Advertisement
ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು, ಸಿದ್ಧರಾಮಯ್ಯ ಅವರು ಅಂದು ಬೆಳಗ್ಗೆ ಪಚ್ಚನಾಡಿ ತ್ಯಾಜ್ಯರಾಶಿ ಕುಸಿದು ಮಂದಾರಕ್ಕೆ ಹರಡಿರುವ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಆಗಿರುವ ಮಳೆಹಾನಿ ಪ್ರದೇಶವಾದ ಚಾರ್ಮಾಡಿ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಲಿದ್ದು, ಸಂಜೆ 3 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯುವ ಪಕ್ಷದ ಬೂತ್‌ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೊದಿನ್ ಬಾವ, ಕೋಡಿಜಾಲ್ ಇಬ್ರಾಹಿಂ, ಎಂ.ಶಶಿಧರ ಹೆಗ್ಡೆ, ಮಿಥುನ್ ರೈ, ನವೀನ್ ಡಿಸೋಜ, ವಿಶ್ವಾಸ್‌ಕುಮಾರ್‌ದಾಸ್ ಮುಂತಾದವರು ಉಪಸ್ಥಿತರಿದ್ದರು. ನಳಿನ್; ಬಿಜೆಪಿಗೇ ಹೊಡೆತ!
ನಳಿನ್ ಕುಮಾರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವುದರಿಂದ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹೊಡೆತ ಆಗಲಿದೆಯೇ?ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, “ಬಿಜೆಪಿಗೆ ಹೊಡೆತ ಆಗಲಿದೆಯೋ ಎಂಬ ಪ್ರಶ್ನೆ ಈಗ ಎದುರಾಗಿದೆ’ ಎಂದು ಲೇವಡಿ ಮಾಡಿದರು. ಮಿಥುನ್ ರೈ ಮಾತನಾಡಿ, “ಜಿಲ್ಲೆಗೆ ಬೆಂಕಿ ಕೊಟ್ಟದ್ದು ಸಾಕು; ಇನ್ನು ರಾಜ್ಯಕ್ಕೆ ಬೆಂಕಿ ಕೊಡದಿರಲಿ’ ಎಂದರು.