Advertisement
ಗುರುವಾರ ನಟ ಸಿದ್ದಾರ್ಥ್ ಅವರಿಗೆ ಜೀವ ಬೆದರಿಕೆ ಎದುರಾಗಿತ್ತು. ನನಗೆ ರೇಪ್ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಅವರು ಟ್ವಿಟರಿನಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ತಮಿಳುನಾಡು ಪೊಲೀಸರು ಸಿದ್ದಾರ್ಥ್ ಅವರಿಗೆ ಭದ್ರತೆ ಒದಗಿಸಲು ಮುಂದಾಗಿದ್ದರು. ಆದರೆ, ಇದನ್ನು ನಯವಾಗಿಯೇ ನಿರಾಕರಿಸಿರುವ ಅವರು, ಸದ್ಯ ದೇಶದಲ್ಲಿ ಕೋವಿಡ್ ಇದೆ. ಇಂತಹ ಸಂದರ್ಭದಲ್ಲಿ ನಮ್ಮ ಪೊಲೀಸರ ಸಮಯ ಕೋವಿಡ್ ಸಂಬಂಧಿ ಕೆಲಸಗಳಿಗೆ ವಿನಿಯೋಗವಾಗಲಿ ಎಂದಿದ್ದಾರೆ.
Related Articles
Advertisement
ಈ ಕುರಿತು ಟ್ವೀಟ್ ಮಾಡಿದ್ದ ಅವರು, ತಮಿಳುನಾಡಿನ ಬಿಜೆಪಿ ಐಟಿ ಸೆಲ್ ನವರು ನನ್ನ ಮೊಬೈಲ್ ಸಂಖ್ಯೆಯನ್ನು ಲೀಕ್ ಮಾಡಿದ್ದಾರೆ. ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕರೆಗಳು ಹೆಚ್ಚಾಗಿವೆ. ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬರೆದುಕೊಂಡಿದ್ದರು.