Advertisement

ದೇವೇಗೌಡರ ಕಾಲದಿಂದಲೂ ಕಣ್ಣೀರು ನಾಟಕವಾಡಿ ಜನರನ್ನು ಸೆಳೆಯುವ ಜೆಡಿಎಸ್: ಸಿದ್ದರಾಮಯ್ಯ

04:55 PM Oct 04, 2020 | keerthan |

ಬೆಂಗಳೂರು: ಜೆಡಿಎಸ್ ನವರು ಯಾವತ್ತೂ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ. ಅವರು ಬೇರೆಯವರ ಕುದುರೆ ಮೇಲೆ ಏರಿ ಬಂದು ಅಧಿಕಾರಕ್ಕೆ ಬರುವವರು. ನನ್ನ ಪ್ರಕಾರ ಅದು ರಾಜಕೀಯ ಪಕ್ಷವೇ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಕಣ್ಣೀರು ಹಾಕಿ ಭಾವನಾತ್ಮಕವಾಗಿ ಜನರ ಸೆಳೆಯುವ ಕೆಲಸ ಮಾಡಬಾರದು. ಅವರ ನಾಟಕ ದೇವೇಗೌಡರ ಕಾಲದಿಂದಲೂ ಇದೆ. ಅದನ್ನು ಕುಮಾರಸ್ವಾಮಿ ಅದನ್ನೆ ಮುಂದುವರೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ. ಬಿಜೆಪಿ ಜೊತೆ ನೇರ ಹೋರಾಟ ನಮ್ಮದು. ಕೆಲವು ಸಾರಿ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಎಚ್ಚರ ಇರಬೇಕು. ಎಲ್ಲರೂ ಸೇರಿ ಅವರಿಬ್ಬರನ್ನು ಸೊಲಿಸಬೇಕು ಎಂದು ಕ್ಷೇತ್ರದ ನಾಯಕರಿಗೆ ಕರೆ ನೀಡಿದರು.

ಇದನ್ನೂ ಓದಿ:ಹೊಸಬರು ಹಳಬರು ಎಂದಿಲ್ಲ, ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಬೇಕು: ಡಿಕೆ ಶಿವಕುಮಾರ್

ಎರಡೂ ಕ್ಷೇತ್ರಗಳಿಗೆ ಇನ್ನೂ ಎರಡೂ ವರೆ ವರ್ಷ ಅವಧಿ ಇತ್ತು. ಶಿರಾದಲ್ಲಿ ಸತ್ಯಾನಾಯಣ ಅವರ ಅಕಾಲಿಕ ಮರಣದಿಂದ ಈಗ ಉಪ ಚುನಾವಣೆ ಎದುರಾಗಿದೆ. ಕಳೆದ ಬಾರಿ ಜಯಚಂದ್ರ 10 ಸಾವಿರ ಮತಗಳ ಅಂತರದಿಂದ ಸೋಲು ಅನುಭಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಯಡಿಯೂರಪ್ಪ ಆರಂಭದಲ್ಲಿ ಸಿಎಂ ಆದರೂ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ನಂತರ ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ಮಾಡಿದೆವು. ಕುಮಾರಸ್ವಾಮಿಗೆ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಯಡಿಯೂರಪ್ಪ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ನೂರಾರು ಕೋಟಿ ಖರ್ಚು ಮಾಡಿ ಪಕ್ಷಕ್ಕೆ ಸೆಳೆದುಕೊಂಡರು. ಅವರು ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿದ್ದಾರೆ. ಅವರು ಇನ್ನೂ ಎರಡುವರೆ ವರ್ಷ ಇರುತ್ತೇವೆ ಎಂದುಕೊಂಡಿದ್ದಾರೆ ಎಂದರು.

Advertisement

ನಮಗೆ ಈ ಉಪ ಚುನಾವಣೆ ಅಗತ್ಯವಿರಲಿಲ್ಲ. ಬಹಳ ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಶಿರಾ ಬಾರ್ ಅಸೋಸಿಯೇಷನ್ ನ 90ಕ್ಕೂ ಹೆಚ್ಚು ವಕೀಲರು ಕಾಂಗ್ರೆಸ್ ಸೇರಿರುವುದು ಒಳ್ಳೆಯ ಬೆಳವಣಿಗೆ.  ಶಿರಾಗೆ ಜಿಲ್ಲಾ ನ್ಯಾಯಾಲಯ ಮಾಡಬೇಕು ಎಂಬ ಬೇಡಿಕೆಗೆ ನಾವು ಮತ್ತೆ ಅಧಿಕಾರಕ್ಕೆ ಬರುವ ಲಕ್ಷಣ ಇದೆ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next