Advertisement

ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ:ಎಚ್‌ಡಿಡಿ

01:31 AM Aug 23, 2019 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ, ಅವರ ಬೆಂಬಲಿಗರೇ ಕಾರಣ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ನೇರವಾಗಿ ಆಕ್ರೋಶ ಹೊರಹಾಕಿದ್ದಾರೆ.

Advertisement

ಜೆಪಿ ಭವನದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಹೇಗೆ ಪತನಗೊಂಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ಅಂದು ಮುಂಬೈಗೆ ಬಿಜೆಪಿ ನಾಯಕರ ಜತೆ ಹೋಗಿದ್ದ ಶಾಸಕರೇ ತಮ್ಮನ್ನು ಸಿದ್ದರಾಮಯ್ಯ ಕಳುಹಿಸಿದ್ದರು ಎಂದು ಹೇಳಿದ್ದನ್ನು ಗಮನಿಸಿದರೆ, ಏನೇನು ನಡೆದಿರಬಹುದು ಎಂಬುದು ಸ್ಪಷ್ಟ ಎಂದು ಹೇಳಿದರು.

”ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಮೊದಲಿನಿಂದಲೂ ತಿಕ್ಕಾಟ ಇತ್ತು. ಸರ್ಕಾರ ರಚನೆಗೆ ಸಿದ್ದರಾಮಯ್ಯಗೆ ಒಲವು ಇರಲಿಲ್ಲ. ಹೈಕಮಾಂಡ್‌ ಒತ್ತಡಕ್ಕೆ ಒಪ್ಪಿದ್ದರು. ಆದರೆ, ಆ ನಂತರದ ವಿದ್ಯಮಾನಗಳು ನಿಮಗೇ ಗೊತ್ತಿದೆ” ಎಂದು ಗೌಡರು ಹೇಳಿದರು.

ತುಮಕೂರಿನಲ್ಲಿ ನನ್ನನ್ನು ಸೋಲಿಸಿದ್ದು, ಮಂಡ್ಯದಲ್ಲಿ ನಿಖೀಲ್ ಸೋಲಿಸಿದ್ದರ ಹಿಂದೆ ನಡೆದ ತಂತ್ರಗಾರಿಕೆಗಳೂ ಗೊತ್ತಿದೆ. ಕಾಂಗ್ರೆಸ್‌ ಪಕ್ಷದ ನಾಯಕರೇ ಅದನ್ನು ಹೇಳುತ್ತಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರ ರಚನೆಗೆ ಕಾಂಗ್ರೆಸ್‌ನವರೇ ಕಾರಣ. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು, ನಾನು ಪ್ರತಿಪಕ್ಷ ನಾಯಕನಾಗಬೇಕು ಎಂಬ ಬಯಕೆ ಸಿದ್ದರಾಮಯ್ಯ ಅವರಿಗೆ ಇರಲೂಬಹುದು ಎಂದು ದೇವೇಗೌಡರು ಹೇಳಿದರು. ಈ ಮಧ್ಯೆ ಶುಕ್ರವಾರ ಬೆ.10ಗಂಟೆಗೆ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ಕರೆದಿದ್ದು ಗೌಡರ ಆರೋಪಗಳಿಗೆ ಉತ್ತರ ಕೊಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next