ಬೆಂಗಳೂರು: ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆಯ ಸಿಎಂ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತಾನಾಡಿರುವ ಅವರು, ಯಾಕೆ, ವಿರೋಧ ಪಕ್ಷದಲ್ಲಿದ್ದಾಗ ಏನ್ ಮಾಡುತ್ತಾ ಇದ್ರಿ?
ಕಡ್ಲೆಪುರಿ ತಿಂತಾ ಇದ್ರಾ? ದಾಖಲೆ ಇದ್ದರೆ ಹೇಳಬೇಕಿತ್ತಲ್ಲಾ? ನಮ್ಮ ಕಾಲದ ನೇಮಕಾತಿ ಬಗ್ಗೆ ತನಿಖೆ ಮಾಡಿಸಿ. ಯಾಕೆ ಸುಮ್ಮನಿದ್ರಿ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆಯಲ್ಲಿ ಮಹತ್ವದ ಸುಳಿವು
ಆ ಸಮಯದಲ್ಲಿ ಯಾಕೆ ಮಾತಾಡಿಲ್ಲ? ನನ್ನ ಉಳಿಸೋಕೆ ಮಾತಾಡಿರಲಿಲ್ವಾ? ಎಂದು ಸಿಎಂ ಹೇಳಿಕೆಗೆ ಸವಾಲು ಹಾಕಿದರು.
ಪಿಎಸ್ ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾಮಾಡಬೇಕು. ಸದನಕ್ಕೆ ಗೃಹ ಸಚಿವರು, ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.