Advertisement
ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಬಾರಿ ಬಂದು-ಹೋಗಿ ತವರು ಪ್ರೇಮ ಮೆರೆಯುತ್ತಿದ್ದ ಸಿದ್ದರಾಮಯ್ಯ,ಚುನಾವಣೆ ಸೋಲಿನ ಬಳಿಕ ಮೈಸೂರಿಗೆ ಬರುವ ಮನಸ್ಸು ಮಾಡಿಲ್ಲ. ಇತ್ತ ತಮ್ಮ ಮಗನನ್ನು ಭಾರೀ ಅಂತರದಿಂದ ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲೂ ಬರಲಿಲ್ಲ.
Related Articles
Advertisement
ಈ ಮಧ್ಯೆ, ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಸೋಲಿನ ಬಗ್ಗೆ ಕುಹಕವಾಡಿದ್ದರೂ ಅದನ್ನು ಪ್ರಶ್ನಿಸಲೂಕಾಂಗ್ರೆಸ್ನ ಸ್ಥಳೀಯ ಮುಖಂಡರು ಅದರಲ್ಲೂ ಸದಾ ಸಿದ್ದರಾಮಯ್ಯ ಅವರ ಹಿಂದೆ ಮುಂದೆ ಸುಳಿದಾಡುತ್ತಿದ್ದ
ಮುಖಂಡರು ಮುಂದಾಗುತ್ತಿಲ್ಲ. ಚುನಾವಣಾ ರಾಜಕೀಯ ಸಾಕಾಗಿದೆ. ಇದೇ ನನ್ನ ಕಡೇ ಚುನಾವಣೆ, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿದ್ದು ನನ್ನ ಬೆಂಬಲಿಗರಿಗೆ ಮಾರ್ಗದರ್ಶನ ಮಾಡುತ್ತೇನೆ ಎಂದಿದ್ದ ಸಿದ್ದರಾಮಯ್ಯ, ಸದ್ಯ ಆಡಳಿತ ಪಕ್ಷದ ನಾಯಕರಾಗಿ ಸಮ್ಮಿಶ್ರ ಸರ್ಕಾರದ ಮಂತ್ರಿಮಂಡಲ ರಚನೆ ವಿಷಯದಲ್ಲಿ ಸಲಹೆ ನೀಡುವಷ್ಟಕ್ಕೆ ಸೀಮಿತರಾಗಿದ್ದಾರೆ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಮೈಸೂರಿಗೆ ಬಂದರೆಂದರೆ ಜನರಿಂದ ಗಿಜಿಗುಡುತ್ತಿದ್ದ ಟಿ.ಕೆ. ಲೇಔಟ್‌ನ ಅವರ ಮನೆ ಈಗ ಬಿಕೋ ಎನ್ನುತ್ತಿದೆ. ಲೋಕಸಭೆಗೆ ಸ್ಪರ್ಧಿಸ್ತಾರಾ?
ಸಿದ್ದರಾಮಯ್ಯ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು -ಕೊಡಗು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಂಬ ಚರ್ಚೆ ಇಲ್ಲಿನ ರಾಜಕೀಯ ವಲಯದಲ್ಲಿ ನಡೆದಿದೆ. ಸ್ವತಃ ಸಿದ್ದರಾಮಯ್ಯ ಅವರೇ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಇದೇ ನನ್ನ ಕಡೇ ಚುನಾವಣೆ, ಬ್ರಹ್ಮ ಬಂದು ಹೇಳಿದರೂ ಮತ್ತೆ ಸ್ಪರ್ಧಿಸುವುದಿಲ್ಲ, ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ರಾಜಕಾರಣದಲ್ಲಿ ಸಂದರ್ಭಕ್ಕೆ ತಕ್ಕಂತೆ ಹೈಕಮಾಂಡ್ ಸೂಚನೆಯನ್ನು ಪಾಲಿಸಬೇಕಾಗುತ್ತದೆ.
ಹೀಗಾಗಿ, ಸಿದ್ದರಾಮಯ್ಯ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎನ್ನುತ್ತಾರೆ ರಾಜಕೀಯ ಮುಖಂಡರು. – ಗಿರೀಶ್ ಹುಣಸೂರು