Advertisement
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂಸುಧಾರಣಾ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಸುಗ್ರಿವಾಜ್ಞೆ ಹಾಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಐದು ರೈತ ವಿರೋಧಿ ಕಾಯ್ದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಹೊರ ತಂದಿರುವ ” ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು’ ಕಿರು ಹೊತ್ತಿಗೆಯನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
Related Articles
Advertisement
ಎ.ಪಿ.ಎಂ.ಸಿ ಕಾಯ್ದೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ಬಂದು ಮಾರಾಟ ಮಾಡುವ ಅಗತ್ಯವಿಲ್ಲ. ಅದನ್ನು ಯಾರಿಗೆ ಬೇಕಾದರೂ ಮಾರಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿಯವರ ವಾದ. ಆದರೆ, ತಿದ್ದುಪಡಿಯಿಂದ ಖಾಸಗಿ ವ್ಯಕ್ತಿಗಳಿಗೆ ತಮ್ಮದೆ ಮಾರುಕಟ್ಟೆಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಇದರಿಂದ ಎಪಿಎಂಸಿಗಳು ಮುಚ್ಚಿ, ಕನಿಷ್ಟ ಬೆಂಬಲ ಬೆಲೆ ಇಲ್ಲದಂತಾಗಲಿದೆ. ಇದಕ್ಕಾಗಿಯೇ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂದು ಸರ್ಕಾರ ಹೇಳುತ್ತಿದೆ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ಈಗ ಸರ್ಕಾರ 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ತಿದ್ದುಪಡಿ ಮೂಲಕ ಉಳ್ಳವನನ್ನು ಭೂಮಿಯ ಒಡೆಯ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ:ಎರಡೇ ವರ್ಷದಲ್ಲಿ ಕಿತ್ತು ಹೋದ ಬೊಮ್ಮನಹಳ್ಳಿ ಮಾರ್ಗ ರಸ್ತೆ
ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಲಾಗಿದೆ. ಕಾಯ್ದೆಯು ಅಕ್ರಮ ದಸ್ತಾನುಗಳ ಮೇಲೆ ದಾಳಿ ಮಾಡಿ, ಅಕ್ರಮ ಬಯಲಿಗೆಳೆಯಲು ಅವಕಾಶವಿಲ್ಲವಾಗಿದೆ, ಇದರಿಂದ ಕೃತಕ ಅಭಾವ ಸೃಷ್ಟಿ ಮಾಡಿ ಮಾರುಕಟ್ಟೆಯಲ್ಲಿ ಆ ವಸ್ತುವಿನ ಬೆಲೆ ಏರಿದ ನಂತರ ಮಾರುಕಟ್ಟೆಗೆ ಬಿಡುತ್ತಾರೆ. ಇಂತಹ ಕಾಯ್ದೆ ಜಾರಿಗೆ ತರುವ ಅಗತ್ಯವೇನಿದೆ? ಅದೂ ಅಲ್ಲದೆ ಇವುಗಳ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ, ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿ. ಈ ಮೇಲಿನ ತಿದ್ದುಪಡಿಗಳಿಗೆ ಸುಗ್ರೀವಾಜ್ಞೆ ತರುವಂತಹ ತುರ್ತು ಏನಿತ್ತು? ಸರ್ಕಾರ ರೈತರನ್ನು ನಾಶ ಮಾಡಲು ಹೊರಟಿದೆ ಎಂದು ವಾಗ್ಧಾಳಿ ನಡೆಸಿದರು.
ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ-1964ರಲ್ಲಿ ಜಾನುವಾರಗಳ ರಕ್ಷಣೆಗಾಗಿ ಹಾಲು ನೀಡುವಂತಹ ಪ್ರಾಣಿಗಳ ವಧೆ ಮಾಡಬಾರದು ಮತ್ತು ಪ್ರಾಯದ ಜಾನುವಾರುಗಳನ್ನು ಹತ್ಯೆ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಒಂದು ಜೊತೆ ಎತ್ತಿಗೆ ಕನಿಷ್ಠ 2 ಲಕ್ಷ ರೂಪಾಯಿಯಿದೆ. ಅವುಗಳಿಗೆ ವಯಸ್ಸಾದ ಮೇಲೆ ಅವನ್ನು ಸಾಕಲು 7 ಕೆ.ಜಿ ಮೇವು ಬೇಕು ಮತ್ತು 100 ರೂಪಾಯಿ ಖರ್ಚಾಗುತ್ತದೆ. ಇದರ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಿಲ್ಲ. ಬಿಜೆಪಿಯವರು ಯಾರೂ ಸಗಣಿ ಎತ್ತಿಲ್ಲ, ಗಂಜಲ ತೆಗೆದಿಲ್ಲ, ಬೆರಣಿ ತಟ್ಟಿಲ್ಲ, ಹಸುಗಳನ್ನು ಸಾಕಿದ ಅಭ್ಯಾಸವಿಲ್ಲ ಅದಕ್ಕಾಗಿಯೇ ಈ ರೀತಿ ಮಾತನಾಡುತ್ತಾರೆ. ಈಗ ಗೋಹತ್ಯೆ ಬಗ್ಗೆ ಮಾತನಾಡುವವರಾರು ಜಾನುವಾರುಗಳನ್ನು ನಮ್ಮಂತೆ ಪೂಜೆ ಮಾಡಿದವರಲ್ಲ, ಇಂಥವರು ನಮಗೆ ಗೋಮಾತೆ ಬಗ್ಗೆ ಪಾಠ ಮಾಡುತ್ತಾರೆ ಎಂದರು.
ಇದನ್ನೂ ಓದಿ:ಲಸಿಕೆ ಸಂಗ್ರಹಕ್ಕೆ ಸಂಪೂರ್ಣ ಸಿದ್ದತೆ : ಮೊದಲ ಹಂತದಲ್ಲಿ 13.90 ಲಕ್ಷ ಡೋಸ್ ಲಸಿಕೆ
ಪ್ರಧಾನಿ ಮೋದಿಯವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುವುದಿಲ್ಲ. ಗ್ಯಾಸ್ ಬೆಲೆ ರೂ.750 ಕ್ಕೆ ಏರಿಕೆಯಾಗಿದೆ, ಮೋದಿಯವರು ಅಧಿಕಾರಕ್ಕೆ ಬಂದಾಗ ಗ್ಯಾಸ್ ಬೆಲೆ ರೂ.300 ರಿಂದ ರೂ.350 ಇತ್ತು. 2012-13ರ ಸಂದರ್ಭದಲ್ಲಿ ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದಕ್ಕೆ 110 ಡಾಲರ್ ಇತ್ತು. ಆಗ ಯುಪಿಎ ಸರ್ಕಾರ ಪೆಟ್ರೋಲ್ ಅನ್ನು 60-65 ರೂಪಾಯಿಗೆ ಮಾರಾಟ ಮಾಡುತ್ತಿತ್ತು. ಈಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 42 ಡಾಲರ್ ಇದೆ, ಈಗಿನ ತೈಲ ಬೆಲೆಯ ಅರ್ಧ ಕ್ಕೆ ಅಂದರೆ ಪೆಟ್ರೋಲ್ 40 ರೂಪಾಯಿಗೆ, ಡೀಸೆಲ್ ಅನ್ನು 30 ರಾಪಾಯಿಗೆ ಮಾರಾಟ ಮಾಡಬೇಕು. ಮೋದಿಯವರು ಮಾತೆತ್ತಿದರೆ ಸಬ್ ಕ ಸಾಥ್ ಸಬ್ ಕ ವಿಕಾಸ್ ಅನ್ನುತ್ತಾರೆ, ಇವರ ಆಡಳಿತದಿಂದ ಸಾಮಾನ್ಯ ಜನರ ವಿಕಾಸವಂತೂ ಆಗಿಲ್ಲ. ‘– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ.