Advertisement

ಸಿದ್ದು-ಎಚ್‌ಡಿಕೆ ಮಧ್ಯೆ ಭರ್ಜರಿ ಫೈಟ್‌

12:55 AM Mar 31, 2023 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಗೆ ಬುಧವಾರವಷ್ಟೇ ವೇಳಾಪಟ್ಟಿ  ಘೋಷಣೆಯಾಗಿದ್ದು, ರಣಾಂಗಣ ಭಾರೀ ಬಿಸಿ ಪಡೆದುಕೊಂಡಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೇರವಾಗಿ ವಾಕ್ಸಮರ ನಡೆಸಿಕೊಂಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಅಪ್ಪ, ಮಕ್ಕಳ ಪಕ್ಷ ಎಂದಿದ್ದರೆ; ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸ್ವಂತ ಪಕ್ಷ ಕಟ್ಟಿ ಗೆದ್ದು ಬನ್ನಿ ಎಂದು ಸವಾಲೆಸೆದಿದ್ದಾರೆ.

Advertisement

ಜೆಡಿಎಸ್‌ನಲ್ಲಿ ಫ್ಯಾಮಿಲಿ ಮಾತೇ ಅಂತಿಮ

ಬೆಂಗಳೂರು: ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷವಾಗಿದ್ದು ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲ, ಅವರು ಹೇಳಿದ್ದನ್ನು ಕೇಳಬೇಕಷ್ಟೇ. ಇಲ್ಲದಿದ್ದರೆ ಗೇಟ್‌ಪಾಸ್‌ ಸಿಗುತ್ತದೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ನಾಯಕರ ಕಾಲೆಳೆದಿದ್ದಾರೆ.

ಗುರುವಾರ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆ ಬಂದ ಮಾಜಿ ಸಚಿವ ಗುಬ್ಬಿ ಶ್ರೀನಿವಾಸ ಅವರನ್ನು ಬರಮಾಡಿ ಕೊಂಡು ಮಾತನಾಡಿದ ಸಿದ್ದ ರಾಮಯ್ಯ,  ಜೆಡಿ ಎಸ್‌ನಲ್ಲಿ ಉಸಿರುಗಟ್ಟುವ ವಾತಾವರಣವಿದೆ, ಆ ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದನ್ನು ಅಲ್ಲಿ ಕೇಳಬೇಕಷ್ಟೇ. ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಪಕ್ಷದಿಂದ ಹೊರಹಾಕಲಾಗುತ್ತದೆ’ ಎಂದು ಆರೋಪಿಸಿದರು.

ನನ್ನನ್ನೂ ಹೊರಹಾಕಿದ್ದರು

Advertisement

ಜೆಡಿಎಸ್‌ನಲ್ಲಿ ಕುಟುಂಬದ ತೀರ್ಮಾನವೇ ಅಲ್ಲಿ ಅಂತಿಮ. ನಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಮುಲಾಜಿಲ್ಲದೆ ತೆಗೆದುಹಾಕುತ್ತಾರೆ. ಇಂದು ಶ್ರೀನಿವಾಸ ಅವರಿಗೆ ಎದುರಾದ ಸ್ಥಿತಿ ಅಂದು ಅಂದರೆ 2007ರಲ್ಲಿ ನನಗೂ ಎದುರಾಗಿತ್ತು’ ಎಂದರು.

ಅತಂತ್ರದ ಮೇಲೆ ಆಸೆ:

ರಾಜ್ಯದಲ್ಲಿ ಈಗ ಕಾಂಗ್ರೆಸ್‌ ಅಧಿ ಕಾರಕ್ಕೆ ಬರುವ ಸ್ಪಷ್ಟ ಶುಭಸೂಚನೆ ಗಳಿವೆ. ಜೆಡಿಎಸ್‌ ಎಷ್ಟೇ ಬೊಂಬಾx ಹೊಡೆದು ಕೊಂಡರೂ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅದು ಬರೀ ಅತಂತ್ರ ಸ್ಥಿತಿ ನಿರ್ಮಾಣವಾಗಲಿ ಎಂದು ಬಯಸುತ್ತಿದೆ. ಎಚ್‌. ಡಿ. ಕುಮಾರಸ್ವಾಮಿ ಮತ್ತು ಎಚ್‌.ಡಿ. ದೇವೇಗೌಡ ಅವರು ರಾಜ್ಯಕ್ಕೆ ಹೊಸಬರಲ್ಲ. ಅವರ ಆಡಳಿತವನ್ನು ಕರ್ನಾಟಕ ನೋಡಿದೆ. ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಆಡಳಿತವನ್ನೂ ರಾಜ್ಯದ ಜನತೆ ನೋಡಿದ್ದಾರೆ. ಹೋಲಿಕೆ ಮಾಡಿದಾಗ, ರಾಜ್ಯವನ್ನು ಕಾಂಗ್ರೆಸ್‌ನಿಂದ ಮಾತ್ರ ಉಳಿಸಲು ಸಾಧ್ಯ ಎಂಬುದು ಮನದಟ್ಟು ಆಗಿದೆ ಎಂದು ಹೇಳಿದರು.

ಪಕ್ಷ ಕಟ್ಟಿ, 2 ಸ್ಥಾನ ಗೆದ್ದು ತೋರಿಸಿ…

ಬೆಂಗಳೂರು: ಜೆಡಿಎಸ್‌ ಅಪ್ಪ-ಮಕ್ಕಳ ಪಕ್ಷ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಗೆ ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಾಂಗ್ರೆಸ್‌ ಬಿಟ್ಟು, ಸ್ವಂತ ಪಕ್ಷ ಕಟ್ಟಿ ಎರಡು ಸ್ಥಾನ ಗೆದ್ದು ತೋರಲಿ ಎಂದು ಸವಾಲು ಹಾಕಿದ್ದಾರೆ.

ಜೆಡಿಎಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್‌ಡಿಕೆ ಅವರು, ನಾವು ಸ್ಟೇಜ್‌ ಹಾಕಿ ಜನ ಸೇರಿಸಿದರೆ ಬಂದು ಭಾಷಣ ಮಾಡಿ ಹೋಗುತ್ತಿದ್ದವರು, ಬ್ಯಾನರ್‌ನಲ್ಲಿ ಫೋಟೋ ಹಾಕಲಿಲ್ಲ ಎಂದು ಸಭೆಗೆ ಬಾರದವರು, ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರನ್ನೇ ಹೆದರಿಸಿದ್ದರು

ಜೆಡಿಎಸ್‌ನಲ್ಲಿ ಅಪ್ಪ ಮಕ್ಕಳ ಮಾತನ್ನು ಕೇಳದಿದ್ದರೆ ಹೊರ ಹಾಕು ತ್ತಾರೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗ ಪಾಳೆಗಾರಿಕೆ ಮಾಡಿ ದೇವೇಗೌಡರನ್ನು ಹೆದರಿಸಿ ಇಟ್ಟು ಕೊಂಡಿದ್ದರು. ಇವರ ಶಕ್ತಿ  ಏನು ಎಂಬುದು ಗೊತ್ತು. ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷ ಕಟ್ಟಿ ಎರಡು ಸೀಟು ತರಲಿ ನೋಡೋಣ ಎಂದು ಹೇಳಿದರು. ಜೆಡಿಎಸ್‌ ಬೆಳೆಸದಿದ್ದರೆ ನಿಮ್ಮನ್ನ ಕಾಂಗ್ರೆಸ್‌ನವರು ಕರೆಯುತ್ತಿ ದ್ದರಾ. ಮೈಸೂರಲ್ಲಿ ಎಂಟು ಜನ ಶಾಸಕರನ್ನು ಕರೆದುಕೊಂಡು ಹೋಗಿ ಮತ್ತೆ ಎಷ್ಟು ಗೆಲ್ಲಿಸಿಕೊಂಡಿರಿ. ನಿಮಗೆ ಜನತೆಯ ಮೂಲಕ ಉತ್ತರ ಕೊಡಿಸುತ್ತೇನೆ ನೋಡ್ತಾ ಇರಿ ಎಂದು ತಿಳಿಸಿ ದರು.

ಸುಮ್ಮನೆ ನಮ್ಮನ್ನು ಕೆಣಕಬೇಡಿ

ಬೊಂಬ್ಡ ಬಜಾಯಿಸುತ್ತಿರುವವರು ನಾವಲ್ಲ, ನೀವು. ನನ್ನನ್ನು ಸುಮ್ಮನೆ ಕೆಣಕಬೇಡಿ ಸಿದ್ದರಾಮಯ್ಯ ಅವರೇ. ಮುಖ್ಯಮಂತ್ರಿ ಗಳು ಹೇಳುತ್ತಾರೆ, ಕುಮಾರಸ್ವಾಮಿ ಹೈದಾರಾಬಾದ್‌ನಲ್ಲಿ ಕಾಂಗ್ರೆಸ್‌ ನಾಯಕರನ್ನು ಸಂಪರ್ಕ ಮಾಡಿದ್ದಾರೆ ಅಂತ. ಸಿದ್ದರಾಮಯ್ಯ ಹೇಳ್ತಾರೆ, ಜೆಡಿಎಸ್‌-ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಅಂತ. ಇವರಿಗೆ ಬೇರೆ ಕೆಲಸ ಇಲ್ಲವೇ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next