Advertisement
ವರುಣಾ ಕ್ಷೇತ್ರವನ್ನು ಖಚಿತಪಡಿಸಿಕೊಂಡ ಮೇಲೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸುತ್ತಿದ್ದು, ಕೋಲಾರದಿಂದ ಸ್ಪರ್ಧಿಸಲು ತಮಗೆ ಮ® ಸಿದೆ, ಆದರೆ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಇದೀಗ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರವು ಹೈಕಮಾಂಡ್ ಅಂಗಳವನ್ನು ತಲುಪಿದ್ದು, ಮಂಗಳವಾರ ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಈ ವಿಚಾರವನ್ನು ಖುದ್ದು ರಾಹುಲ್‌ಗಾಂಧಿಯವರೇ ಇತ್ಯರ್ಥಪಡಿಸಲಿದ್ದಾರೆ.
Related Articles
ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರ ಖಚಿತಗೊಂಡಿದ್ದು ಸಹಜವಾಗಿಯೇ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿ ಗರ ಸಮಾಧಾನಕ್ಕೆ ಕಾರಣವಾಗಿದ್ದರೆ, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಗುಂಪಿಗೆ ರಾಜಕೀಯವಾಗಿ ಇರುಸುಮುರುಸು ಉಂಟು ಮಾಡಿತ್ತು. ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆ ತಂದೇ ತರುತ್ತೇವೆಂದು ಬೀಗುತ್ತಿದ್ದವರಿಗೆ ಮುಖಭಂಗವ ನ್ನುಂಟು ಮಾಡಿದಂತಾಗಿತ್ತು.
Advertisement
ಈಗ ಶತಾಯಗತಾಯ ಸಿದ್ದರಾಮಯ್ಯರನ್ನು ಕೋಲಾರದಿಂದ ಎರಡನೇ ಕ್ಷೇತ್ರವಾಗಿಯಾದರೂ ಸ್ಪರ್ಧಿಸುವಂತೆ ಮಾಡಲೇಬೇಕೆಂದು ರಮೇಶ್‌ಕುಮಾರ್ ತಂಡ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಸತ್ಯಮೇವ ಜಯತೇ ಜೈ ಭಾರತ್ ಪೂರ್ವಭಾವಿ ಸಮಾವೇಶದಲ್ಲಿಯೂ ರಾಜ್ಯ ಉಸ್ತುವಾರಿ ರಣದೀಪ್ ಸುಜೇìವಾಲಾರನ್ನು 15 ನಿಮಿಷಗಳ ಕಾಲ ಮೈಕ್ ಮುಂದೆ ನಿಲ್ಲಿಸಿ ಸಿದ್ದರಾಮಯ್ಯ ಅಭಿಮಾನಿಗಳು ಘೋಷಣೆಗಳನ್ನು ಕೂಗಿದ್ದರು. ಆಗಲೂ ಕೆ.ಎಚ್.ಮುನಿಯಪ್ಪ ತಂಡ ಮೌನಪ್ರೇಕ್ಷಕ ಸ್ಥಾನದಲ್ಲಿತ್ತು.
ಇದರ ಮುಂದುವರಿದ ಭಾಗವಾಗಿ ಶ್ರೀನಿವಾಸಪುರ ಕುರುಬ ಸಮುದಾಯದ ಸಭೆಯಲ್ಲಿ ಸಿದ್ದರಾಮಯ್ಯರನ್ನು ಅವಗಣಿಸಿದರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಗತಿಯೇ ಆಗುತ್ತದೆಯೆಂಬ ಎಚ್ಚರಿಕೆಯನ್ನು ರಮೇ ಶ್ ಕು ಮಾರ್ ನೀಡಿದ್ದರು. ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಮೇಶ್‌ಕುಮಾರ್ ಮತ್ತವರ ತಂಡದ ಸದಸ್ಯರು ಸಿದ್ದರಾ ಮಯ್ಯ ಕೋಲಾರದಿಂದ ಸ್ಪರ್ಧಿಸಿಯೇ ತೀರುತ್ತಾರೆಂಬ ಆದಮ್ಯ ವಿಶ್ವಾಸವನ್ನು ಇಂದಿಗೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕೆ.ಎಚ್.ಮುನಿಯಪ್ಪ ತಂಡವು ಇದು ತಮಗೆ ಸಂಬಂಧಪಟ್ಟಿದ್ದಲ್ಲ ಎಂಬಂತೆ ದೇವನಹಳ್ಳಿಯತ್ತ ಚಿತ್ತ ಹರಿಸಿ ಓಡಾಡುತ್ತಿದೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ನಾಲ್ಕೈದು ತಿಂಗಳ ವಿವಾದ ಇತ್ಯರ್ಥವಾದಂತೆಯೇ, ಬಹುಶಃ ಸಿದ್ದರಾಮಯ್ಯರಿಗೆ ಹೈಕಮಾಂಡ್ ಕೋಲಾರದಿಂದ ಎರಡನೇ ಕ್ಷೇತ್ರವಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸದಿದ್ದರೆ ಮತ್ಯಾರಿಗೆ ಅವಕಾಶ ಎಂಬ ವಿಚಾರವು ಸದ್ಯಕ್ಕೆ ಚಾಲ್ತಿಯಲ್ಲಿದೆ.
ಸಿದ್ದರಾಮಯ್ಯ ಅಲ್ಲದಿದ್ದರೆ ಕೋಲಾರದಿಂದ ಕೊತ್ತೂರು ಮಂಜುನಾಥ್ ಸ್ಪರ್ಧಿಸಬೇಕೆಂದು ರಮೇಶ್‌ಕುಮಾರ್ ತಂಡವು ಬಯಸುತ್ತಿದೆ. ಆದರೆ, ಕೆ.ಎಚ್.ಮುನಿಯಪ್ಪ ತಂಡವು ಸಿ.ಆರ್.ಮನೋಹರ್, ಎ.ಶ್ರೀನಿವಾಸ್‌ರಿಗೆ ಟಿಕೆಟ್ ಸಿಗಬೇಕೆಂದು ಪ್ರಯತ್ನಿಸುತ್ತಿದೆ. ಇವರಿಬ್ಬರ ಪ್ರಯತ್ನದ ನಡುವೆ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಮ್ಮದೇ ಮಾರ್ಗದಲ್ಲಿ ಕೋಲಾರ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.
ಕೋಲಾರ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ವಿಚಾರವು ಮಂಗಳವಾರ ದಿಲ್ಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಸ್ಕ್ರೀನಿಂಗ್‌ಕಮಿಟಿ ಸಭೆಯಲ್ಲಿ ಇತ್ಯರ್ಥವಾಗಲಿದೆ. ಕೋಲಾರ ದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೋ ಇಲ್ಲ ರಮೇಶ್‌ಕುಮಾರ್ ತಂಡ ಮೇಲುಗೈ ಸಾಧಿಸುತ್ತದೋ, ಕೆ.ಎಚ್.ಮುನಿಯಪ್ಪ ಬಣ ಗೆಲ್ಲುತ್ತದೋ ಎಂಬುದಕ್ಕೂ ಉತ್ತರ ಸಿಗಲಿದೆ.
-ಕೆ.ಎಸ್.ಗಣೇಶ್