Advertisement

ಸಿದ್ಧರಾಮೇಶ್ವರರ ವಿಚಾರಧಾರೆ ಸಾರ್ವಕಾಲಿಕ

09:01 AM Jan 16, 2019 | |

ಬಳ್ಳಾರಿ: ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ವಿಚಾರಧಾರೆಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಯೋಗಿ ಶ್ರೀಸಿದ್ದರಾಮೇಶ್ವರರ‌ 847ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿವಯೋಗಿ ಶ್ರೀಸಿದ್ದರಾಮೇಶ್ವರ ಅವರು ರಚಿಸಿದ ವಚನಗಳಲ್ಲಿ ಆಧ್ಯಾತ್ಮಿಕತೆ ಕಾಣಬಹುದು. ಇಂದಿನ ಸೊಲ್ಲಾಪುರದ (ಹಿಂದಿನ ಸೊನ್ನಲಿಗಿ)ಲ್ಲಿ ಮುದ್ದುಗೌಡ, ಸುಗ್ಗಲಾದೇವಿಗೆ ಜನಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರರು ಕರ್ಮಯೋಗಿಯಾಗಿದ್ದಾರೆ. ಅವರು ಜನಿಸಿದ ಸೊಲ್ಲಾಪುರದಲ್ಲಿ ಹಲವಾರು ಗುಡಿ ಗೋಪುರ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ 12ನೇ ಶತಮಾನದಲ್ಲೇ ಕ್ರಾಂತಿ ಮಾಡಿದ್ದಾರೆ. ನಿರಂತರ ಧರ್ಮ, ಧ್ಯಾನ, ವಚನಗಳ ಮೂಲಕ ಲೋಕಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಶಿವಯೋಗಿ ಸಿದ್ಧರಾಮೇಶ್ವರವರ ಆದರ್ಶಗಳು ಮತ್ತು ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಪ್ರೊ| ಎಫ್‌.ಎಸ್‌.ಕರಿದುರುಗಣ್ಣನವರ್‌, ಸಿದ್ದರಾಮೇಶ್ವರ ತಂದೆ ಮುದ್ದುಗೌಡ, ತಾಯಿ ಸುಗ್ಗಲಾದೇವಿ ಅವರಿಗೆ ಅನುಭವಿಸಲು ಅಷ್ಟೆ„ಶ್ವರ್ಯಗಳು ಇದ್ದವು. ಆದರೆ, ಮಕ್ಕಳು ಆಗಿರಲಿಲ್ಲ. ಮಕ್ಕಳಿಗಾಗಿ ಸುಗ್ಗಲಾದೇವಿಯವರು ತನ್ನ ಇಷ್ಟದೇವರಲ್ಲಿ ಬೇಡಿಕೊಂಡ ಬಳಿಕ ಗಂಡುಮಗು ಜನನವಾಯಿತು ಎಂದರು.

ಇದಕ್ಕೂ ಮುನ್ನ ವೇದಿಕೆ ಮೇಲಿದ್ದ ಅತಿಥಿಗಣ್ಯರೆಲ್ಲರೂ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶಪ್ಪ, ಪಾಲಿಕೆ ಸದಸ್ಯ ಬೆಣಕಲ್‌ ಬಸವರಾಜ, ಮುಖಂಡರಾದ ನಾಗರಾಜ್‌, ವೈ.ಕೊಟ್ರೇಶ್‌, ವಿ.ಮಹೇಶ್‌, ಮಲ್ಲಿಕಾರ್ಜುನ, ರಾಮರೆಡ್ಡಿ, ರಾಮಚಂದ್ರಯ್ಯ, ಡಾ| ಹನುಮಂತಪ್ಪ, ಸುಂಕಣ್ಣ, ರಾಮಾಂಜನೇಯ, ಸಿರಿವಾರ ಹೊನ್ನೂರುಸ್ವಾಮಿ, ವಡ್ಡರ ಬಂಡೆ ಗೋವಿಂದಪ್ಪ, ಜಿ.ವೆಂಕಟೇಶಲು, ಹಂದ್ರಾಳ್‌ ವೆಂಕಟೇಶ್‌, ಜಿ.ಮಾರೆಣ್ಣ, ಪರ್ವತಯ್ಯ, ಅಂಜಲಿ, ಪ್ರಸಾದ್‌, ಬಸವರಾಜ, ಬೋಜರಾಜ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next