Advertisement

ಕಾರವಾರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ಧರಾಮಯ್ಯ

11:38 AM Aug 02, 2021 | Team Udayavani |

ಕಾರವಾರ: ತಾಲೂಕಿನ ಕದ್ರಾ ಮಲ್ಲಾಪುರ ಗ್ರಾಮಗಳಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸೋಮವಾರ ಭೇಟಿ ನೀಡಿ, ‌ಪ್ರವಾಹ ಸಂತ್ರಸ್ತರ ಅಳಲು ಆಲಿಸಿದರು.

Advertisement

ಇದಕ್ಕೂ ಮುನ್ನ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್ ಅವರಿಂದ ಪ್ರವಾಹ ಮಾಹಿತಿ ಪಡೆದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೋವಿಡ್ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಮೊದಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಎರಡು ಅಲೆಗಳಲ್ಲಿ ಜನರ ಸಾವು ಕಂಡಾಗಿದೆ. ಆಕ್ಸಿಜನ್ ಕೊರತೆಯನ್ನು ಕಂಡಿದ್ದೇವೆ. ಮುಂದೆ ಆಗಾಗದಂತೆ ಸರ್ಕಾರ ಎಚ್ಚರವಹಿಸಬೇಕು ಎಂದರು.

ಸಿಎಂ ಬೊಮ್ಮಾಯಿ ಪದೇ ಪದೇ ದೆಹಲಿಗೆ ಹೋಗುವುದು ಸರಿಯಲ್ಲ. ಕೋವಿಡ್ ಬಗ್ಗೆ ಮೊದಲು ಹೆಚ್ಚಿನ ಆದ್ಯತೆ ನೀಡಬೇಕು.  ಅವರ ಪಕ್ಷದ ದೆಹಲಿಯ ನಾಯಕರು ಸಹ ಮಂತ್ರಿಮಂಡಲ ರಚನೆಗೆ ಒಂದು ನಿರ್ಧಾರ ಮಾಡಿ ಕಳುಹಿಸಬೇಕು‌ ‌. ಪದೇ ಪದೇ ದೆಹಲಿಗೆ ಕರೆಯಿಸಿಕೊಳ್ಳುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಮಸ್ಕಿಯಲ್ಲೊಬ್ಬ ವಾನರ ಪ್ರೇಮಿ : ಈತ ನೀಡುವ ಆಹಾರಕ್ಕಾಗಿ ಕೋತಿಗಳ ಸೈನ್ಯವೇ ಬರುತ್ತವೆ

Advertisement

ರೇಣುಕಾಚಾರ್ಯ ತಮ್ಮ ಬಗ್ಗೆ ಮಾನಹಾನಿ ಸುದ್ದಿ ಪ್ರಕಟಿಸದಂತೆ ಕೋರ್ಟ್ ಮೊರೆ ಹೋಗಿದ್ದರಲ್ಲಾ ಎಂಬ ಪ್ರಶ್ನೆಗೆ, ಏನಾದ್ರೂ ಸೆಕ್ಸ್ ಸ್ಕ್ಯಾಂಡಲ್,‌ ಭ್ರಷ್ಟಾಚಾರ ಮಾಡಿರಬೇಕು. ಇಲ್ಲದಿದ್ದರೆ ಯಾಕೆ ಕೋರ್ಟಗೆ ಹೋಗುತ್ತಿದ್ದರು? ಬಿಜೆಪಿ ಸಂಸ್ಕೃತಿ ಪಕ್ಷ ಅಂಥ ಹೇಳಿಕೊಳ್ತದೆ. ಆದರೆ ಸಂಸ್ಕೃತಿ ಹೀನ ಪಕ್ಷ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಜೆಡಿಎಸ್ ಸೆಕ್ಯುಲರಿಜಂಗೆ ತರ್ಪಣ: ದೇವೇಗೌಡರು ಸಿಎಂ ಬೊಮ್ಮಾಯಿ ಅವರ ಬಗ್ಗೆ ಸಾಫ್ಟ್ ಕಾರ್ನರ್ ತಾಳಿದ್ದಾರಲ್ಲ ಎಂಬ ಪ್ರಶ್ನೆಗೆ, “ನಾನು ಆ ಬಗ್ಗೆ ಏನೂ ಹೇಳಲ್ಲ. ಆದರೆ ಜೆಡಿಎಸ್ ಸೆಕ್ಯುಲರ್ ಪಕ್ಷವಾಗಿ ಉಳಿದಿಲ್ಲ. ಸೆಕ್ಯುಲರಿಜಂಗೆ ಎಂದೋ ತರ್ಪಣ ನೀಡಲಾಗಿದೆ” ಎಂದರು.

ನಾವೆಲ್ಲಾ ಮೂಲ ಜೆಡಿಎಸ್ ನಿಂದ ಬಂದವರೇ. ಹಾಗಂತ ಈಗ ನಾವು ಜೆಡಿಎಸ್ ನವರೆಂದು ಹೇಳಲಿಕ್ಕಾಗದು ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಂ ಭ್ರಷ್ಟ ಎನ್ನಲಾರೆ: ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಕಾರಣದಿಂದ ಬದಲಿಸಿದ್ದು. ವಯಸ್ಸಿನ ಕಾರಣದಿಂದ ಅಲ್ಲ. ಯಡಿಯೂರಪ್ಪಗೆ 75 ತುಂಬಿ ಬಹಳ ದಿನವಾಗಿತ್ತು. ಈಗ ಬೊಮ್ಮಾಯಿ ಮುಖ್ಯಮಂತ್ರಿ, ಅವರ ನಡೆಯನ್ನು ಮುಂದಿನ ದಿನಗಳಲ್ಲಿ ನೋಡೋಣ ಎಂದರು.

ಕೆಪಿಸಿ ಜೊತೆ ಸಭೆ: ಕೆಪಿಸಿ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ, ದೇಶಪಾಂಡೆ ಸಭೆ ನಡೆಸಿದರು. ಆರ್.ವಿ.ದೇಶಪಾಂಡೆ ,ಮಾಜಿ ಶಾಸಕ ಸೈಲ್ , ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next