Advertisement

ಸಿದ್ಧಗಂಗಾ ಶ್ರೀ ಸೇವೆ ಶ್ಲಾಘನೀಯ: ಮಣ್ಣೂರ್‌

06:42 PM Apr 03, 2021 | Team Udayavani |

ಯಾದಗಿರಿ: ಎಲ್ಲರನ್ನು ನಮ್ಮೆವರೆಂದು ಕಾಣುತ್ತಿದ್ದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಸೇವೆ ಎಂದೆಂದಿಗೂ
ಶ್ಲಾಘನೀಯ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ್‌ ಹೇಳಿದರು.

Advertisement

ನಗರದ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿ ವೀರಶೈವ ಸಮಾಜ, ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ಶರಣ ಸಾಹಿತ್ಯ ಪರಿಷತ್‌ ಆಶ್ರಯದಲ್ಲಿ ಸಿದ್ಧಗಂಗಾ ಡಾ| ಶಿವಕುಮಾರ ಸ್ವಾಮಿಗಳ 114ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜದ ನಗರಾಧ್ಯಕ್ಷ ಅಯ್ಯಣ್ಣ ಹುಂಡೇಕಾರ್‌, ಶ್ರೀಗಳು ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ, ದೊಡ್ಡ ಹುದ್ದೆ ಅಲಂಕರಿಸುವಂತೆ
ಆಶೀರ್ವದಿಸಿದ್ದಾರೆ. ಅವರಲ್ಲಿ ಯಾವುದೇ ಭೇದ ಭಾವ ಇರಲಿಲ್ಲ. ಶ್ರೀಗಳ ಜೀವನ ಪವಿತ್ರವಾಗಿತ್ತು ಎಂದರು. ಸರ್ಕಾರಿ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ
ಡಾ| ಸುಭಾಶ್ಚಂದ್ರ ಕೌಲಗಿ ಮಾತನಾಡಿ, ವಿಶ್ವ ರತ್ನವಾದ ಶ್ರೀಗಳು ಬಡತನದಿಂದ ಬಂದ ಭಗವಂತ ಎನಿಸಿಕೊಂಡರು. ತ್ರಿವಿಧ ದಾಸೋಹಿಗಳು,
ನಡೆದಾಡುವ ದೇವರು ಎಂದು ಪ್ರಸಿದ್ಧರಾದರು ಎಂದರು.

ಈ ವೇಳೆ ಮಹಾಸಭಾದ ತಾಲೂಕು ಅಧ್ಯಕ್ಷ ಆರ್‌. ಮಹಾದೇವಪ್ಪ, ಡಾ| ಸಿದ್ದಪ್ಪ ಹೊಟ್ಟಿ, ಯುವ ಘಟಕದ ಅಧ್ಯಕ್ಷ ಅವಿನಾಶ್‌ ಜಗನ್ನಾಥ, ಶಿವರಾಜ ಶಾಸ್ತ್ರಿ, ಶರಣು ಇಡೂರು, ನಾಗೇಂದ್ರ ಜಾಜಿ, ನೂರಂದಪ್ಪ ಲೇವಡಿ, ಚನ್ನಪ್ಪ ಸಾಹು ಠಾಣಗುಂದಿ, ಶೇಖರ ಅರಳಿ, ಸುಭಾಷ ಆಯಾರಕರ, ಸಿದ್ದು ಪಾಟೀಲ್‌, ನಾಗನಗೌಡ ಬೆಳಗೇರಿ, ಬಸವರಾಜ ಸಾವೂರ, ಶರಣು ಆಶನಾಳ, ದೇವಿಂದ್ರ ರೆಡ್ಡಿ, ಬಂದಯ್ಯಸ್ವಾಮಿ ಗವಿಮಠ, ನೀಲಕಂಠ ಶೀಲವಂತ್‌, ಮಹಾಸಭಾ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಜವಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next