Advertisement

Shimoga; ಸಿದ್ದರಾಮಯ್ಯನವರೇ, ನಿಮ್ಮ ಕನಸಿನಂತೆ ಕೆಲಸ ಮಾಡಿ, ಇಲ್ಲದಿದ್ದರೆ…: ಈಶ್ವರಪ್ಪ ಸಲಹೆ

11:51 AM Dec 04, 2023 | Team Udayavani |

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲವೆಂದು ಹೇಳಿದ್ದಾರೆ. ಗ್ಯಾರಂಟಿಗಳು ವಿಫಲವಾಗುತ್ತಿದೆ. ಇಡೀ ಕರ್ನಾಟಕ ಅಭಿವೃದ್ಧಿ ಶೂನ್ಯವಾಗಿದೆ. ಸ್ನೇಹಿತನಾಗಿ, ಹಿತೈಷಿಯಾಗಿ, ಸಹೋದರನಾಗಿ ಹೇಳುತ್ತೇನೆ ಎಷ್ಟು ದಿ‌ನ ನೀವು ಮುಖ್ಯಮಂತ್ರಿ ಆಗಿರುತ್ತಿರೆಂದು ಗೊತ್ತಿಲ್ಲ. ನೀವು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿ ಆಗಿರಬೇಕೆಂದು ನನ್ನ ಆಸೆ. ನಿಮ್ಮ ಆಡಳಿತದಲ್ಲಿ ದೇವರಾಜ್ ಅರಸ್ ಅವರು ಮಾಡಿದ ಕೆಲಸ ಮಾಡಲಾಗಲ್ಲ. ಅವರನ್ನು ಪದೇ ಪದೆ ನೆನಪಿಸಿಕೊಳ್ಳುತ್ತಿರಿ. ವಸತಿ ಯೋಜನೆಯ ಮನೆಗಳು ಶಿವಮೊಗ್ಗದಲ್ಲಿ ನಿಂತು ಹೋಗಿದೆ. ಬಡವರಿಗೆ ಮನೆ ಕಟ್ಟಲು ಹಿಂದಿನ ಸರ್ಕಾರ ಮಾಡಿದ ಕೆಲಸವನ್ನು ಪೂರ್ಣಗೊಳಿಸಿ. ಆಗ ಜನ ನಿಮ್ಮ ಪೋಟೋ ಹಾಕಿ ನೆನಪಿಸಿಕೊಳ್ಳುತ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅತಿ ಹೆಚ್ಚು ಬಜೆಟ್ ಮಾಡಿರುವ ಅರ್ಥ ಸಚಿವರು ನೀವು. ಆದರೂ ಗ್ಯಾರಂಟಿಗಳ ಹಳ್ಳಕ್ಕೆ ಯಾಕೆ ಬಿದ್ದಿರಿ ಗೊತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳು ಅರ್ಧಕ್ಕೆ ನಿಂತು ಹೋಗಿದೆ. ನಿಮ್ಮ ಸ್ವತಂತ್ರ ಯೋಚನೆಗಳನ್ನು ಜಾರಿ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.

ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿದೆ. ಡಿ.ಕೆ ಶಿವಕುಮಾರ್ ತೆಲಂಗಾಣದಲ್ಲಿ‌ ಹೋಗಿಕೂತಿದ್ದಾರೆ. ಸಿದ್ದರಾಮಯ್ಯನವರೇ ಬಡವರಿಗೆ, ದಲಿತರಿಗೆ ನ್ಯಾಯ ಕೊಡಿಸುವ ನಿಮ್ಮ ಯೋಜನೆಯಂತೆ ಕೆಲಸ ಮಾಡಿ. ಇದನ್ನು ಬೇಕಾದರೆ ಸಲಹೆ ಅಂತ ತಿಳಿದುಕೊಳ್ಳಿ. ನೀವು ಮತ್ತು ನಿಮ್ಮ ಮಗ ಸಾಕಷ್ಟು ಕೆಲಸ ಮಾಡಿದ್ದಿರಾ. ತನಿಖೆ ಮಾಡಿ ಎಂದರೂ ಮಾಡುತ್ತಿಲ್ಲ. ಒಳ್ಳೆಯ ಕೆಲಸ ಮಾಡಿದರೆ ಇನ್ನೊಬ್ಬ ದೇವರಾಜ್ ಅರಸ್ ಸಿದ್ದರಾಮಯ್ಯ ಎಂದು ಜನ ಹೇಳುತ್ತಾರೆ. ಇಲ್ಲವೆಂದರೆ ಡೋಂಗಿ ಅಪಾದನೆಗೆ ಒಳಗಾಗುತ್ತೀರಿ. ಯಾವುದೇ ಗ್ಯಾರಂಟಿ ಒಪ್ಪಲ್ಲ ಎಂದು ಜನ ತೋರಿಸಿದ್ದಾರೆ. ಗ್ಯಾರಂಟಿ ಅಂದರೆ ವಿಶ್ವ ನಾಯಕ ನರೇಂದ್ರ ಮೋದಿಯವರೆ ಗ್ಯಾರಂಟಿ ಎಂದರು.

ಸಿದ್ದರಾಮಯ್ಯ ಅವರ ರಾಜಕೀಯ ಮುಗಿಯಿತು. ಕೆಟ್ಟ ಹೆಸರು ತಗೊಂಡು ಹೋಗಬೇಡಪ್ಪ ಎಂದು ಹೇಳಿದ್ದೇನೆ. ಸಿದ್ದರಾಮಯ್ಯ ಒಳ್ಳೆಯ ಹೆಸರು ತಗೆದುಕೊಂಡು ಹೋಗಲಿ ಎಂದು‌ತ ಒಳ್ಳೆಯ ಮಾತನ್ನ ಹೇಳಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

ನಮ್ಮನ್ನು ಕೋಮುವಾದಿಗಳೆಂದು ಕರಿಯುತ್ತಿದ್ದಿರಾ. ತೆಲಂಗಾಣ ಹೇಗೆ ಗೆದ್ದಿದ್ದಾರೆ? ಮುಸ್ಲಿಂಮರ ಕೋಮುವಾದವನ್ನು ಜಾಗೃತಿ ಮೂಡಿಸಿ. ಒಗ್ಗೂಡಿಸಿ ಮತ ಹಾಕಿಸಿದ್ದಾರೆ. ಮುಸ್ಲಿಮರ ತಲೆ ತಗ್ಗಿಸುವ ಹೇಳಿಕೆ ನೀಡಿದ್ದು ದೇಶದ್ರೋಹಿ ಜಮೀರ್ ಅಹಮದ್. ನಾವು ಕೋಮುವಾದಿಗಳಲ್ಲ ರಾಷ್ಟ್ರೀಯವಾದಿಗಳು ಎಂದು ಈಶ್ವರಪ್ಪ ಹೇಳಿದರು.

Advertisement

ಡಿ.ಕೆ ಶಿವಕುಮಾರ್ ಬಿಬಿಎಂಪಿ ಗುತ್ತಿಗೆದಾರಿಂದ ಹಣ ಪಡೆದು ಸಿಕ್ಕಿಬಿದ್ದಿದ್ದರು. ಡಿಕೆಶಿ ಹಣ, ಜಮೀರ್ ಕೋಮುವಾದಿ ಹೇಳಿಕೆಯಿಂದ ತೆಲಂಗಾಣದಲ್ಲಿ ಗೆದ್ದಿದೆ. ಕೇಂದ್ರದ ನಾಯಕರು ಶ್ರೀಕೃಷ್ಣನ ತಂತ್ರಗಾರಿಕೆ ಮಾಡಿದರು. ಮೂರು ರಾಜ್ಯದಲ್ಲಿ ಗೆದ್ದಿದ್ದೇವೆ. ಇಡೀ ದೇಶದ ಜನ ನರೇಂದ್ರ ಮೋದಿಯವರ ಮಾಡಿದ ಕೆಲಸಕ್ಕೆ ಮೆಚ್ಚಿ ನಿರೀಕ್ಷೆ ಮೀರಿ ಗೆಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎಂದು ತೋರಿಸಿದ್ದಾರೆ. 17 ಕಡೆಯಲ್ಲಿ ನಾವು ರಾಜ್ಯಭಾರ ಮಾಡುತ್ತಿದ್ದೇವೆ. ಮತ್ತೊಮ್ಮೆ ಪ್ರಧಾನಮಂತ್ರಿ ಆಗಲು ಜನ ಪೂರ್ಣ ಬಹುಮತದ ಬೆಂಬಲ‌ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ತೆಲಂಗಾಣದಲ್ಲಿ ಇಬ್ಬರೂ ಸಿಎಂ ಅಭ್ಯರ್ಥಿಗಳನ್ನು ಗೆದ್ದಿದ್ದಾರೆ. ತೆಲಂಗಾಣ ಸೇರಿ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಬಿಜೆಪಿ ಅಧಿಕಾರ ನಡೆಸುತ್ತದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಐದನೇ ಬಾರಿಗೆ ಅಧಿಕಾರಕ್ಕೆ ಬಂದಿದೆ.

ಸಿದ್ದರಾಮಯ್ಯ ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಅಂತ ಕನಸು ಇಟ್ಟುಕೊಂಡಿದ್ದಾರೆ. ಅದು ಸುಳ್ಳಾಗುತ್ತದೆ. ನಾವು 28-28 ಸ್ಥಾನ ನಾವು ಗೆಲ್ಲುತ್ತೇವೆ. ದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಹಿಂದಿನ ಬಾರಿಗಿಂತ ಹೆಚ್ಚಿನ ಸೀಟ್ ಗೆಲ್ಲುತ್ತೇವೆ ಎಂದರು.

ಧರ್ಮ ಒಡೆಯುವ ಕಾಂಗ್ರೆಸ್: ಹಿಂದೂಸ್ತಾನ್-ಪಾಕಿಸ್ತಾನ್ ಎಂದು ಒಡೆದಿದ್ದು ಕಾಂಗ್ರೆಸ್. ದೇಶವನ್ನು ಒಡೆದ ಕಾಂಗ್ರೆಸ್ ಈಗ ದಕ್ಷಿಣ ಭಾರತ, ಉತ್ತರ ಭಾರತ ಅಂತ ಒಡೆಯುತ್ತಿದ್ದಾರೆ. ವೀರಶೈವ, ಲಿಂಗಾಯತ ಎಂದು ಧರ್ಮ ಒಡೆಯವರು ಇವರೇ ಎಂದು ಆರೋಪಿಸಿದರು.

ವ್ಯಕ್ತಿ ಮುಖ್ಯವಲ್ಲ: ಯತ್ನಾಳ್ ನಮ್ಮ ಪಕ್ಕಾ ಕಾರ್ಯಕರ್ತ. ಹಿಂದೂತ್ವದ ಪಕ್ಕಾ ಕಾರ್ಯಕರ್ತ. ಯತ್ನಾಳ್ ಮನೊಲಿಸುವ ಕೆಲಸವನ್ನು ಕೇಂದ್ರದ ನಾಯಕರು ಮಾಡುತ್ತಾರೆ. ದೇಶ ಮುಖ್ಯ ಹೊರತು ವ್ಯಕ್ತಿ ಮುಖ್ಯವಲ್ಲ. ನಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಆಗಿದ್ದೇನೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next