Advertisement

ಸಿದ್ದರಾಮಯ್ಯ-ಈಶ್ವರಪ್ಪ ವಾಕ್ಸಮರ ತಾರಕಕ್ಕೆ

06:00 AM Nov 12, 2018 | |

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ನಡುವಿನ ವಾಕ್ಸಮರ ಭಾನುವಾರವೂ ಮುಂದುವರಿಯಿತು. ಕಲಬುರಗಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ ಸ್ವಯಂಘೋಷಿತ ಅಹಿಂದ ನಾಯಕ ಎಂದು ಜರಿದರೆ, “ಅಹಿಂದ’ ಎಂಬುದು ವಿವಿ ಕೊಡುವ ಡಿಗ್ರಿಯಲ್ಲ, ಈಶ್ವರಪ್ಪ ಮಹಾನ್‌ ಪೆದ್ದ, ಮಿದುಳಿಲ್ಲದ ಮನುಷ್ಯ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಜತೆಗೆ, ಯಡಿಯೂರಪ್ಪ ಸೇರಿ ಇತರ ಬಿಜೆಪಿ ನಾಯಕರ ವಿರುದಟಛಿವೂ ಸಿದ್ದರಾಮಯ್ಯ ವಾಗ್ಧಾಳಿ ಮುಂದುವರಿಸಿದರು.

Advertisement

ಸಿದ್ದು ಸ್ವಯಂಘೋಷಿತ ಅಹಿಂದ ನಾಯಕ
ಕಲಬುರಗಿ:
ರಾಜ್ಯದಲ್ಲಿ ಒಬ್ಬರು ಮಣ್ಣಿನ ಮಗ ಹಾಗೂ ಮತ್ತೂಬ್ಬರು ಅಹಿಂದ ನಾಯಕ ಎಂದು ಸ್ವಯಂ ಘೋಷಿತವಾಗಿ ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ, ನಾವೇನು ಕಲ್ಲಿನ ಮಕ್ಕಳಾ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಗುರು-ಶಿಷ್ಯರಾಗಿದ್ದವರು ನಂತರ ರಾಮ-ರಾವಣನಂತೆ ಆಗಿದ್ದರು. ಈಗ ಮತ್ತೆ ಒಂದಾಗಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಿಕ್ಕಿದ್ದಕ್ಕೆ ಪ್ರಧಾನಿ ಹುದ್ದೆ ಗೆದ್ದಷ್ಟೇ ಕುಣಿದಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಡಿದರು.

ಹಿಂದುಳಿದವರು, ದಲಿತರ ಉದ್ಧಾರವಾಗುತ್ತಿರುವುದು ಬಿಜೆಪಿಯಿಂದಲೇ ಹೊರತು ಕಾಂಗ್ರೆಸ್‌ನಿಂದಲ್ಲ. ದಲಿತರ ಉದ್ಧಾರ ಮಾಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಹಿಂದುಳಿದವರ ಉದ್ಧಾರ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ನಾಟಕ ಮಾಡುತ್ತಿದ್ದಾರೆ. ಹೈ.ಕ. ಭಾಗದಲ್ಲಿ ಅಭಿವೃದ್ಧಿ ಮಾಡಬೇಕೆಂಬ ಅಪೇಕ್ಷೆ ಕಾಂಗ್ರೆಸ್‌ನವರಿಗೆ ಇಲ್ಲವೇ ಇಲ್ಲ. ನಿಜವಾಗಿಯೂ ಕಾಳಜಿಯಿದ್ದರೆ ಈ ಭಾಗದ ಬಗ್ಗೆ ಖರ್ಗೆ ಒಂದು ದಿನವಾದರೂ ಕುಳಿತು ಚರ್ಚೆ ನಡೆಸಲಿ. ಅವರದ್ದೇ ಸಚಿವರು ಇರೋದರಿಂದ ಖರ್ಗೆ ಕರೆದರೆ ಬರುತ್ತಾರೆ. ಸುಮ್ಮನೆ ನಾಟಕ ಮಾಡುವುದು ಸರಿಯಲ್ಲ ಎಂದರು.

ಎಚಿxಕೆ ಲಾಟರಿ ಸಿಎಂ:
ಎಚ್‌.ಡಿ.ಕುಮಾರಸ್ವಾಮಿ ಲಾಟರಿ ಹೊಡೆದಂತೆ ಮುಖ್ಯಮಂತ್ರಿ ಆಗಿದ್ದಾರೆ. ರೈತರ ಸಾಲಮನ್ನಾ ಬಗ್ಗೆ ಘೋಷಿಸಿದ್ದರೂ ಒಂದೇ ಒಂದು ರೂಪಾಯಿ ಮನ್ನಾ ಆಗಿಲ್ಲ. ರೈತರಿಗೆ ಬ್ಯಾಂಕ್‌ಗಳಿಂದ ನೋಟಿಸ್‌, ಅರೆಸ್ಟ್‌ ವಾರೆಂಟ್‌ ಜಾರಿ ಮಾಡಲಾಗುತ್ತಿದೆ. ನೋಟಿಸ್‌ ಕೊಟ್ಟ ಬ್ಯಾಂಕ್‌ಗಳಿಗೆ ಬರೀ ಹುಷಾರ್‌ ಎಂದು ಎಚ್ಚರಿಕೆ ಕೊಡುವ ಮೂಲಕ ಕುಮಾರಸ್ವಾಮಿ ಕಾಗದದ ಹುಲಿಯಂತೆ ವರ್ತಿಸುತ್ತಿದ್ದಾರೆ ಎಂದರು. ಈ ಸರ್ಕಾರ ಬದುಕಿದೆಯೋ, ಇಲ್ಲವೋ ಎನ್ನುವುದನ್ನು ತೋರಿಸಲಿ ಎಂದು ಮೈತ್ರಿ ಸರ್ಕಾರಕ್ಕೆ ಸವಾಲು ಹಾಕಿದರು.

Advertisement

ಇತ್ತೀಚಿನ ಉಪ ಚುನಾವಣೆಯಲ್ಲಿ ಸೋಲಲು ಅತಿಯಾದ ಆತ್ಮವಿಶ್ವಾಸ, ಜತೆಗೆ ಪಕ್ಷ ಸಂಘಟನೆಯಲ್ಲಿ ಎಚ್ಚರ ತಪ್ಪಿದ್ದೇ ಕಾರಣ. ಸೋತ ಮಾತ್ರಕ್ಕೆ ನಾಯಕತ್ವ ಬದಲಾವಣೆ ಪ್ರಶ್ನೆ ಬರೋದಿಲ್ಲ. ಈಗಲೂ ಯಡಿಯೂರಪ್ಪನವರೇ ನಮ್ಮ ನಾಯಕ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 24 ಕ್ಷೇತ್ರಗಳನ್ನು ಗೆಲ್ಲುತ್ತೇವೆ.
– ಕೆ.ಎಸ್‌.ಈಶ್ವರಪ್ಪ, ಬಿಜೆಪಿ ನಾಯಕ.

ಅಹಿಂದ ಡಿಗ್ರಿಯಲ್ಲ, ಈಶ್ವರಪ್ಪ ಪೆದ್ದ
ಗದಗ/ಚಿಕ್ಕಮಗಳೂರು:
ಈಶ್ವರಪ್ಪ ಹೇಳಿಕೆಗೆ ಗದಗದಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಮಹಾನ್‌ ಪೆದ್ದ. ತಲೆಯಲ್ಲಿ ಮಿದುಳಿಲ್ಲದ ಮನುಷ್ಯ. ಸಿದ್ದರಾಮಯ್ಯ ಸ್ವಯಂ ಘೋಷಿತ ಅಹಿಂದ ನಾಯಕ ಎಂದು ತಿಳಿವಳಿಕೆ ಇಲ್ಲದೇ ಮಾತನಾಡುತ್ತಾರೆ. ಅಹಿಂದ ನಾಯಕ ಎನ್ನುವುದಕ್ಕೆ ಯಾವುದಾದರೂ ವಿಶ್ವವಿದ್ಯಾಲಯದಿಂದ ಡಿಗ್ರಿ ನೀಡಲಾಗುತ್ತದೆಯೇ ಎಂದು ಟೀಕಿಸಿದರು.

ಇದಕ್ಕೂ ಮೊದಲು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರ ನಡೆಸಿದರು. ಜೆಡಿಎಸ್‌-ಕಾಂಗ್ರೆಸ್‌ ಇದೇ ರೀತಿ ಕಚ್ಚಾಡಿಕೊಂಡು ಸತ್ತರೆ ತಾವೇ ಮುಖ್ಯಮಂತ್ರಿ ಆಗುವುದಾಗಿ ಬಿಎಸ್‌ವೈ ಹೇಳಿದ್ದಾರೆ. ಪಾಪ ಅವರು ಇನ್ನೂ ಹಗಲುಗನಸು ಕಾಣುತ್ತಿದ್ದಾರೆ. ಅವರು ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಅವರಿಗೆ ಬಹುಮತವಿದೆಯೇ ಎಂದು ಪ್ರಶ್ನಿಸಿದರು.

ಯಾವುದೇ ವ್ಯಕ್ತಿ ಒಂದು ವಿಚಾರವಾಗಿ ಬಹಳ ಆಸೆ ಪಟ್ಟರೆ ಅವರಿಗೆ ಈ ರೀತಿ ಆಗುತ್ತದೆ. ಯಡಿಯೂರಪ್ಪ ಕಣ್ಣು ಮುಚ್ಚಿದರೆ ಸಾಕು, ಅವರಿಗೆ ವಿಧಾನಸೌಧದ 3ನೇ ಮಹಡಿ ಕಣ್ಣಿಗೆ ಬೀಳುತ್ತದೆ. ಬಹುಮತಕ್ಕೆ 113 ಸ್ಥಾನ ಬೇಕು. ಅವರಿಗೆ ಸಿಕ್ಕಿರುವುದು 104 ಸ್ಥಾನ. ಅವರು ಹೇಗೆ ಮುಖ್ಯಮಂತ್ರಿಯಾಗುತ್ತಾರೆ. ನೀವು ಹೇಗೆ ಮುಖ್ಯಮಂತ್ರಿ ಆಗುತ್ತೀರಿ ಎಂದು ಅವರನ್ನು ಕೇಳಿ. ಅದನ್ನು ಬಿಟ್ಟು ನನ್ನನ್ನು ಕೇಳಿದರೆ ನಾನೇನು ಹೇಳಲಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸಮನ್ವಯತೆ ಇಲ್ಲದಿದ್ದರೆ ಉಪಚುನಾವಣೆಯಲ್ಲಿ 4 ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿತ್ತೆ? ಬಳ್ಳಾರಿಯಲ್ಲಿ ದಾಖಲೆ ಮತಗಳ ಅಂತರದಲ್ಲಿ ಗೆದ್ದಿದ್ದೇವೆ. ಶಿವಮೊಗ್ಗದಲ್ಲಿ ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮೂರೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಆ ಅಂತರ 50 ಸಾವಿರಕ್ಕೆ ಇಳಿದಿದೆ. ಸಮನ್ವಯತೆ ಇಲ್ಲದಿದ್ದರೆ ಇಂತಹ ಫಲಿತಾಂಶ ಬರುತ್ತಿತ್ತೇ ಎಂದು ಪ್ರಶ್ನಿಸಿದರು. ಉಪಚುನಾವಣೆ ಫ‌ಲಿತಾಂಶದ ಮೂಲಕ ಬಿಜೆಪಿಯನ್ನು ತಿರಸ್ಕರಿಸಲು ಜನರು ತೀರ್ಮಾನಿಸಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ. ಮುಂಬರುವ ಲೋಕಸಭಾ ಚುನಾಣೆಯಲ್ಲಿ ರಾಜ್ಯದಲ್ಲಿ ಅತ್ಯ ಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

ಬಿಜೆಪಿಯವರು ಸರ್ಕಾರ ಟೇಕಾಫ್‌ ಆಗಿಲ್ಲ, ಆಡಳಿತಾತ್ಮಕವಾಗಿ ಚುರುಕಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ಬಿಜೆಪಿಯವರ ಹೇಳಿಕೆಗೆ ತಾಳ-ಮೇಳ ಇರುವುದಿಲ್ಲ. ಕೇವಲ ಆಧಾರರಹಿತ ಆರೋಪ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ.

Advertisement

Udayavani is now on Telegram. Click here to join our channel and stay updated with the latest news.

Next