗಲೂ ನಮಗೆ ಸಿದ್ದುನೇ ಸಿಎಂ!:ಇಬ್ಬರು ಸಚಿವರು,ಶಾಸಕರ ಮಾತು

01:05 AM Jan 28, 2019 | |

ಬೆಂಗಳೂರು: ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ನ ಕೆಲ ಸಚಿವರು, ಶಾಸಕರು ಹೇಳಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

Advertisement

ನಗರದಲ್ಲಿ ಕುರು ಬರ ಸಂಘದ ವತಿಯಿಂದ ನಿರ್ಮಿಸಿರುವ ನೂತನ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಪುಟ್ಟರಂಗಶೆಟ್ಟಿ,ಎಂ.ಟಿ.ಬಿ. ನಾಗರಾಜು ಹಾಗೂ ಶಾಸಕ ಎಸ್‌.ಟಿ. ಸೋಮಶೇಖರ್‌, ಸಿದ್ದರಾಮಯ್ಯ ಅವರನ್ನು ಹೊಗಳುವ ಮೂಲಕ ಸಿದ್ದು ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿ ಸಿದ್ದಾರೆ. ಕಾಗಿನೆಲೆ ಈಶ್ವರಾನಂದಪುರಿ ಸ್ವಾಮೀಜಿಕೂಡ, ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿದ್ದ ಕೆಲ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ವರಿಷ್ಠರ ಹೆಸರು ಪ್ರಸ್ತಾಪಿಸದೆ ಟೀಕಿಸಿ ಕಾಲೆಳೆದಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರ ಮಾತನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್‌ಗೆ ಟಾಂಗ್‌ ಕೂಡ ನೀಡಿದ್ದಾರೆ.

ನನಗೆ ಸಿದ್ದು ರಾಮನಿದ್ದಂತೆ

ಸಚಿವ ಎಂ.ಟಿ.ಬಿ.ನಾಗರಾಜ್‌ ಮಾತನಾಡಿ, ಹನುಮಂತನ ಎದೆ ಬಗೆದರೆ ಹೇಗೆ ರಾಮ ಕಾಣುತ್ತಾನೆಯೋ ಅದೇ ರೀತಿ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಅವರ ಬಗೆಗಿನ ನನ್ನ ಭಕ್ತಿ ಕಾಣುತ್ತದೆ. ನಾನು ಸಚಿವನಾಗಬೇಕು ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಬೇಕು ಎಂಬ ತೀರ್ಮಾನ ಕೈಗೊಂಡಿದ್ದೆ. ಭಕ್ತನ ಆಸೆಗಳು ದೇವರಿಗೆ ತಿಳಿಯುವಂತೆ, ಸಿದ್ದರಾಮಯ್ಯ ಅವರು ನನಗೆ ಸಚಿವ ಸ್ಥಾನ ಕೊಡಿಸುವ ಮೂಲಕ ನನ್ನ ಕನಸನ್ನು ನನಸು ಮಾಡಿದರು. ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹನುಮಂತನಿಗೆ ಶ್ರೀರಾಮನು ಹೇಗೋ, ಅದೇ ರೀತಿ ಸಿದ್ದರಾಮಯ್ಯ ಅವರು ನನಗೆ ಎಂದು ಹೇಳಿದರು.

Advertisement

ಬಿಡಿಎ ಅಧ್ಯಕ್ಷರಾದ ಶಾಸಕ ಎಸ್‌.ಟಿ.ಸೋಮಶೇಖರ್‌,ಕೆಲವರು ಮಗ, ಸೊಸೆಗೆ ಮಾತ್ರವೇ ರಾಜಕೀಯದಲ್ಲಿ ಅವಕಾಶ ಕೊಡಿಸುತ್ತಾರೆ. ಆದರೆ, ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಎಲ್ಲ ಸಮುದಾಯದವರಿಗೆ ರಾಜಕೀಯವಾಗಿ ಅವಕಾಶ ಕೊಡಿಸಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಕುಟುಕಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು:ಹೊಸದುರ್ಗದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಡಿ.ದೇವರಾಜ ಅರಸು ಅವರ ಬಳಿಕ ಹಿಂದುಳಿದ ವರ್ಗದವರಿಗೆ ಸಿದ್ದರಾಮಯ್ಯ ಅವರು ಸಿಕ್ಕಿದ್ದು, ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಧ್ವನಿಯಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಹಸು ತನ್ನ ಹಾಲು ತಾನು ಕುಡಿಯುವುದಿಲ್ಲ. ಅದೇ ರೀತಿ ಸಿದ್ದರಾಮಯ್ಯ ಅವರು ಸಹ ಪರೋಪಕಾರಿಯಾಗಿದ್ದು, ಅವರು ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕಿದೆ ಎಂದು ಹೇಳಿದರು.

ರಸ್ತೆಗಳು ಅಭಿವೃದ್ಧಿಯಾಗಿಲ್ಲ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ 5 ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಅಭಿವೃದಿಟಛಿಯಾಗಿದೆ.ಇನ್ನೂ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೆ ಇನ್ನಷ್ಟು ಅಭಿವೃದಿಟಛಿಯಾಗುತ್ತಿತ್ತು. ಆದರೆ, ಕೆಲವರು ಸಿದ್ದರಾಮಯ್ಯ ಅವರ ವಿರುದಟಛಿ ಒಳಸಂಚು ನಡೆಸಿ ಸೋಲುವಂತೆ ಮಾಡಿದರು. ಮೈತ್ರಿ ಸರ್ಕಾರ ರಚನೆಯಾಗಿ 7 ತಿಂಗಳು ಕಳೆದರೂ ನಗರದ ರಸ್ತೆಗಳು ಅಭಿವೃದಿಟಛಿಯಾಗಿಲ್ಲ. ಸಿದ್ದರಾಮಯ್ಯ ಅವರು ನನಗೆ ಬಿಡಿಎ ಅಧ್ಯಕ್ಷ ಸ್ಥಾನ ಕೊಡಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಮಾತನ್ನು ಯಾರೂ ತೆಗೆದು ಹಾಕುವುದಿಲ್ಲ ಎಂದು ಹೇಳುವು ಮೂಲಕ ಪರೋಕ್ಷವಾಗಿ ಸೋಮಶೇಖರ್‌ ಜೆಡಿಎಸ್‌ಗೆ ಟಾಂಗ್‌ ನೀಡಿದರು.

ನಮ್ಮ ಕಷ್ಟ ಹೇಳುವುದು ಸಿದ್ದುಗೇ

ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿ, ನಮಗೆ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದು, ನಮ್ಮ ಎಲ್ಲ ಕಷ್ಟಗಳನ್ನು ಅವರಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಿ ಆಯ್ಕೆ ಯಾಗಲು ಸಿದ್ದರಾಮಯ್ಯ ಅವರು ಕಾರಣವಾಗಿದ್ದು, ಯಾರು ಏನೇ ಹೇಳಿದರೂ ಹಿಂದುಳಿದ ವರ್ಗಗಳಿಗೆ ಹಾಗೂ ತಮಗೆ ಅವರೇ ಈಗಲೂ ಮುಖ್ಯಮಂತ್ರಿಗಳು ಎಂದು ಹೇಳಿದರು.
 

Advertisement

Udayavani is now on Telegram. Click here to join our channel and stay updated with the latest news.

Next