ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ವಲಸೆ ಹಕ್ಕಿ. ಒಂದು ಸಿದ್ಧಾಂತದಿಂದ ಮತ್ತೂಂದು ಸಿದಾಟಛಿಂತಕ್ಕೆ , ಪಕ್ಷದಿಂದ ಪಕ್ಷಕ್ಕೆ, ಒಂದು ಕ್ಷೇತ್ರದಿಂದ ಮತ್ತೂಂದು ಕ್ಷೇತ್ರಕ್ಕೆ ವಲಸೆ ಹೋಗುತ್ತಲೇ ಇರುತ್ತಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಜನರ ವಿಶ್ವಾಸ ಕಳೆದುಕೊಂಡಿರುವ ಸಿದ್ದರಾಮಯ್ಯ ಅವರು ಆತ್ಮವಿಶ್ವಾಸ ಕಳೆದುಕೊಂಡು ಎರಡನೇ ಕ್ಷೇತ್ರ ಆರಿಸಿಕೊಂಡಿದ್ದಾರೆ. ಅವರೇ ಎಲ್ಲೇ ಹೋದರೂ ಜನರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎರಡೂ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲಿ ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪಾಗಿದ್ದು ಆನಾಥ ಪ್ರಜ್ಞೆಯಿಂದ ಇದ್ದಾರೆ.ಹೈಕಮಾಂಡ್ ವಲಸಿಗರ ಮಾತು ಕೇಳುವಂತಾಗಿದೆ. ಬಿಜೆಪಿ ಅಖಂಡವಾಗಿರುವ ಏಕೈಕ ಪಕ್ಷ, ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ವಾಗ್ಧಂಡನೆ ವಿಧಿಸುವ ಸಂಬಂಧ ಚರ್ಚಿಸಲು ಅವಕಾಶ ನೀಡುವಂತೆ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ಸಂಸದರು ನೋಟಿಸ್ ನೀಡಿರುವುದು ದುರದೃಷ್ಟಕರ. ಸಂವಿಧಾನದ ಪಾವಿತ್ರ್ಯತೆ ಕಾಪಾಡಿ ಬಲಪಡಿಸಬೇಕಾದ ಸಂಸದರು ಇಂತಹ ಕೆಲಸಕ್ಕೆ ಮುಂದಾಗಿರುವುದು ದುರಂತ.
– ಅನಂತಕುಮಾರ್, ಕೇಂದ್ರ ಸಚಿವ