Advertisement
ಸೋಮವಾರ ಬೆಂಗಳೂರಿಗೆ ಬಂದಿಳಿಯುವ ಸಿಂಘ್ವಿ, ರಾಜ್ಯ ಪಾಲರು ಪ್ರಾಸಿಕ್ಯೂಷನ್‌ಗೆ ಅನು ಮತಿ ನೀಡಿರುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದರೊಂದಿಗೆ ಕಾನೂನು ಹೋರಾಟಕ್ಕೆ ಚಾಲನೆ ದೊರೆಯಲಿದೆ. ಇದಕ್ಕಾಗಿ ಅಗತ್ಯ ದಾಖಲೆಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ. ಹೀಗಾಗಿ ಪ್ರಬಲವಾಗಿ ವಾದ ಮಂಡಿಸಲು ಎಲ್ಲ ರೀತಿಯಲ್ಲೂ ಸಜ್ಜಾಗಲಾಗಿದೆ ಎಂದು ಮೂಲಗಳು ತಿಳಿಸಿವೆ.ಹೈಕಮಾಂಡ್ ಸೂಚನೆಯಂತೆ ಸಿಂಘ್ವಿ ಆಗಮನ ರಾಜ್ಯಪಾಲರು ಶೋಕಾಸ್ ನೋಡಿದ ಅನಂತರ ಸಿಎಂ-ಡಿಸಿಎಂ ದಿಲ್ಲಿಗೆ ತೆರಳಿದ್ದರು. ಈ ವೇಳೆ ಹಿರಿಯ ವಕೀಲರು, ಕಾನೂನು ತಜ್ಞರಾದ ಕಪಿಲ್ ಸಿಬಲ್, ಸಿಂಘ್ವಿ ಹಾಗೂ ಇತರರನ್ನು ಭೇಟಿಯಾಗಿ ಪ್ರಕರಣ ಕುರಿತು ವಿವರಣೆ ನೀಡಿ ಸಲಹೆ ಪಡೆದಿದ್ದರು. ಇದಲ್ಲದೆ ಹೈಕಮಾಂಡ್‌ಗೂ ಮಾಹಿತಿ ನೀಡಿದ್ದರು. ಪಕ್ಷದ ಸೂಚನೆಯಂತೆ ಅಭಿಷೇಕ್ ಮನು ಸಿಂಘ್ವಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಗೌರ್ನರ್ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ನಮ್ಮದೇನಿದ್ದರೂ ಸದ್ಯ ಕಾದು ನೋಡುವುದಷ್ಟೇ, ಸೋಮವಾರ ಆಗುವ ಬೆಳವಣಿಗೆ ಆಧರಿಸಿ ಮುಂದೇನು ಮಾಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ದೂರುದಾರ ಟಿ.ಜೆ. ಅಬ್ರಹಾಂ ಹೇಳಿದ್ದಾರೆ.