Advertisement

ರಾಜ್ಯದಲ್ಲಿರುವುದು ಭಂಡ ಸರ್ಕಾರ: ಸಿದ್ದರಾಮಯ್ಯ ವಾಗ್ದಾಳಿ

05:37 PM Aug 02, 2022 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಪ್ರವಾಹ ಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಈ ವೇಳೆಗೆ ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ ಇದೊಂದು ಭಂಡ ಸರ್ಕಾರವಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Advertisement

ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ದಿನಗಳಲ್ಲಿ ಕರಾವಳಿಯಲ್ಲಿ ಮೂರು ಕೊಲೆಗಳಾಗಿವೆ. ಗುಪ್ತದಳ ಸಿಎಂ ಅಧೀನದಲ್ಲೇ ಇದ್ದು, ಗುಪ್ತಚರ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದ್ದು ಇದರ ನೈತಿಕ ಹೊಣೆ ಸಿಎಂ, ಕಾನೂನು ಸುವ್ಯವಸ್ಥೆ ವೈಫಲ್ಯದ ಹೊಣೆ ಗೃಹ ಸಚಿವರು ಹೊರಬೇಕಲ್ಲವೇ ಎಂದು ಪ್ರಶ್ನಿಸಿದರು.

ಸಂಘ ಪರಿವಾರದವರು, ಬಿಜೆಪಿ ಕಾರ್ಯಕರ್ತರೇ ಸರಕಾರದ ವಿರುದ್ದ ಬೀದಿಗಿಳಿದಿದ್ದು, ಈ ಸರಕಾರಕ್ಕೆ ನಾಚಿಕೆ ಆಗಬೇಕು ಎಂದರು.

ಪಿಎಫ್ಐ, ಎಸ್ ಡಿಪಿಐ ವಿರುದ್ದ ಸಾಕ್ಯಾಧಾರಗಳಿದ್ದರೆ ಅವುಗಳನ್ನು ನಿಷೇಧಿಸಲಿ ಅದಕ್ಕೆಅಡ್ಡಿ ಪಡಿಸಿದರವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದನ್ನೂ ಓದಿ:ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಎಚ್‌ಡಿಕೆ ಆಕ್ರೋಶ

Advertisement

ಎರಡು ಸಂಘಟನೆಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂದು ಬಿಜೆಪಿ ಆರೋಪಿಸುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಮತ ವಿಭಜನೆಯಾಗಿ ಬಿಜೆಪಿಗೆ ಲಾಭವಾಗುತ್ತಿದೆ ಎಂಬ ಉದ್ದೇಶದಿಂದ ಅವುಗಳನ್ನು ನಿಷೇಧಿಸುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.

ನಾನು ಸಿಎಂ ಆಗಿದ್ದಾಗ ಒಟ್ಟು 23 ಜನರ ಕೊಲೆಯಾಗಿತ್ತು ಅದರಲ್ಲಿ 12 ಜನ ಮುಸ್ಲಿಮರು ಆಗಿದ್ದರು ನಾನು ಎಲ್ಲರ ಮನೆಗೂ ಹೋಗಿ ಸಾಂತ್ವನ ಹೇಳಿದ್ದೆ. ಕೊಲೆಯಾದ ಕುಟುಂಬಕ್ಕೆ ಪರಿಹಾರ ಇರಲಿಲ್ಲ, ಅದನ್ನು ಬಿಜೆಪಿಯವರು ಆರಂಭಿಸಿದ್ದು, ಅದರಲ್ಲೂ ತಾರತಮ್ಯ ಮಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ಪರಿಹಾರಲ್ಲೂ ತಾರತಮ್ಯ ತೋರಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮಿಷನ್-150 ಬಗ್ಗೆ ಪ್ರತಿಕ್ರಿಸಿದ ಅವರು, ಈ ಹಿಂದೆ ವಾಜಪೇಯಿ ಅವರ ಇಂಡಿಯಾ ಶೈನಿಂಗ್ ಏನಾಯಿತು ಎಂದರಲ್ಲದೆ, ರಾಜ್ಯದಲ್ಲಿ ನಾಳೆಯೇ ಚುನಾವಣೆ ನಡೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.  ನಾಳೆ ದಾವಣಗೆರೆಯಲ್ಲಿ ನಡೆಯುತ್ತಿರುವುದು ನನ್ನ ಜನ್ಮ ದಿನದ ಅಮೃತ ಮಹೋತ್ಸವವಷ್ಟೇ, ಸಿದ್ದಾರಾಮೋತ್ಸವ ಅಲ್ಲ ಎಂದರು.

ರಾಹುಲ್ ಗಾಂಧಿ ಅವರು ಹುಬ್ಬಳ್ಳಿಯಲ್ಲಿ ರಾಜ್ಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ನಡೆಯಲಿದೆ. ರಾಜ್ಯದ ಪ್ರಸ್ತುತ ರಾಜಕೀಯ, ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಜ್ವರದಿಂದಾಗಿ ಕೆ.ಎಚ್.ಮುನಿಯಪ್ಪ ಅವರು ಪಾಲ್ಗೊಳ್ಳುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next