Advertisement

ಬಿಜೆಪಿ ಸರ್ಕಾರವು ಬಂಡವಾಳಶಾಯಿ ಕೈಗೊಂಬೆ: ಸಿದ್ದರಾಮಯ್ಯ ಆರೋಪ

12:17 PM Sep 02, 2021 | Team Udayavani |

ಬೆಂಗಳೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಉದ್ಯಮಿಗಳ 7 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಆ ಪೈಕಿ ಅದಾನಿ ಅವರದ್ದೇ 4.50 ಲಕ್ಷ ಕೋಟಿ ರೂ. ಎನ್ ಪಿಎ ಇದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜಗತ್ತಿನ ಅಭಿವೃದ್ದಿ ಹೊಂದುವ ವೇಗದ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಈಗ 193 ದೇಶಗಳ ಸಾಲಿನಲ್ಲಿ 164 ನೇ ಸ್ಥಾನ ಗಳಿಸಿದೆ. ಭಾರತಕ್ಕಿಂತ ಬಾಂಗ್ಲಾ ಜಿಡಿಪಿ ಏರುತ್ತಿದೆ. ಬಿಜೆಪಿ ಸರ್ಕಾರ ಕಾರ್ಪೊರೇಟ್ ಕುಳಗಳನ್ನು ಬದುಕಿಸಲು ಟೊಂಕ ಕಟ್ಟಿ ನಿಂತಿದೆ. ಅದಕ್ಕಾಗಿ ದೇಶದ ಆಸ್ತಿ ಮಾರಾಟ ಮಾಡಲಾಗುತ್ತಿದೆ ಎಂದರು.

ಇದನ್ನೂ ಓದಿ:ಗೋವು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು: ಗೋ ಹತ್ಯೆಗೆ ಕಠಿಣ ಶಿಕ್ಷೆ; ಅಲಹಾಬಾದ್ ಹೈಕೋರ್ಟ್

7 ವರ್ಷದಲ್ಲಿ ಪೆಟ್ರೊಲ್, ಡೀಸೆಲ್, ಅಡುಗೆ ಅನಿಲದಿಂದ ಹೆಚ್ಚುವರಿ ತೆರಿಗೆ 22 ಲಕ್ಷ ಕೋಟಿ ಸಂಗ್ರಹವಾಗಿದೆ. ಕರ್ನಾಟಕದಿಂದ 1.20 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಕಾಂಗ್ರೆಸ್ ಸರ್ಕಾರ ಮಾಡಿದ್ದ ಸಾಲ ತೀರಿಸಬೇಕು ಅಂದಿದ್ದರು. ಆದರೆ ಸಾಲ ಇದ್ದದ್ದು 7 ಲಕ್ಷ ಕೋಟಿ, ಹೆಚ್ಚುವರಿ ತೆರಿಗೆ ಸಂಗ್ರಹ ಆಗುದ್ದು 22 ಲಕ್ಷ ಕೋಟಿ. ಈಗಲಾದರೂ ತೆರಿಗೆ ಕಡಿಮೆ ಮಾಡಿ ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದರು.

ಅಗತ್ಯ ವಸ್ತುಗಳ ಬೆಲೆ ಯದ್ವಾತದ್ವಾ ಹೆಚ್ಚಾಗಿದೆ. ಇಷ್ಟಾದರೂ ಅಚ್ಛೇ ದಿನ್ ಎನ್ನುತ್ತಿದ್ದಾರೆ. ಮೋದಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಣ ಕೊಡದೆ ಕೆಲಸವಿಲ್ಲ: ರಾಜ್ಯದಲ್ಲಿ ಭ್ರಷ್ಟಾಚಾರ ಅತಿಯಾಗಿದೆ. ಬೆಂಗಳೂರಿನಲ್ಲಿ ಉಪ್ಪರಪೇಟೆ ಠಾಣೆಗೆ ಇನ್ಸ್ ಪೆಕ್ಟರ್ ಪೋಸ್ಟಿಂಗ್ ಗೆ 1 ಕೋಟಿ ರೂ. ವರೆಗೆ ಪಡೆಯುತ್ತಿದ್ದಾರೆ. ಹಣ ಕೊಡದೆ ಏನು ಕೆಲಸ ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜನತೆ ಸಂಕಲ್ಪ ಮಾಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next