ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಟ್ವೀಟ್ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಬೆಂಗಳೂರಿನ ಸರ್ವಜ್ಞನಗರದಲ್ಲಿ ನಡೆದ ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನಂತೂ ಟ್ವೀಟ್ ಮಾಡಿಲ್ಲ. ನಮ್ಮ ಪಕ್ಷದ ಬೇರೆಯವರು ಟ್ವೀಟ್ ಮಾಡಿರಬೇಕು ಎಂದು ಹೇಳಿದರು.
ಸುರೇಶ್ ಗೌಡ ಯಾವ ಪಕ್ಷದವರು? ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿದ್ದವರು. ಅಂತಹವರು ಹೇಳಿಕೆ ನೀಡಿದ್ದಾರೆ ಅಲ್ಲವೇ ? ಅವರೇ ಹೇಳಿರೋವಾಗ ನಿಜವೆಂದು ನಂಬಬೇಕೋ ಸುಳ್ಳು ಎಂದುಕೊಳ್ಳಬೇಕೋ? ಸಾಮಾನ್ಯ ವ್ಯಕ್ತಿ ಹೇಳಿದರೆ ಓಕೆ, ತುಮಕೂರು ಜಿಲ್ಲಾಧ್ಯಕ್ಷ ಹೇಳಿರುವುದು ಅಲ್ಲವೆ? ಯತ್ನಾಳ್ ಕೂಡ ಸಿಎಂ ಬದಲಾವಣೆ ಬಗ್ಗೆ ಹೇಳಿದ್ದಾರೆ. ಅದಕ್ಕೆ ನಮ್ಮ ಪಕ್ಷದವರು ಟ್ವೀಟ್ ಮಾಡಿರಬೇಕು. ನಾನಂತೂ ಟ್ವೀಟ್ ಮಾಡಿಲ್ಲ ಎಂದರು.
ಇದನ್ನೂ ಓದಿ:ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”
ನನಗೆ ಯಡಿಯೂರಪ್ಪ ಬದಲಾಯಿಸುವಾಗ ಖಚಿತ ಮಾಹಿತಿ ಇತ್ತು. ಈಗ ಬಸವರಾಜ್ ಬೊಮ್ಮಾಯಿ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಅಂತರ ಕಾಯ್ದುಕೊಳ್ಳುವ ಯತ್ನವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದಾರೆ.