Advertisement

ಮತ್ತೆ ಸಿಎಂ ಕುರ್ಚಿಗೆ ಅಹಿಂದ ಗುರಿ : ಮುಂದಿನ ತಿಂಗಳಿನಿಂದ ರಾಜ್ಯ ಪ್ರವಾಸ ; ಸಿದ್ದರಾಮಯ್ಯ

12:27 AM Feb 09, 2021 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ನಡೆಯಲು ಇನ್ನೂ ಎರಡು ವರ್ಷಗಳಿವೆ. ಅದಕ್ಕೆ ಮುನ್ನವೇ ತಾಲೀಮು ನಡೆಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾಗಿದ್ದಾರೆ.

Advertisement

ಅದಕ್ಕಾಗಿ ಮತ್ತೆ “ಅಹಿಂದ’ ನಿಲುವಿನತ್ತ ಹೊರಳಿದ್ದು, ಮಾರ್ಚ್‌ನಿಂದ ರಾಜ್ಯ ಪ್ರವಾಸಕ್ಕೆ ಸಜ್ಜಾಗುತ್ತಿದ್ದಾರೆ. ಒಂದು ವರ್ಷ ನಿರಂತರವಾಗಿ ಹಳೇ ಮೈಸೂರು, ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಕರಾವಳಿ ಭಾಗದಲ್ಲಿ ಪ್ರವಾಸ ನಡೆಯಲಿದ್ದು, ಅಲ್ಪಸಂಖ್ಯಾಕ, ಹಿಂದುಳಿದ ದಲಿತ ಸಂಘಟನೆಗಳ ನೇತೃತ್ವದಲ್ಲೇ ಆಯೋಜನೆಯಾಗಲಿದೆ.

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಸಿದ್ದ ರಾಮಯ್ಯ, ಅಹಿಂದ ವರ್ಗ ಸಂಘಟಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯತಂತ್ರ
ವಿವಿಧೆಡೆ ಬೃಹತ್‌ ಸಮಾ ವೇಶ ಆಯೋಜಿಸಿ ಸಿದ್ದ ರಾಮಯ್ಯ ಭಾಗಿಯಾಗುತ್ತಾರೆ. ಕುರುಬ ಸಮುದಾಯಕ್ಕೆ ನಾಯಕರಾಗುವ ಕೆ.ಎಸ್‌. ಈಶ್ವರಪ್ಪ ಪ್ರಯತ್ನ ತಡೆಯುವ ಉದ್ದೇಶವೂ ಇದರ ಹಿಂದಿದೆ.

ಬಜೆಟ್‌ ಅಧಿವೇಶನದ ಬಳಿಕ ಡಿ.ಕೆ.ಶಿ. ನೇತೃತ್ವದಲ್ಲಿ 110 ಕ್ಷೇತ್ರಗಳಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಿದ್ದರಾಮಯ್ಯ ಕೂಡ ಪ್ರವಾಸ ನಡೆಸಲಿರುವುದು ಕುತೂಹಲ ಮೂಡಿಸಿದೆ.

Advertisement

ಆಪ್ತರ ಜತೆ ಚರ್ಚೆ
ರಾಜ್ಯ ಪ್ರವಾಸ ಸಂಬಂಧ ಸಿದ್ದರಾಮಯ್ಯ ಆಪ್ತರ ಜತೆ ಎರಡು ಸುತ್ತು ಸಮಾಲೋಚನೆಯನ್ನೂ ನಡೆಸಿದ್ದಾರೆ. ಪ್ರವಾಸಕ್ಕೆ ಮುನ್ನ ದಿಲ್ಲಿಗೆ ತೆರಳಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ಪ್ರವಾಸದ ಉದ್ದೇಶ ಮತ್ತು ಕಾರ್ಯತಂತ್ರ ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next