Advertisement
ಸಿದ್ಧರಾಮಯ್ಯ ಅಥವಾ ನನ್ನ ಕುಟುಂಬದಲ್ಲಿ ಯಾರೂ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿಲ್ಲ, ಆಸ್ತಿಯನ್ನೂ ಕಳೆದುಕೊಂಡಿಲ್ಲ, ಅವರು ಗಳಿಸಿಟ್ಟ ಸ್ವಾತಂತ್ರ್ಯದ ಆಸ್ತಿಯನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ ವಾಗ್ದಾಳಿ ನಡೆಸಿದರು.
ವೀರ ಸಾವರ್ಕರಗೆ ಭಾರತ ರತ್ನ ನೀಡುವ ಬಗ್ಗೆ ವಿವಾದ ಎದ್ದಿರುವುದು ವಿಷಾದಕರ ಸಂಗತಿ. ಸಾವರ್ಕರ್ ಮತ್ತು ಅವರ ಕುಟುಂಬದವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಮಾಡಿದವರ ಪಟ್ಟಿಯಲ್ಲಿದ್ದಾರೆ. ಇದನ್ನು ಅರಿಯದೇ ಯಾರೂ ಅಸಂಬದ್ಧವಾಗಿ ಮಾತನಾಡುವುದು ಸರಿಯಾದ ಕ್ರಮವಲ್ಲ ಎಂದರು. ಸುಪ್ರೀಂ ಕೋರ್ಟಿನಲ್ಲಿರುವ ಅನರ್ಹ ಶಾಸಕರ ಪ್ರಕರಣ ತೀರ್ಪು ಹೊರಬೀಳುವ ಸಾಧ್ಯತೆ ಇದೆ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ. ಅಂದಿನ ಸ್ಪೀಕರ್ ರಮೇಶ ಕುಮಾರ್ ಕಾನೂನು ಬಾಹಿರ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದೇವೆ. ಸುಪ್ರೀಂ ಕೋರ್ಟ್ ನಮ್ಮ ವಾದವನ್ನು ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದರು.
Related Articles
Advertisement
ಜಿಲ್ಲೆಯ ಸೋಮದೇವರ ಹಟ್ಟಿಯಲ್ಲಿ ದೇವಿಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದರಲ್ಲಿ ತಪ್ಪೇನಿದೆ. ಪ್ರಗತಿಪರರು ಎಂದ ಮಾತ್ರಕ್ಕೆ ದೇವರಿಗೆ ಕೈ ಮುಗಿಯಬಾರದು ಎಂದು ನಿಯಮವಿದೆಯೇ? ದೇವರಿಗೆ ಕೈ ಮುಗಿಯುವುದು, ಹೋಮ ಹವನ ಮಾಡುವುದು, ದೇವರಿಗೆ ನಮಿಸುವುದು, ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುವು ನಮ್ಮಲ್ಲಿ ಪರಂಪರಾಗತವಾಗಿ ಬಂದಿರುವ ಪದ್ಧತಿ ಎಂದರು.
ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸ್ನೇಹಿತರೊಬ್ಬರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ತಿಕೋಟಾದಿಂದ ಬೆಳಗಾವಿ ಮೂಲಕ ದೆಹಲಿಗೆ ತೆರಳುತ್ತೇನೆ ಎಂದು ವಿವರಿಸಿದರು.