ಬೆಂಗಳೂರು: ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಪರ-ವಿರೋಧದ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಚುನಾವಣೆಗೂ ಮೊದಲು ಯಾರೂ ಮುಂದಿನ ಸಿಎಂ ಎಂದು ಘೋಷಿಸುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ. ಚುನಾವಣೆಯಲ್ಲಿ ಬಹುಮತ ಬಂದ ನಂತರ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ
ನಡೆಯುತ್ತದೆ ಎಂದು ಹೇಳಿದ್ದಾರೆ.
ಅವರಿಗೆ ಹಿರಿಯ ಕಾಂಗ್ರೆಸ್ಸಿಗ ಸಿ.ಕೆ.ಜಾಫರ್ ಷರೀಫ್, ಕೆ.ಎನ್.ರಾಜಣ್ಣ ಕೂಡ ಸಾಥ್ ನೀಡಿದ್ದಾರೆ. ಸಿದ್ದರಾಮಯ್ಯಗೆ ಅದೃಷ್ಟ ಇದ್ದರೆ ಐದಲ್ಲ, ಹತ್ತು ವರ್ಷ ಅವರೇ ಸಿಎಂ ಆಗಲಿ. ಆದರೆ, ಪಕ್ಷದ ತೀರ್ಮಾನಕ್ಕೂ ಮೊದಲೇ ಸಿದ್ದರಾಮಯ್ಯ
ಅವರೇ ಸಿಎಂ ಎಂದು ಹೇಳುವುದು ತಪ್ಪು. ಕಾಂಗ್ರೆಸ್‌ಗೆ ಒಂದು ಪರಂಪರೆಯಿದೆ. ಸರ್ಕಾರ ನಡೆಸೋದು ಒಂದು ಕೆಲಸ, ಪಕ್ಷ ನಡೆಸೋದು ಮತ್ತೂಂದು ಕೆಲಸ. ಚುನಾವಣೆ ಬಂದಾಗ ಜನರ ಬಳಿ ಹೋಗುವುದು ಪಕ್ಷ. ಪಕ್ಷದ
ಮುಂದಾಳತ್ವದಲ್ಲಿಯೇ ಚುನಾವಣೆ ಎದುರಿಸಬೇಕು. ಸಿದ್ದರಾಮಯ್ಯ ಪಕ್ಷಕ್ಕಿಂತ ದೊಡ್ಡವರಲ್ಲ.
ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ನಾಯಕರಾದವರು ಎಲ್ಲ ಜನಾಂಗದ ಪ್ರೀತಿ, ವಿಶ್ವಾಸ ಗಳಿಸಬೇಕೆಂದು ಹೇಳಿದ್ದಾರೆ. ಮಧುಗಿರಿ ಶಾಸಕ ರಾಜಣ್ಣ ಪ್ರತಿಕ್ರಿಯಿಸಿ, ಚುನಾವಣೆಗೂ ಮುನ್ನ ಸಿದ್ದು ಅವರೇ ಸಿಎಂ ಎನ್ನುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ. ನಾನು 1972ರಿಂದ ಕಾಂಗ್ರೆಸ್‌ನಲ್ಲಿದ್ದೇನೆ. ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡುವ ಸಂಪ್ರದಾಯ ಕಾಂಗ್ರೆಸ್ ನಲ್ಲಿಲ್ಲ. ಪಕ್ಷ ಬಹುಮತ ಪಡೆದ ಮೇಲೆ ಶಾಸಕಾಂಗ ಸಭೆ ಯಾರನ್ನು ಸಿಎಂ ಅಂತ ಹೇಳುತ್ತದೆಯೋ ಅವರು ಸಿಎಂ ಅಭ್ಯರ್ಥಿಯಾಗುತ್ತಾರೆ.
ಅಲ್ಲಿವರೆಗೂ ನಾನೂ ಸಿಎಂ ಅಂತ ಸಮಾಧಾನಕ್ಕೆ ಹೇಳಿಕೊಳ್ಳಬಹುದು ಎಂದು ವ್ಯಂಗ್ಯವಾಡಿದ್ದಾರೆ.ಆದರೆ, ಚಾಮರಾಜನಗರ ಸಂಸದ ಧ್ರುವನಾರಾಯಣ ಮಾತ್ರ ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅವರ ವಿರುದಟಛಿ ಯಾವುದೇ ಆರೋಪಗಳಿಲ್ಲ. ಅವರ ನಾಯಕತ್ವಕ್ಕೆ ಬೆಂಬಲ ದೊರೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.