ಬೆಂಗಳೂರು: ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟಿರುವವರು. ಯಾರದ್ದೇ ಕೊಲೆಯಾದರೂ ಕಠಿಣ ಶಿಕ್ಷೆಯಾಗಬೇಕು. ಕೊಲೆ ಖಂಡಿಸುತ್ತೇವೆ. ಹರ್ಷ ಎನ್ನುವ ಯುವಕನ ಕೊಲೆಯಾಗಿದೆ. ತಪ್ಪಿತಸ್ತರು ಯಾರೇ ಇರಲಿ, ಯಾವುದೇ ಸಂಘಟನೆ ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಅದೇ ಜಿಲ್ಲೆಯವರು. ಸರ್ಕಾರ ಜವಾಬ್ದಾರರಲ್ವಾ? ಗೃಹ ಸಚಿವರು, ಈಶ್ವರಪ್ಪ ಜವಾಬ್ದಾರರಲ್ಲವೇ? ಇಂತಹ ವಿಚಾರದಲ್ಲಿ ಕಾಂಗ್ರೆಸ್ ಅಂತ ಹೇಳಬಾರದು ಎಂದರು.
ಮೊದಲು ಬಂಧಿಸಿ, ತಪ್ಪಿತಸ್ತರು ಯಾರು ಅಂತ ಮೊದಲು ಪತ್ತೆ ಮಾಡಲಿ. ಕಾಂಗ್ರೆಸ್, ಎಸ್ ಡಿಪಿಐ ಎಂದು ಹೇಳಬಾರದು, ಯಾರೇ ಆದರೂ ಪತ್ತೆ ಹಚ್ಚು ಶಿಕ್ಷೆ ನೀಡಲಿ ಎಂದರು.
ಅಧಿವೇಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ರಾಷ್ಟ್ರ ಧ್ವಜಕ್ಕೆ ಅಪಮಾನ ಆಗಿದೆ. ಹೇಗಿದ್ರೂ ಧರಣಿ ಮಾಡುತ್ತಾರೆಂದು ಅವರಿಗೆ ಗೊತ್ತಿದೆ. ಬಿಟ್ ಕಾಯಿನ್, ಬೇರೆ ಬೇರೆ ವಿಚಾರ ಚರ್ಚೆ ಮಾಡಬಹುದಿತ್ತು. ಇಡೀ ಭಾರತ ದೇಶದ ಗೌರವದ ಸಂಕೇತ. ಅದಕ್ಕೆ ಅವಮಾನ ಮಾಡಿದಾಗ ಸುಮ್ಮನೆ ಕೂರಲಾಗದು ಎಂದರು.
ಜೆಡಿಎಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ಅಸೆಂಬ್ಲಿಗೆ ಸರಿಯಾಗಿ ಬರಲ್ಲ. ಅವರು ಮಾಡಲಿ, ನಮ್ಮ ತಕರಾರಿಲ್ಲ. ಅವರಿಗೆ ಅವಕಾಶ ತಪ್ಪಿಸಬೇಕೆಂದು ನಾವು ಪ್ರತಿಭಟನೆ ಮಾಡಿಲ್ಲ. ನಾವು ಅಧಿಕೃತ ವಿರೋಧ ಪಕ್ಷ, ನಾವು ಚರ್ಚೆ ಮಾಡುತ್ತಿದ್ದೆವೆ ಎಂದರು.