Advertisement

ಬೆಂಗಳೂರು : ಆಪರೇಷನ್‌ ಕಮಲದಡಿ ಕಾಂಗ್ರೆಸ್‌ ತೊರೆದು ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವವರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ರಾಜಕೀಯ ನಡೆಯ ಹಿಂದೆ ನಾನಾ ಲೆಕ್ಕಾಚಾರಗಳು ಅಡಗಿವೆ.
ಪಕ್ಷಕ್ಕೆ ದ್ರೋಹ ಬಗೆದು ಹೋದವರನ್ನು ವಾಪಸ್‌ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾಡಿದ್ದ “ಶಪಥ’ ಡಿ.ಕೆ.ಶಿ.ಗೆ ಗೊತ್ತಿಲ್ಲದ್ದೇನಲ್ಲ. ಇಷ್ಟಾದರೂ “ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ’ ಎಂದು ಅಧಿಕಾರಯುತವಾಗಿಯೇ ಹೇಳಿರುವುದು ರಾಜಕೀಯ ತಂತ್ರವಲ್ಲದೆ ಬೇರೇನಲ್ಲ.

Advertisement

ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ನಾಯ ಕತ್ವ ಬದಲಾವಣೆಯ ಆಂತರಿಕ ಸಂಘರ್ಷ ಬೇರೊಂದು ಸ್ವರೂಪ ಪಡೆದು, ಅವಧಿಗೆ ಮುನ್ನ ಚುನಾವಣೆ ಎದುರಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.

ಮುಂದಿನ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ನೋಡುವುದಾದರೆ ಪಕ್ಷದಲ್ಲಿ ಪ್ರಭುತ್ವ ಸಾಧಿಸಲು ಡಿ.ಕೆ.ಶಿ. ಹೊರಟಿರುವುದು ಸ್ಪಷ್ಟ.

ಬಿಜೆಪಿಗೆ ಸೇರಿದವರಲ್ಲಿ ಕೆಲವರು ಕಾಂಗ್ರೆಸ್‌ ಸೇರುವ ಪ್ರಸ್ತಾವ ಮಂಡಿಸಿದ್ದು, ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಆದರೆ ಯಾರು ಬೇಕಾದರೂ ಬರಬಹುದು ಎಂಬ ಹೇಳಿರುವ ಡಿ.ಕೆ. ಶಿ. ಪಕ್ಷದ ಅಧ್ಯಕ್ಷರೇ ಸುಪ್ರೀಂ ಎಂದು ಸಾಧಿಸಿದ್ದಾರೆ.

ಹೈಕಮಾಂಡ್‌ನ‌ಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾ ಅವರು ಡಿ.ಕೆ. ಶಿವಕುಮಾರ್‌ ಪರ; ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಸಂಘಟನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಸಿದ್ದರಾಮಯ್ಯ ಮೇಲೆ ಒಲವಿದೆ ಎನ್ನಲಾಗಿದೆ.

Advertisement

ಬಿಜೆಪಿಯಲ್ಲೂ ಚರ್ಚೆ
ಡಿ.ಕೆ. ಶಿವಕುಮಾರ್‌ ಹೇಳಿಕೆ ಬಿಜೆಪಿಯಲ್ಲೂ ಚರ್ಚೆಗೆ ಗ್ರಾಸವಾಗಿದೆ. ಯಾರು ಕಾಂಗ್ರೆಸ್‌ ಸೇರಲು ಮುಂದಾಗಿ ದ್ದಾರೆ, ಏಕೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಜೆಡಿಎಸ್‌ನಲ್ಲೂ ಚಟುವಟಿಕೆ ಗರಿಗೆದರಿದ್ದು, ಇನ್ನು ಜೆಡಿಎಸ್‌ ಆಟ ಆರಂಭ ಎಂಬ ಎಚ್‌.ಡಿ.ಕೆ. ಹೇಳಿಕೆ ಬಗ್ಗೆಯೂ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ.

–  ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next