Advertisement
ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಎ ಎಂಬುದು ಪೌರತ್ವವನ್ನು ಕಿತ್ತುಕೊಳ್ಳುವ ಕಾಯ್ದೆಯಲ್ಲ. ಅದು ಪೌರತ್ವ ನೀಡುವ ಕಾಯ್ದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಈ ಹಿಂದೆ ಪಟೇಲರು, ಜಾಟರನ್ನು, ದಲಿತರನ್ನು ಎತ್ತಿಕಟ್ಟುವ ಕೆಲಸವಾಯಿತು. ಪ್ರಶಸ್ತಿ ವಾಪಸಾತಿ ನಾಟಕ ನಡೆಯಿತು. ಸಿಎಎ ಬಗ್ಗೆ ವಿರೋಧ ಮಾಡುವವರು ಇದು ಧರ್ಮಾಧಾರಿತ ಎಂದು ಆರೊಪ ಮಾಡುತ್ತಿದ್ದಾರೆ. ಇದು ದೇಶದ ಒಳಗಿನ ನಾಗರಿಕರನ್ನು ಗುರಿಯಾಗಿಸಿ ಮಾಡಿದ ಕಾನೂನಲ್ಲ. ದೇಶದ ಹೊರಗಿನಿಂದ ನಿರಾಶ್ರಿತರಾಗಿ ಬಂದವರಿಗೆ ಮಾತ್ರ ನೀಡಲು ಅವಕಾಶ ಕೊಡಲಾಗುತ್ತದೆ. ಒಳಗಿನ ನಾಗರಿಕರಲ್ಲಿ ಬೇಧ ಭಾವ ಮಾಡಲಾಗಿದ್ದರೆ ಅದು ಅಪವಾದ ಆಗುತ್ತಿತ್ತು ಎಂದರು.
Related Articles
Advertisement
ಇದು ಕೇವಲ ಕಾಂಗ್ರೆಸ್ ನಿಂದ ದೇಶ ಒಡೆಯುವ ಕೆಲಸವಾಗಿದೆ. ಸಿದ್ದರಾಮಯ್ಯ ಅಮಾಯಕರಲ್ಲ ರಮೇಶ್ ಕುಮಾರ್ ಏನೂ ಗೊತ್ತಿಲ್ಲದವರಲ್ಲ. ಇವರು ತಾತ್ಕಾಲಿಕ ಲಾಭಕ್ಕಾಗಿ ಈ ದೇಶ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ. ಇದು ಕೇವಲ ಹೋರಾಟವಲ್ಲ ಷಡ್ಯಂತ್ರ ನಡೆದಿದೆ.
ಅಮೇರಿಕಾ ಅಧ್ಯಕ್ಷರು ಭೇಟಿ ನೀಡುವಸಂದರ್ಭದಲ್ಲಿ ಈ ರೀತಿಯ ಷಡ್ಯಂತ್ರ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹಾಳು.ಮಾಡಲು ಪ್ರಯತ್ನ ನಡೆಸಿದ್ದಾರೆ. ಅಲ್ಲಿನ ದೌರ್ಜನ್ಯವನ್ನು ಮರೆ ಮಾಚುತ್ತಿದ್ದಾರೆ. 23% ರಷ್ಟಿದ್ದ ಹಿಂದುಗಳು 9% ಕ್ಕೆ ಹೇಗೆ ಇಳಿದಿದೆ. ಭಾರತದಲ್ಲಿ 8% ರಷ್ಟಿದ್ದ ಮುಸ್ಲಿಮರು 17% ರಷ್ಟಾಗಿದ್ದು ಹೇಗೆ ? ದೌರ್ಜನ್ಯಕ್ಕೊಳಗಾದವರ ಪರ ಯಾಕಿಲ್ಲ ನಿಮ್ಮ ಕಣ್ಣೀರು ? ಎಂದು ಪ್ರಶ್ನಿಸಿದರು.
ಸಮಾನ ನಾಗರಿಕರ ಸಂಹಿತೆ ಪಕ್ಷದ ಉದಯವಾದಾಗಿನಿಂದಲು ಹೇಳುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಈ ಅಂಶ ಇದೆ. ಅವರು ಸಮಾನತೆ ಬಯಸಿದ್ದಾರೆ, ನಾವೂ ಸಮಾನತೆ ಪರವಾಗಿದ್ದೇವೆ. ಹೀಗಾಗಿ ಸಮಾನ ನಾಗರಿಕತೆ ಜಾರಿಗೆ ಬರಲಿ. ದೇಶದ ಆರ್ಥಿಕ ಪರಿಸ್ಥಿತಿ ವಿಶ್ವದ 5ನೇ ಶಕ್ತಿಯಾಗಿದೆ.
ನೋಟು ಅಪನಗದೀಕರಣದ ನಂತರ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದಿದ್ದರು. ಮೊದಲು 80% ಬ್ಲಾಕ್. 20%. ವೈಟ್ ಅಂತಿದ್ರು ಈಗ ಎಲ್ಲವೂ ಉಲ್ಟಾ ಆಗಿದೆ. ಮನಮೋಹನ್ ಸಿಂಗ್ ಈಗಲಾದರೂ ಮಾತನಾಡಿದ್ದಾರೆ ಅನ್ನುವುದೇ ಸಂತೋಷ. ಅಂದೇ ಮಾತನಾಡಿದ್ರೆ ಇಷ್ಟೊಂದು ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದರು.
ಕ್ಯಾಸಿನೋ ಜಾರಿಯಿಲ್ಲ: ನಮ್ಮ ಸರ್ಕಾರದಲ್ಲಿ ಕ್ಯಾಸಿನೋ ಮಾಡುವ ಪ್ರಸ್ತಾಪವೇ ಇಲ್ಲ. ಅದನ್ನು ಜಾರಿಗೆ ತರುವ ಪ್ರಶ್ನೆಯು ಇಲ್ಲ. ನಾವು ಎಫ್ ಕೆಸಿಸಿಐ ಕಾರ್ಯಕ್ರಮದಲ್ಲಿ. ವಿಲೇಜ್ ಟೂರಿಸಂ, ಮಾನ್ಸೂನ್. ಟೂರಿಸಂ ಬಗ್ಗೆ ಮಾತನಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅದನ್ನು ತರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳಿದ್ದೇನೆ. ಪಕ್ಷದ ಒಳಗೆ.ಕ್ಯಾಸಿನೊ ಚರ್ಚೆಗೆ ಬಂದಿಲ್ಲ. ನಮ್ಮ. ಸರ್ಕಾರ ಕ್ಯಾಶಿನೋ.ಜಾರಿಗೆ ತರುವುದಿಲ್ಲ ಎಂಧು ಸ್ಪಷ್ಟಪಡಿಸಿದ್ದಾರೆ.