Advertisement
ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಬಾಯಿಯಿಂದ ಸರ್ಕಾರ ಸುಳ್ಳು ಹೇಳಿಸಿದೆ. ನಮ್ಮ ಸರ್ಕಾರದ ಸಾಧನೆಗಳನ್ನೇ ಪುನರುಚ್ಚಾರ ಮಾಡಿಸಿದ್ದಾರೆ. ಭಾಷಣಕ್ಕೆ ಗೊತ್ತು ಗುರಿ ಏನೂ ಇಲ್ಲ. ಇನ್ನು ಎರಡು ವರ್ಷ ಇದೆ, ಒಂದು ದೂರದೃಷ್ಟಿ ಇರಬೇಕು. ಆದರೆ ಯಾವುದೇ ದೂರ ದೃಷ್ಟಿಯಿಲ್ಲ ಎಂದು ಟೀಕಿಸಿದರು.
Related Articles
Advertisement
ಇದನ್ನೂ ಓದಿ: ರಾಜಕಾರಣ ಎಲ್ಲಿಗೆ ಹೋಗಿ ನಿಂತಿದೆ..? ನನ್ನ ಕಾಪಾಡುವಲ್ಲಿ ಯಡಿಯೂರಪ್ಪ ವಿಫಲ: ವಿಶ್ವನಾಥ್ ಬೇಸರ
ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡ್ತಾರೆ. ಇವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಬೆಳಗಾವಿಯಲ್ಲಿ ಎರಡು ಬಾರಿ ಅಧಿವೇಶನ ಮಾಡಬೇಕಿತ್ತು. ಸುವರ್ಣ ಸೌಧ ಕಟ್ಟಿಸಿರೊದು ಯಾಕೆ? ಇವರಿಗೆ ಬದ್ಧತೆ ಇಲ್ಲ. ನಾವಿದ್ದಾಗ ಐದು ವರ್ಷ ಅಲ್ಲಿ ಅಧಿವೇಶನ ಮಾಡಿದ್ದೆವು. ಉತ್ತರ ಕರ್ನಾಟಕದ ಜನರಿಗೆ ಮಾಡಿದ ದ್ರೋಹ ಇದು. ನಾನು ಇಲಾಖೆಗಳನ್ನು ಸ್ಥಳಾಂತರ ಮಾಡಲು ಆದೇಶ ಮಾಡಿದ್ದೆ. ಅದನ್ನು ಪಾಲನೆ ಮಾಡಿಲ್ಲ ಎಂದರು.
ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ: ಮಹಾರಾಷ್ಟ್ರದ ಸಿಎಂ ಉದ್ಧಟತನದಿಂದ ಮಾತನಾಡುತ್ತಾರೆ. ಅವರು ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಮಹಾಜನ ವರದಿ ಅಂತಿಮ. ಈಗ ಗಡಿ ಸಮಸ್ಯೆಯೇ ಇಲ್ಲ. ಆದರೆ ಅವರು ತಮ್ಮ ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ. ಅವರ ಉದ್ಧಟತನ ಸಹಿಸುವುದಿಲ್ಲ ಎಂದರು.
ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ನಿಲ್ಲಿಸುತ್ತೇವೆ. ಆತ್ಮಸಾಕ್ಷಿಯಾಗಿ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಸೋಲು -ಗೆಲುವು ಮುಖ್ಯವಲ್ಲ ಎಂದ ಅವರು, ಜೆಡಿಎಸ್ ನವರು ಜಾತ್ಯತೀತ ಪಕ್ಷ ಎಂದು ಹೇಳುತ್ತಾರೆ. ಇದೀಗ ಏನು ಎಂದು ಎಲ್ಲರಿಗೂ ಗೊತ್ತಾಗಿದೆ ಎಂದರು.