Advertisement

ಗೋಹತ್ಯೆ ನಿಷೇಧ ಕಾಯ್ದೆಯಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಲಿದೆ :ಸಿದ್ದರಾಮಯ್ಯ

01:22 PM Dec 11, 2020 | sudhir |

ಬೆಂಗಳೂರು : ರಾಜ್ಯ ಸರಕಾರ ತಂದಿರುವ ಗೋಹತ್ಯೆ ನಿಷೇಧ ಮಸೂದೆಯಿಂದ ಅದನ್ನೇ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬಿಳಲಿವೆ ಅಲ್ಲದೆ ಚರ್ಮೋದ್ಯಮದಲ್ಲಿ ಇರುವಂತಹ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡು ನಿರುದ್ಯೋಗಿಗಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದ ಕಾಯ್ದೆಯ ವಿರುದ್ಧ ಕಿಡಿಕಾರಿದ್ದಾರೆ.

Advertisement

ಗೋಹತ್ಯೆ ನಿಷೇಧ ಕುರಿತು ಮಾತನಾಡಿದ ಅವರು ಈಗಾಗಲೇ ಗೋಹತ್ಯೆ ‌ನಿಷೇಧ ವಿಧೇಯಕ್ಕೆ ಈಗಾಗಲೇ ಹಲವು ತಿದ್ದುಪಡಿ ತಂದಿದ್ದಾರೆ.  ಕರ್ನಾಟಕದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಈಗಾಗಲೇ ಕಾನೂನುಗಳಿವೆಯಾವ ಪ್ರಾಣಿಗಳನ್ನು ವಧೆ ಮಾಡಬಹುದು ಅಂತ 1964 ರ ಗೋಹತ್ಯೆ ‌ನಿಷೇಧ ವಿಧೇಯಕದಲ್ಲಿ ಹೇಳಿದ್ದಾರೆ ಎಂದರು.

ರಾಜ್ಯದಲ್ಲಿ ಗೋಶಾಲೆಗಳಿವೆ, ಇಷ್ಟು ದೊಡ್ಡ ಸಂಖ್ಯೆಯ ರಾಸುಗಳಿಗೆ ವಯಸ್ಸಾದರೆ, ರೋಗ ಬಂದರೆ, ಗಂಡು ಕರು ಹುಟ್ಟಿದರೆ ಏನು ಮಾಡಬೇಕು..?

ಇದನ್ನೂ ಓದಿ:ಮಂಗಳೂರು- ಮೈಸೂರು ವಿಮಾನಯಾನ ಆರಂಭ: ಮಂಗಳೂರಿಗೆ ಬಂದಿಳಿದ ಮೊದಲ ವಿಮಾನ

ಈ ಹಸುಗಳನ್ನು ಸಾಕಲು ಸರ್ಕಾರ ರೈತರಿಗೆ ಏನು ಕೊಡುತ್ತದೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಎಂಟು ಲಕ್ಷ ಪರಿಶಿಷ್ಟ ಜಾತಿಯ ಜನ ಪ್ರಾಣಿಗಳ ಚರ್ಮ ಸುಲಿಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಅಲ್ಲದೆ ಅದರಿಂದಲೇ ಬದುಕುತ್ತಿದ್ದಾರೆ ಇನ್ನು ಮುಂದೆ ಅವರ ಬದುಕಿನ ದಾರಿ ಹೇಗೆ ಎಂದರು.

Advertisement

ಮೋದಿ ಸರ್ಕಾರ ಬಂದ ಮೇಲೆ ಮಾಂಸದ ರಫ್ತು ಹೆಚ್ಚಾಗಿದೆ ಎಂದಿದ್ದಾರೆ ಆದರೆ ನೀವು ಅದನ್ನು ನಿಯಂತ್ರಣ ಮಾಡಿದ್ದೀರಾ..?
ದೇಶದಲ್ಲಿ ಹೆಚ್ಚಿನ ಜನ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ, ಅಲ್ಲದೆ ನಮ್ಮ ದೇಶ ಚರ್ಮೋದ್ಯಮದಲ್ಲಿ ಎರಡನೇ ಸ್ಥಾನದಲ್ಲಿದೆ, ಆ ಇಂಡಸ್ಟ್ರಿ ಮೇಲೆ ಬಹಳಷ್ಟು ಜನ ಅವಲಂಬಿತರಾಗಿದ್ದಾರೆ, ಈಗ ಈ ಉದ್ಯಮ ನಿಂತು ಹೋದರೆ ಚರ್ಮದ ಉದ್ಯಮದಿಂದ 5.5 ಬಿಲಿಯನ್ ಡಾಲರ್ ಆದಾಯ ದೇಶಕ್ಕೆ ನಷ್ಟವಾಗಲಿದೆ ಎಂದು ಗುಡುಗಿದರು.

ನಿರುದ್ಯೋಗ ದೇಶದಲ್ಲಿ ಹೆಚ್ಚಾಗುತ್ತೆಇಡೀ ದೇಶಕ್ಕೇ ಅನ್ವಯವಾಗುವಂತಹ ಒಂದು ಪಾಲಿಸಿ ತಯಾರು ಮಾಡಿ, ಅದಕ್ಕಾಗಿ ಕೇಂದ್ರದ ಸರ್ಕಾರವೇ ಒಂದು ತಜ್ಞರ ಸಮಿತಿ ರಚಿಸಲಿ ಆ ವರದಿಯನ್ನು ಜನರ ಮುಂದಿಡಲಿ ಜೊತೆಗೆ ಆ ವಿಷಯದ ಬಗ್ಗೆ ಚರ್ಚೆ ಆಗಲೀ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು. ಅನುತ್ಪಾದಕ ಹಸುಗಳನ್ನು ಸರ್ಕಾರವೇ ಕೊಂಡುಕೊಳ್ಳಲಿ ರೈತರ ಮೇಲೆ ಯಾಕೆ ಹೊರೆ ಹಾಕುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next